ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಭೂ ಹಗರಣ; ಯಡ್ಡಿಗೆ ಬಿಜೆಪಿ ಹೈಕಮಾಂಡ್ ಕ್ಲೀನ್ ಚಿಟ್ (BJP | Nitin Gadkari | BS Yeddyurappa | Arun Jaitley)
ಕರ್ನಾಟಕ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಮೇಲಿನ ಭೂ ಹಗರಣಗಳ ಆರೋಪ ಮುಗಿದ ಅಧ್ಯಾಯ. ವಿವೇಚನಾ ಕೋಟಾದ ಅಡಿಯಲ್ಲಿ ಮುಖ್ಯಮಂತ್ರಿಗಳಿಗೆ ನಿವೇಶನಗಳನ್ನು ಹಂಚುವ ಹಕ್ಕು ಇದೆ ಎಂದು ಬಜೆಟ್‌ ದಿನವೇ ಬಿಜೆಪಿ ಅಧ್ಯಕ್ಷ ನಿತಿನ್ ಗಡ್ಕರಿ ಕ್ಲೀನ್ ಚಿಟ್ ನೀಡಿ ಸಿಹಿಸುದ್ದಿ ರವಾನಿಸಿದ್ದಾರೆ.

ರಾಜ್ಯಸಭೆಯ ಪ್ರತಿಪಕ್ಷದ ನಾಯಕ ಅರುಣ್ ಜೇಟ್ಲಿಯವರು ಹಗರಣ ಆರೋಪಗಳ ಬಗ್ಗೆ ನೀಡಿರುವ ಕಾನೂನು ಕುರಿತ ಸಾಧಕ-ಬಾಧಕಗಳ ವರದಿಯನ್ನು ಆಧರಿಸಿ ಯಡಿಯೂರಪ್ಪ ಅವರಿಗೆ ಬಿಜೆಪಿ ಕ್ಲೀನ್ ಚಿಟ್ ನೀಡಿದೆ. ಯಾವುದೇ ಕಾರಣಕ್ಕೂ ಮುಖ್ಯಮಂತ್ರಿ ಬದಲಾವಣೆಯಿಲ್ಲ. ನಾವು ಜನತಾ ನ್ಯಾಯಾಲಯದ ತೀರ್ಪನ್ನು ಒಪ್ಪಿಕೊಳ್ಳುತ್ತೇವೆ ಎಂದು ಬಿಜೆಪಿ ಹೈಕಮಾಂಡ್ ಹೇಳಿಕೊಂಡಿದೆ.

ಯಡಿಯೂರಪ್ಪ ಅವರ ಮೇಲಿನ ಹಗರಣ ಆರೋಗಳ ತನಿಖೆಯ ವರದಿಯನ್ನು ನಾನು ಈಗಾಗಲೇ ಪಕ್ಷಕ್ಕೆ ಒಪ್ಪಿಸಿದ್ದೇನೆ ಎಂದು ಜೇಟ್ಲಿ ತಿಳಿಸಿದ್ದಾರೆ.

ಇದನ್ನೇ ಹೇಳಿರುವ ಗಡ್ಕರಿಯವರು, ಜೇಟ್ಲಿಯವರಿಗೆ ಎಲ್ಲಾ ಮಾಹಿತಿಗಳೂ ಸಿಕ್ಕಿವೆ. ಅವುಗಳನ್ನು ಅವರು ಪರಿಶೀಲನೆ ನಡೆಸಿದ್ದಾರೆ. ಅದನ್ನು ನಾನು ಕೂಡ ನೋಡಿದ್ದೇನೆ. ಪ್ರಕರಣವು ಕಾನೂನಿಗೆ ಸಂಬಂಧಪಟ್ಟದ್ದಾಗಿದ್ದುದರಿಂದ ಪರಿಶೀಲನೆ ನಡೆಸುವಂತೆ ಜೇಟ್ಲಿಯವರಿಗೆ ಸೂಚನೆ ನೀಡಲಾಗಿತ್ತು. ಈಗ ನಮ್ಮ ತನಿಖೆ ಮುಗಿದಿದೆ. ಬಿಜೆಪಿ ಹೈಕಮಾಂಡಿನಿಂದ ಮುಖ್ಯಮಂತ್ರಿಯವರಿಗೆ ಯಾವುದೇ ಸಮಸ್ಯೆಯಾಗುವುದಿಲ್ಲ ಎಂದರು.

ತಾವೇ ಹಿಂದೆ ಹೇಳಿರುವಂತೆ, 'ಮುಖ್ಯಮಂತ್ರಿಯವರ ನಡೆಯಲ್ಲಿ ನೈತಿಕತೆ ಇಲ್ಲ' ಎಂಬುದಕ್ಕೆ ಈಗಲೂ ಬದ್ಧರಾಗಿದ್ದೀರಾ ಎಂಬ ಪ್ರಶ್ನೆಗೆ, 'ಜನತೆಯ ತೀರ್ಪು ಇತರೆಲ್ಲ ವಿಚಾರಗಳನ್ನು ಬದಿಗೊತ್ತಿದೆ' ಎಂದರು.

ಜಿಲ್ಲಾ ಪಂಚಾಯತ್ ಫಲಿತಾಂಶಗಳು ಬಂದಿವೆ. ನಮಗೆ ಮೊದಲಿದ್ದುದು ಕೇವಲ ನಾಲ್ಕು. ಈಗ ಅದು 18ಕ್ಕೆ ಏರಿಕೆಯಾಗಿದೆ. ಕಾಂಗ್ರೆಸ್ 18ರಲ್ಲಿತ್ತು. ಈಗ ಅದು ನಾಲ್ಕಕ್ಕೆ ಬಂದಿದೆ. ಯಡಿಯೂರಪ್ಪ ಸರಕಾರದ ವಿರುದ್ಧ ಕಾಂಗ್ರೆಸ್ ಮಾಡಿದ ಪ್ರಚಾರಕ್ಕೆ ಜನತೆ ನೀಡಿರುವ ತೀರ್ಪು ಪಂಚಾಯತ್ ಫಲಿತಾಂಶ ಎಂದು ಯಡಿಯೂರಪ್ಪ ಬದಲಾವಣೆ ಯಾಕೆ ಸಾಧ್ಯವಿಲ್ಲ ಎಂಬುದನ್ನು ವಿವರಿಸಿದರು.

ವಿಧಾನಸಭೆಯಲ್ಲಿ ಅಂಗೀಕಾರಗೊಂಡಿರುವ ಕಾನೂನಿನ ಪ್ರಕಾರ ಮುಖ್ಯಮಂತ್ರಿಗೆ ಜಮೀನು ಡಿನೋಟಿಫೈ ಮಾಡುವ ಅಧಿಕಾರವಿದೆ. ಡಿನೋಟಿಫಿಕೇಶನ್ ಎನ್ನುವುದು ಮುಖ್ಯಮಂತ್ರಿಯವರ ವಿವೇಚನಾಧಿಕಾರ. ಇದನ್ನು ಯಡಿಯೂರಪ್ಪ ಅವರೇ ಮೊದಲು ಬಳಕೆ ಮಾಡಿರುವುದಲ್ಲ. ಈ ಹಿಂದೆ ಕಾಂಗ್ರೆಸ್ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಮತ್ತು ಇತರರು ಭೂಮಿ ಹಂಚಿಕೆ ಮಾಡಿದ್ದಾರೆ. ಅದಕ್ಕಾಗಿ ಯಡಿಯೂರಪ್ಪ ವಿರುದ್ಧ ಕ್ರಮ ಕೈಗೊಳ್ಳುವುದಾದರೆ, ಇತರರ ವಿರುದ್ಧವೂ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ ಎಂದು ಸಮರ್ಥಿಸಿದರು.

ಯಡಿಯೂರಪ್ಪ ಸ್ವಜನ ಪಕ್ಷಪಾತ ಮತ್ತು ಭೂ ಹಗರಣ ಆರೋಪಗಳ ಕುರಿತು ಪಕ್ಷದ ಆಂತರಿಕ ತನಿಖೆ ನಡೆಸಲು ಬಿಜೆಪಿಯು 2010ರ ಅಂತ್ಯದಲ್ಲಿ ಜೇಟ್ಲಿಯವರನ್ನು ನೇಮಕ ಮಾಡಿತ್ತು.
ಇವನ್ನೂ ಓದಿ