ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಸರಕಾರದಲ್ಲಿ ಎಲ್ಲವೂ ನನ್ನ ಕೈಯಲ್ಲಿಲ್ಲ ಎಂದ ಪ್ರಧಾನಿ ಸಿಂಗ್ (Manmohan Singh | UPA govt | Congress | PM's press meet)
ಬಜೆಟ್ ಅಧಿವೇಶನ ಆರಂಭಕ್ಕೂ ಮೊದಲು ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಹಲವು ವಿಚಾರಗಳನ್ನು ಸ್ಪಷ್ಟಪಡಿಸುವ ಮತ್ತು ಸರಕಾರವನ್ನು ಮುಜುಗರದಿಂದ ಪಾರು ಮಾಡುವ ನಿಟ್ಟಿನಲ್ಲಿ, ಸಂವಿಧಾನದ ನಾಲ್ಕನೇ ಅಂಗ ಎಂದೇ ಹೇಳಲಾಗುತ್ತಿರುವ ಮಾಧ್ಯಮಗಳ ಜತೆ ಪ್ರಶ್ನೋತ್ತರ ನಡೆಸುತ್ತಿದ್ದಾರೆ.

ಈ ಸಂವಾದ ವಿದ್ಯುನ್ಮಾನ ಮಾಧ್ಯಮದ ಸಂಪಾದಕರ ಜತೆ ಮಾತ್ರ ನಡೆಯುತ್ತಿದೆ. ಈ ಸಂದರ್ಭದಲ್ಲಿ ಪತ್ರಕರ್ತರ ಪ್ರಶ್ನೆಗೆ ಪ್ರಧಾನಿಯವರು ಉತ್ತರಿಸಿದ ಪ್ರಮುಖ ಅಂಶಗಳನ್ನು ಇಲ್ಲಿ ನೀಡಲಾಗಿದೆ.

ಅಧಿವೇಶನದ ಬಗ್ಗೆ...
* ಸಂಸತ್ತಿನ ಮುಂದಿನ ಅಧಿವೇಶನ ಸರಾಗವಾಗಿ ಸಾಗುವಂತೆ ಯತ್ನ.
* ಬಜೆಟ್ ಅಧಿವೇಶನವಾದರೂ ಅಡೆತಡೆಯಿಲ್ಲದೆ ನಡೆಯುವ ವಿಶ್ವಾಸ.
* ಸಂಸತ್ ಕಲಾಪ ನಡೆಯಲು ಯಾಕೆ ಬಿಡುತ್ತಿಲ್ಲ ಎಂದು ಅರ್ಥವಾಗುತ್ತಿಲ್ಲ.
* ಸಂಸತ್ ಕಲಾಪ ನಡೆಯದೇ ಇದ್ದಾಗ ಸಮಸ್ಯೆಗಳು ಉದ್ಭವಿಸುತ್ತವೆ.
* ಹಲವು ಕ್ಷೇತ್ರಗಳಲ್ಲಿನ ಸುಧಾರಣೆಗೆ ಪ್ರತಿಪಕ್ಷಗಳು ಅಡ್ಡಗಾಲು ಹಾಕುತ್ತಿವೆ.
* ಸರಕಾರದ ಆರ್ಥಿಕ ನೀತಿಗಳ ವಿರುದ್ಧ ಬಿಜೆಪಿಯು ಹಗೆತನ ನಿಲುವನ್ನು ಹೊಂದಿದೆ.
* ಗುಜರಾತಿನ ಓರ್ವ ವ್ಯಕ್ತಿಯ (ನರೇಂದ್ರ ಮೋದಿ ಅಲ್ಲ) ಮೇಲಿನ ಮಾತುಗಳನ್ನು ಹಿಂದಕ್ಕೆ ಪಡೆಯಬೇಕು ಎಂದು ಬಿಜೆಪಿ ಬಯಸುತ್ತಿದೆ.

ಭ್ರಷ್ಟಾಚಾರದ ಬಗ್ಗೆ...
* ನಮ್ಮದು ಭ್ರಷ್ಟಾಚಾರಗಳಿಂದಲೇ ತುಂಬಿದ ರಾಷ್ಟ್ರವಲ್ಲ.
* ಭ್ರಷ್ಟಾಚಾರ ಎನ್ನುವುದು ತೀವ್ರ ಕಳವಳಕಾರಿ ಸಂಗತಿ.
* ಹಗರಣಗಳು ನಮ್ಮ ಆತ್ಮವಿಶ್ವಾಸವನ್ನು ಕುಗ್ಗಿಸಿವೆ, ಗೌರವಕ್ಕೆ ಕುಂದು ತಂದಿವೆ.
* ಅವ್ಯವಹಾರಗಳು ನಡೆಯಬಾರದಿತ್ತು, ಇದರ ಬಗ್ಗೆ ವಿಷಾದವಿದೆ.
* ದೇಶವು ಆತ್ಮವಿಶ್ವಾಸವನ್ನು ಕಳೆದುಕೊಳ್ಳುವಂತಹ ಪರಿಸ್ಥಿತಿಯನ್ನು ಸೃಷ್ಟಿಯಾಗಬಾರದು.
* ಎಲ್ಲಾ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲು ಸರಕಾರವು ಬದ್ಧವಾಗಿದೆ.
* ಇಸ್ರೋ-ದೇವಾಸ್ ನಡುವಿನ ಒಪ್ಪಂದದಲ್ಲಿ ಪ್ರಧಾನ ಮಂತ್ರಿ ಕಚೇರಿಯು ಯಾವುದೇ ರಹಸ್ಯ ಮಾತುಕತೆ ನಡೆಸಿಲ್ಲ.
* 2ಜಿ, ಕಾಮನ್‌ವೆಲ್ತ್ ಗೇಮ್ಸ್, ಆದರ್ಶ ಹಗರಣಗಳನ್ನು ಹೊರಗೆಳೆದದ್ದು ಮಾಧ್ಯಮಗಳು.
* 2ಜಿಯಲ್ಲಿ ಆಗಿರುವ ನಷ್ಟವನ್ನು ಖಚಿತವಾಗಿ ಹೇಳಲು ಸಾಧ್ಯವಿಲ್ಲ.
* ಸಂಪುಟ ರಚನೆ ಸಂದರ್ಭದ ಪ್ರಕ್ರಿಯೆಗಳನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ.
* ಸಂಪುಟ ರಚನೆ ಸಂದರ್ಭದಲ್ಲಿ ರಾಜಾ ತಪ್ಪು ಮಾಡಿದ್ದಾರೆ ಎಂದು ನಾವು ಯೋಚಿಸಿರಲಿಲ್ಲ.
* ರಾಜಾ ಆಯ್ಕೆ ನಮ್ಮದಲ್ಲ, ಅದು ಅವರಿಗೆ ಸಂಬಂಧಪಟ್ಟ ಡಿಎಂಕೆ ಪಕ್ಷದ್ದು.
* ಜೆಪಿಸಿ ಸೇರಿದಂತೆ ಯಾವುದೇ ಸಮಿತಿ ಮುಂದೆ ಹಾಜರಾಗಲು ನನಗೆ ಯಾವುದೇ ಭೀತಿಯಿಲ್ಲ.

ಆರ್ಥಿಕತೆ-ಉಗ್ರರ ಬಗ್ಗೆ...
* ಉಲ್ಫಾ ಉಗ್ರರ ಜತೆ ಮಾತುಕತೆ ಆರಂಭಿಸಲಾಗಿದೆ. ಜಮ್ಮು-ಕಾಶ್ಮೀರದ ಪರಿಸ್ಥಿತಿ ಸುಧಾರಿಸಿದೆ.
* ಆಂತರಿಕ ಭದ್ರತೆ ಕಾಪಾಡುವಲ್ಲಿ ಸರಕಾರದ ಸಾಧನೆ ಶ್ಲಾಘನೀಯವಾದದ್ದು.
* ಭಾರತದ ಆರ್ಥಿಕತೆ ಅತ್ಯುತ್ತಮ ಸ್ಥಿತಿಯಲ್ಲಿದೆ. ಪ್ರಸಕ್ತ ಆರ್ಥಿಕ ವರ್ಷದ ಪ್ರಗತಿ ದರ ಶೇ.8.5ರಲ್ಲಿದೆ.
* ಬೆಲೆಯೇರಿಕೆ ಕಳವಳಕಾರಿ. ಇದನ್ನು ತಡೆಯಲು ಎಲ್ಲಾ ರೀತಿಯ ಕ್ರಮ.
* ಮುಕ್ತ ಆರ್ಥಿಕತೆಯಾಗುತ್ತಿರುವುದರಿಂದ ಹಣದುಬ್ಬರ ಏರಿಕೆಯಾಗುತ್ತಿದೆ.
* ದೇಶದ ಆರ್ಥಿಕ ಪ್ರಗತಿಯ ಕೀರ್ತಿ ಯುಪಿಎ ಸರಕಾರಕ್ಕೆ ಸಲ್ಲಬೇಕು.
* ಆಹಾರ ಹಣದುಬ್ಬರ ಬಡವರಿಗೆ ಬಾಧೆಯನ್ನುಂಟು ಮಾಡುತ್ತಿದೆ.
* ಬಡವರು ತಮ್ಮ ಸಂಪಾದನೆಯ ಶೇ.60ರಷ್ಟನ್ನು ಆಹಾರಕ್ಕೆ ಮೀಸಲಿಡುವ ಪರಿಸ್ಥಿತಿಯಿದೆ.
* ಭಾರತವು ಈಗಲೂ ಬಡ ರಾಷ್ಟ್ರ.

ಸರಕಾರ-ಕಾಂಗ್ರೆಸ್ ಬಗ್ಗೆ...
* ನಾನು ತಪ್ಪುಗಳನ್ನು ಎಸಗಿರಬಹುದು. ಆದರೆ ಮಾಧ್ಯಮಗಳಲ್ಲಿ ಬಿಂಬಿಸುತ್ತಿರುವಂತೆ ನಾನು ಅಪರಾಧಿಯಲ್ಲ.
* ಆಡಳಿತದ ದಕ್ಷತೆಯನ್ನು ಸುಧಾರಿಸುವ ಅಗತ್ಯವಿದೆ ಎಂಬುದನ್ನು ನಿರಾಕರಿಸುವುದಿಲ್ಲ.
* ನನ್ನ ಜವಾಬ್ದಾರಿಗಳು ಏನು ಎಂಬುದು ನನಗೆ ಗೊತ್ತಿಲ್ಲ ಎಂದು ಯಾರೊಬ್ಬರೂ ಅಂದುಕೊಳ್ಳಬಾರದು.
* ನಾನು ದುರ್ಬಲ ಪ್ರಧಾನ ಮಂತ್ರಿ ಅಲ್ಲ, ಅಸಹಾಯಕನಲ್ಲ.
* ರಾಜೀನಾಮೆ ನೀಡುವ ಬಗ್ಗೆ ಯಾವತ್ತೂ ಯೋಚನೆಯನ್ನೇ ಮಾಡಿಲ್ಲ. (ಸುತ್ತಲೂ ಭ್ರಷ್ಟರೇ ತುಂಬಿದ್ದಾಗ ಸಾಕಪ್ಪ ಸಾಕು ಅಂತ ಅನ್ನಿಸಿದೆಯೇ ಎಂಬ ಪ್ರಶ್ನೆಗೆ)
* ಬಜೆಟ್ ಅಧಿವೇಶನದ ಬಳಿಕ ಸಂಪುಟಕ್ಕೆ ಮೇಜರ್ ಸರ್ಜರಿ.
* ಕೇರಳದಲ್ಲಿ ಅಧಿಕಾರಕ್ಕೆ ಮರಳುವ ಎಲ್ಲಾ ಅವಕಾಶಗಳು ಕಾಂಗ್ರೆಸ್ ಪಕ್ಷಕ್ಕಿದೆ.
* ಮುಂದಿನ ಅವಧಿಯ ಬಗ್ಗೆ ಈಗಲೇ ಹೇಳುವುದು ಸಾಧ್ಯವಿಲ್ಲ. ಈ ಅವಧಿಯಲ್ಲಿ ಸಮರ್ಪಕ ಆಡಳಿತ ನಡೆಸಬೇಕಾಗಿದೆ.
* ಸಮ್ಮಿಶ್ರ ಸರಕಾರದಲ್ಲಿ ಒತ್ತಡಗಳು ಸಹಜ. ಹಾಗಾಗಿ ರಾಜಿ ಮಾಡಿಕೊಳ್ಳಬೇಕಾಗುತ್ತದೆ.
* ಸಮ್ಮಿಶ್ರ ಸರಕಾರವಾಗಿರುವ ಕಾರಣ ನಾನು ಅಂದುಕೊಂಡದ್ದನ್ನೇ ಸಾಧಿಸಲು ಸಾಧ್ಯವಾಗಿಲ್ಲ.
* ಸಮ್ಮಿಶ್ರ ಸರಕಾರದಲ್ಲಿ ಎಲ್ಲವೂ ನನ್ನ ನಿಯಂತ್ರಣದಲ್ಲಿ ಇಲ್ಲ.

ಇತರ ವಿಚಾರಗಳ ಬಗ್ಗೆ...
* ಮಾಧ್ಯಮಗಳು ಧನಾತ್ಮಕ ಪಾತ್ರ ವಹಿಸುತ್ತಿವೆ.
* ಭಾರತವು ಭ್ರಷ್ಟಾಚಾರದಿಂದ ಕೂಡಿದ ರಾಷ್ಟ್ರವೆಂದು ಮಾಧ್ಯಮಗಳು ಬಿಂಬಿಸುತ್ತಿವೆ.
* ತೆಲಂಗಾಣದ್ದು ಕ್ಲಿಷ್ಟ ವಿಚಾರ. ಈ ಬಗ್ಗೆ ಯಾವುದೇ ತರಾತುರಿ ನಿರ್ಧಾರವಿಲ್ಲ.
* ಕ್ರಿಕೆಟ್ ವಿಶ್ವಕಪ್‌ನಲ್ಲಿ ನಮ್ಮ ದೇಶದ ತಂಡವು ಗೆಲ್ಲಬೇಕು ಎಂದು ಬಯಸುತ್ತಿದ್ದೇನೆ.
ಇವನ್ನೂ ಓದಿ