ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಕರುಣಾನಿಧಿಯ 'ಕಲೈಂಜ್ಞಾರ್ ಟಿವಿ' ಕಚೇರಿಗೆ ಸಿಬಿಐ ದಾಳಿ (CBI | Kalaignar TV | 2G spectrum scam | M Karunanidhi)
ತಮಿಳುನಾಡು ಮುಖ್ಯಮಂತ್ರಿ ಎಂ. ಕರುಣಾನಿಧಿ ಕುಟುಂಬದ ಮಾಲಕತ್ವದ ಕಲೈಂಜ್ಞಾರ್ ಟಿವಿ (ಕಲೈಂಞಾರ್ ಟಿವಿ) ಕಚೇರಿಗಳ ಮೇಲೆ ಸಿಬಿಐ ದಾಳಿ ನಡೆಸಿದ್ದು, 2ಜಿ ತರಂಗಾಂತರ ಹಂಚಿಕೆ ಹಗರಣವೀಗ ಅವರ ಇಡೀ ಕುಟುಂಬವನ್ನೇ ಆಪೋಶನ ತೆಗೆದುಕೊಳ್ಳುವ ಮುನ್ಸೂಚನೆಗಳನ್ನು ನೀಡುತ್ತಿದೆ.

ಹಗರಣಕ್ಕೂ, ಟಿವಿ ವಾಹಿನಿಗೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟನೆ ನೀಡಿದ ಮರುದಿನವೇ ಈ ದಾಳಿ ನಡೆದಿದೆ.

ದೂರಸಂಪರ್ಕ ಸಚಿವಾಲಯದ ಮಾಜಿ ಸಚಿವ ಎ. ರಾಜಾ ಅವರೀಗ ಇದೇ ಪ್ರಕರಣ ಸಂಬಂಧ ತಿಹಾರ್ ಜೈಲು ಸೇರಿದ್ದಾರೆ. ಅವರನ್ನೊಳಗೊಂಡ 2ಜಿ ಹಗರಣದಲ್ಲಿ ಕರುಣಾನಿಧಿ ಮಾಲಕತ್ವದ ಕಲೈಂಜ್ಞಾರ್ ಟಿವಿಯೂ ಭಾಗಿ ಎಂಬ ಆರೋಪಗಳ ಹಿನ್ನೆಲೆಯಲ್ಲಿ ಬೆಳ್ಳಂಬೆಳಗ್ಗೆ ದಾಳಿ ನಡೆಸಿರುವ ಸಿಬಿಐ ಅಧಿಕಾರಿಗಳು, ದಾಖಲೆಗಳ ಪರಿಶೀಲನೆಯಲ್ಲಿ ತೊಡಗಿದ್ದಾರೆ.

ಹಗರಣಕ್ಕೂ ಕರುಣಾ ಟಿವಿಗೂ ಸಂಬಂಧ...
2ಜಿ ಹಗರಣ 1.76 ಲಕ್ಷ ಕೋಟಿ ರೂಪಾಯಿ ಮೌಲ್ಯದ್ದು. ಇದು ಡಿಎಂಕೆ ಸಂಸದ ಹಾಗೂ ಸಚಿವರಾಗಿದ್ದ ರಾಜಾ ನೇತೃತ್ವದಲ್ಲಿ ನಡೆದಿತ್ತು. 2008ರಲ್ಲಿ 2ಜಿ ಮೊಬೈಲ್ ತರಂಗಾಂತರಗಳನ್ನು ಹರಾಜು ಹಾಕುವ ಬದಲು, ತನಗಿಷ್ಟ ಬಂದ ಕಂಪನಿಗಳಿಗೆ ಹಿಂಬಾಗಿಲಿನ ಮೂಲಕ ಹಂಚಿಕೆ ಮಾಡಲಾಗಿತ್ತು ಎನ್ನುವುದು ಆರೋಪ.

ಈ ಹಗರಣದಲ್ಲಿ ರಿಲಯೆನ್ಸ್ ಕಮ್ಯೂನಿಕೇಷನ್ಸ್, ಟಾಟಾ ಸಮೂಹ ಸೇರಿದಂತೆ ಹಲವು ಘಟಾನುಘಟಿ ಕಂಪನಿಗಳ ಹೆಸರುಗಳು ಕೂಡ ಸೇರಿವೆ. ಪ್ರಕರಣದಲ್ಲಿ ಕೇಳಿ ಬಂದಿರುವ ಸ್ವಾನ್ ಟೆಲಿಕಾಂ ಎಂಬ ಸಂಸ್ಥೆ ರಿಲಯೆನ್ಸ್ ಕಮ್ಯುನಿಕೇಷನ್ಸ್‌ನದ್ದು ಎಂಬ ಆರೋಪಗಳ ಕುರಿತು ತನಿಖೆ ನಡೆಯುತ್ತಿದೆ.

ಈ ಸ್ವಾನ್ ಟೆಲಿಕಾಂನ ಪ್ರವರ್ತಕ ಶಾಹಿದ್ ಉಸ್ಮಾನ್ ಬಲ್ವಾ. ಸ್ವಾನ್ ಟೆಲಿಕಾಂ‌ನಲ್ಲಿ ಟೈಗರ್ ಟ್ರೈಡರ್ಸ್ ಪ್ರೈವೆಟ್ ಲಿಮಿಟೆಡ್ ಶೇ.90.13ರಷ್ಟು ಹಾಗೂ ರಿಲಯೆನ್ಸ್ ಟೆಲಿಕಾಂ ಶೇ.9.87ರಷ್ಟು ಈಕ್ವಿಟಿ ಶೇರು ಬಂಡವಾಳ ಹೂಡಿದ್ದವು. ಈ ಮೊತ್ತವನ್ನು ಕರುಣಾನಿಧಿ ಕುಟುಂಬದ ಟಿವಿ ಚಾನೆಲ್‌ಗೆ ಪರಿವರ್ತನೆ ಮಾಡಲಾಗಿದೆ ಎನ್ನುವುದು ಆರೋಪ.

ಸ್ವಾನ್ ಟೆಲಿಕಾಂನ ಪ್ರಮುಖ ಸಂಸ್ಥೆ ಡಿಬಿ ರಿಯಾಲ್ಟಿ ಗ್ರೂಪ್‌ಗೆ ಶಾಹಿದ್ ಉಸ್ಮಾನ್ ಬಲ್ವಾ ವ್ಯವಸ್ಥಾಪಕ ನಿರ್ದೇಶಕ. ಇವರು 200 ಕೋಟಿ ರೂಪಾಯಿಗಳ ಸಾಲವನ್ನು ಕಲೈಂಞಾರ್ ಟಿವಿಗೆ ನೀಡಿದ್ದಾರೆ ಎಂಬ ಅಂಶಗಳು ಸಿಬಿಐ ತನಿಖೆಯಲ್ಲಿ ಮಹತ್ವ ಪಡೆದುಕೊಂಡಿದೆ.

ಡಿಎಂಕೆ ವರಿಷ್ಠ ಕರುಣಾನಿಧಿ ಪತ್ನಿ ಎಂ.ಕೆ. ದಯಾಳು ಶೇ.60ರ ಶೇರು ಹೊಂದಿರುವ ಕಲೈಂಞಾರ್ ಟಿವಿಯಲ್ಲಿ, ಸಂಸದೆ ಕನಿಮೋಳಿಗೆ ಶೇ.20ರ ಪಾಲು ಇದೆ.
ಇವನ್ನೂ ಓದಿ