ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಸದೃಢ ನ್ಯಾಯಾಂಗ ಯಾವ ಸರ್ಕಾರಗಳಿಗೂ ಬೇಕಿಲ್ಲ: ಸುಪ್ರೀಂ (No government wants strong judiciary, Supreme Court, budgetary allocation, India)
ಯಾವ ಸರಕಾರಕ್ಕೂ ನ್ಯಾಯಾಂಗವು ಪ್ರಬಲವಾಗುವುದು ಬೇಕಿಲ್ಲ -- ಹೀಗೆಂದು ಅಸಮಾಧಾನ ವ್ಯಕ್ತಪಡಿಸಿರುವುದು ಸರ್ವೋಚ್ಚ ನ್ಯಾಯಾಲಯ. ನ್ಯಾಯಾಂಗ ವ್ಯವಸ್ಥೆಯ ಅಭಿವೃದ್ಧಿಗಾಗಿ ಸರಕಾರಗಳು ಕಡಿಮೆ ಮೊತ್ತವನ್ನು ಬಜೆಟ್‌ಗಳಲ್ಲಿ ಮೀಸಲಿಡುತ್ತಿರುವುದೇ ಇದಕ್ಕೆ ಕಾರಣ.

ಮೂಲಭೂತ ವ್ಯವಸ್ಥೆ ಮತ್ತು ಮಾನವ ಸಂಪನ್ಮೂಲಗಳ ಭಾರೀ ಕೊರತೆ ಎದುರಿಸುತ್ತಿರುವ ನ್ಯಾಯಾಂಗಕ್ಕೆ ಇಡೀ ಆಯವ್ಯಯ ಪಟ್ಟಿಯಲ್ಲಿ ಕೇಂದ್ರ ಸರಕಾರ ಮೀಸಲಿಡುತ್ತಿರುವುದು ಶೇ.1ಕ್ಕಿಂತಲೂ ಕಡಿಮೆ ಪಾಲು ಎಂದು ನ್ಯಾಯಮೂರ್ತಿ ಜಿ.ಎಸ್. ಸಿಂಘ್ವಿ ಮತ್ತು ಎ.ಕೆ. ಗಂಗೂಲಿ ಅವರನ್ನೊಳಗೊಂಡ ನ್ಯಾಯಪೀಠವು ಅತೃಪ್ತಿ ಹೊರ ಹಾಕಿತು.

ಭಾರೀ ಪ್ರಮಾಣದ ಪ್ರಕರಣಗಳು ನ್ಯಾಯಾಲಯಗಳ ಎದುರು ಬಾಕಿ ಉಳಿದಿರುವುದರಿಂದ ತ್ವರಿತ ನ್ಯಾಯ ವಿಲೇವಾರಿಗಾಗಿ ಇನ್ನಷ್ಟು ನ್ಯಾಯಾಲಯಗಳ ಸ್ಥಾಪನೆ ಅಗತ್ಯ ಎಂಬುದನ್ನು ಬೆಟ್ಟು ಮಾಡಿ ತೋರಿಸಿದ ಸಂದರ್ಭದಲ್ಲಿ, 'ಸದೃಢ ನ್ಯಾಯಾಂಗ ಯಾವ ಸರಕಾರಕ್ಕೂ ಬೇಕಿಲ್ಲ. ಅದೇನಿದ್ದರೂ ದಾಖಲೆಗಳಲ್ಲಿ ಮಾತ್ರ. ಆಯವ್ಯಯ ಪಟ್ಟಿಯನ್ನೇ ನೋಡಿ. ಅಲ್ಲಿ ನ್ಯಾಯಾಂಗಕ್ಕೆ ಸರಕಾರವು ಮೀಸಲಿಡುವ ಪಾಲು ಶೇ.1ಕ್ಕಿಂತಲೂ ಕಡಿಮೆ' ಎಂದು ಪೀಠ ಅಭಿಪ್ರಾಯಪಟ್ಟಿತು.

ನ್ಯಾಯಾಂಗದಲ್ಲಿನ ಮೂಲಭೂತ ಸಮಸ್ಯೆಗಳು ಮತ್ತು ಹುದ್ದೆಗಳು ಖಾಲಿ ಉಳಿಯುತ್ತಿರುವುದು ಹೆಚ್ಚುತ್ತಿರುವುದನ್ನು ಕೂಡ ಪೀಠವು ಗಂಭೀರವಾಗಿ ಪರಿಗಣಿಸಿತು. 'ನ್ಯಾಯಾಂಗದಲ್ಲಿ ತೀರಾ ಕಠಿಣ ಎನ್ನಬಹುದಾದ ಪರಿಸ್ಥಿತಿಯಿದೆ. ಸರಕಾರವು ಇನ್ನಷ್ಟು ನ್ಯಾಯಾಲಯಗಳನ್ನು ಸ್ಥಾಪಿಸಿದಲ್ಲಿ, ಜನರ ಸಮಸ್ಯೆ ಬೇಗನೆ ಪರಿಹಾರ ಕಾಣಬಹುದು' ಎಂದು ತಿಳಿಸಿತು.

ದೂರವಾಣಿ ಕದ್ದಾಲಿಕೆ ಪ್ರಕರಣ ಸಂಬಂಧ ಸಮಾಜವಾದಿ ಪಕ್ಷದ ಮಾಜಿ ನಾಯಕ ಅಮರ್ ಸಿಂಗ್ ದಾಖಲಿಸಿದ್ದ ದೂರೊಂದರ ವಿಚಾರಣೆ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್ ಮೇಲಿನಂತೆ ಅತೃಪ್ತಿ ವ್ಯಕ್ತಪಡಿಸಿತು. ಪ್ರಕರಣಗಳು ನಿಧಾನಗತಿಯಲ್ಲಿ ಸಾಗುತ್ತಿರುವುದರ ಹಿಂದೆ ಇರುವ ವಾಸ್ತವ ಕಾರಣಗಳೇನು, ಸರಕಾರಗಳು ಯಾಕೆ ಇದನ್ನು ಪರಿಹರಿಸಲು ಮುಂದಾಗುತ್ತಿಲ್ಲ ಎಂಬ ಬಗ್ಗೆ ಗಮನ ಸೆಳೆಯಲು ಯತ್ನಿಸಿತು.
ಇವನ್ನೂ ಓದಿ