ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಕಾಂಗ್ರೆಸ್‌ಗೆ ಆ ಕುಟುಂಬದಿಂದ ಮುಕ್ತಿ ಯಾವಾಗ?: ಆಡ್ವಾಣಿ (BJP | LK Advani | Congress | dynastic rule)
ಕಾಂಗ್ರೆಸ್ ಕುಟುಂಬ ರಾಜಕಾರಣದ ಬಗ್ಗೆ ಬಿಜೆಪಿ ಹಿರಿಯ ನಾಯಕ ಎಲ್.ಕೆ. ಆಡ್ವಾಣಿ ಮತ್ತೆ ಪ್ರಶ್ನೆ ಮಾಡಿದ್ದಾರೆ. ಒಂದೇ ಕುಟುಂಬದ ಸದಸ್ಯರು ಆ ಪಕ್ಷದ ನಾಯಕತ್ವದಲ್ಲಿ ಮುಂದುವರಿಯುತ್ತಿರುವುದನ್ನು ಲೇವಡಿ ಮಾಡಿದ್ದಾರೆ.

ಶುಕ್ರವಾರ ಬೆಳಗಾವಿಗೆ ಬಂದಿದ್ದ ಅವರು, ಮಹಾತ್ಮಾ ಗಾಂಧೀಜಿಯವರು ಕಾಂಗ್ರೆಸ್ ಅಧ್ಯಕ್ಷರಾಗಿದ್ದು ಒಂದು ಬಾರಿ ಮಾತ್ರ. ಆದರೆ ಈಗ, ಒಂದೇ ಕುಟುಂಬದ ಸದಸ್ಯರು ಪಕ್ಷದ ಮುಖ್ಯಸ್ಥರಾಗಿ ಮುಂದುವರಿಯುತ್ತಿದ್ದಾರೆ ಎಂದು ನೆಹರು ಕುಟುಂಬದ ಕುರಿತು ಹೆಸರು ಹೇಳದೆ ಸ್ಪಷ್ಟ ವಾಗ್ದಾಳಿ ನಡೆಸಿದರು.

ಪ್ರಗತಿಪರ ಭಾರತದ ಕನಸು ಸ್ವಾಮಿ ವಿವೇಕಾನಂದ ಮತ್ತು ಗಾಂಧೀಜಿಯವರದ್ದಾಗಿತ್ತು. ಆದರೆ ಅದು ನನಸಾಗಲೇ ಇಲ್ಲ ಎಂದು ರಾಮಕೃಷ್ಣ ಆಶ್ರಮದ ಭವ್ಯ ಸಭಾಂಗಣ ಉದ್ಘಾಟಿಸಿದ ನಂತರ ಭಾರೀ ಸಂಖ್ಯೆಯಲ್ಲಿ ನೆರೆದಿದ್ದವರನ್ನು ಉದ್ದೇಶಿಸಿ ಮಾತನಾಡುತ್ತಾ ಆಡ್ವಾಣಿ ತಿಳಿಸಿದರು.

ಭಾರತದ ಜನಸಂಖ್ಯೆಯು ಚೀನಾದ ಜತೆ ಸ್ಪರ್ಧಿಸುತ್ತಿದೆ. ಇದನ್ನು ಗಂಭೀರವಾಗಿ ಪರಿಗಣಿಸಬೇಕು. ಅದನ್ನು ಬಿಟ್ಟು, ಭಾರತವು ಸೂಪರ್ ಪವರ್ ಆಗುತ್ತಿದೆ ಎಂಬ ಪ್ರಚೋದನೆಗೆ ಒಳಗಾಗಬೇಡಿ. ಇದು ತುಂಬಾ ಅಪಾಯಕಾರಿ ಎಂದು ಎಚ್ಚರಿಸಿದ ಅವರು, ಪಾಕಿಸ್ತಾನ ಸಂಸ್ಥಾಪಕ ಮೊಹಮ್ಮದ್ ಆಲಿ ಜಿನ್ನಾರನ್ನು ಮತ್ತೆ ಪ್ರಶಂಸಿಸಿದರು.

ನನ್ನ ಮಾತಿನಲ್ಲಿ ಜಿನ್ನಾರನ್ನು ಉಲ್ಲೇಖ ಮಾಡಿದ್ದಕ್ಕಾಗಿ ಭಾರೀ ವಿವಾದ ಸೃಷ್ಟಿಯಾಯಿತು. ಪ್ರಾರ್ಥನೆಗಳಿಗಾಗಿ ಹಿಂದೂಗಳು ದೇವಸ್ಥಾನಕ್ಕೆ ಹೋಗಬೇಕು, ಮುಸ್ಲಿಮರು ಮಸೀದಿಗೆ ಹೋಗಬೇಕು ಎಂದು ಜಿನ್ನಾ ಹೇಳಿದ್ದನ್ನು ನಾನು ಉಲ್ಲೇಖಿಸಿದ್ದೆ ಎಂದರು.

ನಾನು ಆ ಮಾತನ್ನು ಆಡಿದ್ದು ಪಾಕಿಸ್ತಾನದಲ್ಲಿ. ಬಹುಶಃ ಅದೇ ಕಾರಣದಿಂದಾಗಿ ವಿವಾದ ದೊಡ್ಡದಾಗಿರಬಹುದು. ಅಷ್ಟಕ್ಕೂ ಜಿನ್ನಾ ಅವರು ಕಂಡ ಪಾಕಿಸ್ತಾನ ಇಂದಿನದ್ದಲ್ಲ. ಇಂದಿನ ಪಾಕಿಸ್ತಾನ ಸಂಪೂರ್ಣ ವ್ಯತಿರಿಕ್ತವಾಗಿದೆ ಎಂದು ಆಡ್ವಾಣಿ ಅಭಿಪ್ರಾಯಪಟ್ಟರು.

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಭ್ರಷ್ಟಾಚಾರ ಆರೋಪಗಳನ್ನು ಎದುರಿಸುತ್ತಿರುವುದು ಸೇರಿದಂತೆ ಕರ್ನಾಟಕದ ಬಿಜೆಪಿ ಸರಕಾರದಲ್ಲಿ ನಡೆಯುತ್ತಿರುವ ಬೆಳವಣಿಗೆಗಳ ಕುರಿತು ಪ್ರಶ್ನಿಸಿದಾಗ, ಇದು ಬಿಜೆಪಿ ಪಕ್ಷದ ನಾಯಕತ್ವ ವಹಿಸಿಕೊಂಡವರಿಗೆ ಬಿಟ್ಟ ವಿಚಾರ ಎಂದಷ್ಟೇ ತಿಳಿಸಿದರು.
ಇವನ್ನೂ ಓದಿ