ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ವಿದೇಶಿ ಬ್ಯಾಂಕಲ್ಲಿ ಕಪ್ಪುಹಣ; ಖದೀಮರಲ್ಲಿ 5 'ಗಾಂಧಿ'ಗಳು (Black money | India | Bank of Lichtenstein | Swiss Bank accounsts)
ವಿದೇಶಿ ಬ್ಯಾಂಕುಗಳಲ್ಲಿ ಅಕ್ರಮವಾಗಿ ಕಪ್ಪುಹಣ ಕೂಡಿಟ್ಟಿರುವ ಭಾರತೀಯರ ಹೆಸರುಗಳನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದು ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರವು ಪಟ್ಟು ಹಿಡಿದಿರುವ ನಡುವೆಯೇ ಹಲವು ಖದೀಮರ ಹೆಸರುಗಳು ಬಯಲಾಗಿವೆ. ಇವುಗಳಲ್ಲಿ ಹಲವರ ಸರ್ ನೇಮ್‌ಗಳು 'ಗಾಂಧಿ'ಗಳೆಂದಿರುವುದು ಕುತೂಹಲ ಕೆರಳಿಸಿದೆ.

ನೆನಪಿಡಿ, ಇದರಲ್ಲಿರುವ ಯಾವ ಹೆಸರುಗಳೂ ಸ್ವಿಸ್ ಬ್ಯಾಂಕಿಗೆ ಸೇರಿದುವಲ್ಲ. ಬದಲಿಗೆ 2009ರ ಮಾರ್ಚ್ 18ರಂದು ಜರ್ಮನಿಯು ಭಾರತ ಸರಕಾರ ಹಸ್ತಾಂತರಿಸಿದ್ದ ದಾಖಲೆಯಲ್ಲಿರುವ, ಇತ್ತೀಚೆಗಷ್ಟೇ 'ಬಹಿರಂಗಪಡಿಸಲಾಗದು' ಎಂದು ಸರಕಾರ ಹೇಳಿದ್ದ ಖಾತೆದಾರರ ಹೆಸರುಗಳು. ಸರಕಾರವೇ ಹೇಳಿಕೊಂಡಿದ್ದ ಪ್ರಕಾರ ಜರ್ಮನಿಯು 26 ಖಾತೆಗಳ ವಿವರಗಳನ್ನು ಭಾರತಕ್ಕೆ ನೀಡಿತ್ತು.

ಈ 26 ಖಾತೆದಾರರಲ್ಲಿ 12 ಟ್ರಸ್ಟ್‌ಗಳೂ ಸೇರಿವೆ. ಅದರಲ್ಲಿ ನಾಲ್ಕು ಟ್ರಸ್ಟುಗಳು ಮಾತ್ರ ಭಾರತೀಯರಿಗೆ ಸೇರಿದುವು ಎಂದು ಹೇಳಲಾಗಿದೆ. ಈ ಟ್ರಸ್ಟ್‌ಗಳು ಸುಮಾರು 52 ಕೋಟಿ ರೂಪಾಯಿಗಳನ್ನು ಈ ಬ್ಯಾಂಕಲ್ಲಿ ಠೇವಣಿ ಇಟ್ಟಿವೆ. ಈ ಎಲ್ಲಾ ಖಾತೆಗಳಿರುವ ಬ್ಯಾಂಕಿನ ಹೆಸರು 'ಬ್ಯಾಂಕ್ ಆಫ್ ಲೈಚೆನ್‌ಸ್ಟೈನ್'.

ಖಾತೆದಾರರ ಹೆಸರುಗಳು ಇಂತಿವೆ:
1. ಮನೋಜ್ ದುಪೇಲಿಯಾ
2. ರೂಪಾಲ್ ದುಪೇಲಿಯಾ
3. ಮೋಹನ್ ದುಪೇಲಿಯಾ
4. ಹಸ್ಮುಖ್ ಗಾಂಧಿ
5. ಚಿಂತನ್ ಗಾಂಧಿ
6. ಈಶ್ವರಲಾಲ್ ಗಾಂಧಿ
7. ಮಧು ಗಾಂಧಿ
8. ಮಿರವ್ ಗಾಂಧಿ
9. ದಿಲೀಪ್ ಮೆಹ್ತಾ
10. ಅರುಣ್ ಮೆಹ್ತಾ
11. ಗುಣವತಿ ಮೆಹ್ತಾ
12. ರಜನಿಕಾಂತ್ ಮೆಹ್ತಾ
13. ಪ್ರಬೋದ್ ಮೆಹ್ತಾ
14. ಅರುಣ್ ಕೊಚ್ಚಾರ್
15. ಅಶೋಕ್ ಜೈಪುರಿಯಾ
16. ರಾಜ್ ಫೌಂಡೇಶನ್ (ಟ್ರಸ್ಟ್)
17. ಊರ್ವಶಿ ಫೌಂಡೇಶನ್ (ಟ್ರಸ್ಟ್)
18. ಅಂಬ್ರುನೋವಾ ಟ್ರಸ್ಟ್ (ಟ್ರಸ್ಟ್)
19. ಮರ್ಲಿನ್ ಮ್ಯಾನೇಜ್‌ಮೆಂಟ್ ಎಸ್ಎ (ಟ್ರಸ್ಟ್)
20. ಮರ್ನಿಚಿ ಟ್ರಸ್ಟ್ (ಟ್ರಸ್ಟ್)
21. ಸೊಕಾಲೋ ಸ್ಟಿಫ್ಟಂಗ್ (ಟ್ರಸ್ಟ್)

ಇವೆಲ್ಲ ಬೋಗಸ್ ಹೆಸರುಗಳು...
ಜಾರಿ ನಿರ್ದೇಶನಾಲಯದ ಮೂಲಗಳ ಪ್ರಕಾರ ಈ ಟ್ರಸ್ಟ್‌ಗಳು ಮತ್ತು ಇತರ ಹೆಸರುಗಳು ಬಹುತೇಕ ಬೋಗಸ್. ಪ್ರಭಾವಿ ವ್ಯಕ್ತಿಗಳು ಬೇನಾಮಿ ಖಾತೆಗಳನ್ನು ತೆರೆದು, ಭಾರೀ ಪ್ರಮಾಣದ ಹಣವನ್ನು ವಿದೇಶಿ ಬ್ಯಾಂಕುಗಳಲ್ಲಿ ಜಮಾವಣೆ ಮಾಡಿರುತ್ತಾರೆ.

ಲೈಚೆನ್‌ಸ್ಟೈನ್‌ನಲ್ಲಿ 14ಕ್ಕೂ ಹೆಚ್ಚು ಬ್ಯಾಂಕುಗಳಿದ್ದು, ಅಲ್ಲಿ ಗಣನೀಯ ಪ್ರಮಾಣದ ಭಾರತೀಯರು ಇಂತಹ ಖಾತೆಗಳನ್ನು ಹೊಂದಿದ್ದಾರೆ. ಜರ್ಮನಿಯ ಮುನಿಚ್‌ನಿಂದ 190 ಕಿಲೋ ಮೀಟರ್ ದೂರದಲ್ಲಿರುವ ತೆರಿಗೆ ವಂಚಕರ ಸ್ವರ್ಗ ಎಂದೇ ಪರಿಗಣಿಸಲಾಗಿರುವ ಲೈಚೆನ್‌ಸ್ಟೈನ್‌ನಲ್ಲಿ ಈ ಬ್ಯಾಂಕುಗಳ ಸರಪಣಿಯಿದೆ.

ಕುತೂಹಲ ಕೆರಳಿಸಿದ 'ಗಾಂಧಿ'ಗಳು...
ಒಟ್ಟು 26 ಖಾತೆಗಳಲ್ಲಿ ಸಾಕಷ್ಟು ಖಾತೆಗಳ ಹೆಸರುಗಳು ಬಹಿರಂಗವಾಗಿವೆ. ಅವುಗಳಲ್ಲಿ ಐದು ಖಾತೆದಾರರ ಹೆಸರುಗಳ ಉಪನಾಮಗಳು 'ಗಾಂಧಿ'ಗಳಾಗಿರುವುದು ಭಾರೀ ಕುತೂಹಲಕ್ಕೆ ಕಾರಣವಾಗಿದೆ.

ಹಸ್ಮುಖ್ ಗಾಂಧಿ, ಚಿಂತನ್ ಗಾಂಧಿ, ಈಶ್ವರಲಾಲ್ ಗಾಂಧಿ, ಮಧು ಗಾಂಧಿ, ಮಿರವ್ ಗಾಂಧಿ ಎಂಬ ಐದು ಹೆಸರುಗಳು ವಿದೇಶಿ ಬ್ಯಾಂಕಿನಲ್ಲಿ ಭಾರೀ ಹಣ ಇಟ್ಟಿರುವವರ ಪಟ್ಟಿಯಲ್ಲಿದೆ. ಈ 'ಗಾಂಧಿ'ಗಳು ಬಹುತೇಕ ನಕಲಿಗಳಾಗಿರಬಹುದು ಎಂದು ಶಂಕಿಸಲಾಗಿದೆ.

ಎರಡು ವರ್ಷಗಳ ಹಿಂದೆಯೇ ಭಾರತದ ಕೈ ಸೇರಿದ್ದ ಈ 26 ಖಾತೆದಾರರ ಹೆಸರು, ಅವರ ವಿಳಾಸ ಸೇರಿದಂತೆ ಸಂಪೂರ್ಣ ಮಾಹಿತಿ ಕೇಂದ್ರ ಸರಕಾರದ ಬಳಿಯಿದೆ. ಇದು ಹಲವು ಸುದ್ದಿಸಂಸ್ಥೆಗಳಿಗೂ ಸೋರಿಕೆಯಾಗಿದೆ. ಮಾಹಿತಿಗಳು ಖಚಿತ ಎನ್ನುವುದು ಖಾತ್ರಿಯಾದ ನಂತರ ಬಹಿರಂಗವಾಗುವ ನಿರೀಕ್ಷೆಗಳಿವೆ.
ಇವನ್ನೂ ಓದಿ