ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » 2ಜಿ ಹಗರಣ ಜೆಪಿಸಿಗೆ ಒಪ್ಪಿಸದಿದ್ದಲ್ಲಿ ಬಜೆಟ್ ಅಧಿವೇಶನಕ್ಕೆ ಅಡ್ಡಿ:ಬಿಜೆಪಿ (BJP | JPC | 2G | Budget session | Parliament)
PTI
2ಜಿ ತರಂಗಾಂತರ ಹಗರಣವನ್ನು ಜಂಟಿ ಸಂಸದೀಯ ಸಮಿತಿಗೆ ಒಪ್ಪಿಸದಿದ್ದಲ್ಲಿ,ಬಜೆಟ್ ಅಧಿವೇಶನ ನಡೆಯಲು ಬಿಡುವುದಿಲ್ಲ.ಎಂದು ಬಿಜೆಪಿ ನಾಯಕ ರಾಜನಾಥ್ ಸಿಂಗ್ ಅಡಳಿತರೂಢ ಯುಪಿಎ ಸರಕಾರಕ್ಕೆ ಎಚ್ಚರಿಸಿದ್ದಾರೆ.

2ಜಿ ತರಂಗಾಂತರ ಹಂಚಿಕೆ ಹಗರಣ ಮತ್ತು ಇತರ ಹಗರಣಗಳನ್ನು ಕೇಂದ್ರ ಸರಕಾರ ಜಂಟಿ ಸಂಸದೀಯ ಸಮಿತಿಗೆ ಒಪ್ಪಿಸದಿದ್ದಲ್ಲಿ, ಬಜೆಟ್ ಅಧಿವೇಶನವನ್ನು ನಡೆಯಲು ಬಿಡುವುದಿಲ್ಲ ಎಂದು ಬಿಜೆಪಿ ಹಿರಿಯ ನಾಯಕ ರಾಜನಾಥ್ ಸಿಂಗ್ ಹೇಳಿದ್ದಾರೆ.

ಅಧಿವೇಶನದ ಕಲಾಪಗಳನ್ನು ಅಸ್ತವ್ಯಸ್ಥಗೊಳಿಸಿ ಜನತೆಯ ಹಿತಾಸಕ್ತಿಗೆ ಬಿಜೆಪಿ ಅಡ್ಡಿಯುಂಟು ಮಾಡುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿದರೂ ಪರವಾಗಿಲ್ಲ. ಆದರೆ, 1.76 ಲಕ್ಷ ಕೋಟಿ ರೂಪಾಯಿ ಹಗರಣವನ್ನು ಜೆಪಿಸಿ ತನಿಖೆಗೆ ಒಳಪಡಿಸಿದಲ್ಲಿ ಸತ್ಯಾಂಶ ಹೊರತರುವುದು ನಮ್ಮ ಉದ್ದೇಶವಾಗಿದೆ ಎಂದು ತಿಳಿಸಿದ್ದಾರೆ.

ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರ, 2ಜಿ ತರಂಗಾಂತರ ಹಂಚಿಕೆ ಹಗರಣವನ್ನು ಜೆಪಿಸಿಗೆ ಒಪ್ಪಿಸುತ್ತದೆ ಎನ್ನುವ ಆಶಾಭಾವನೆಯನ್ನು ಹೊಂದಿರುವುದಾಗಿ ಬಿಜೆಪಿ ಹಿರಿಯ ನಾಯಕ ಅಡ್ವಾಣಿ ಹೇಳಿದ್ದಾರೆ.
ಇವನ್ನೂ ಓದಿ