ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಚುನಾವಣೆ: ತ.ನಾ., ಕೇರಳ ಏ.13ಕ್ಕೆ, ಬಂಗಾಳದಲ್ಲಿ 6 ಹಂತ (Assembly Election 2011, Tamlinadu, Assam, Kerala, Puduchery, West Bengal)
ನವದೆಹಲಿ: ಐದು ರಾಜ್ಯಗಳ ವಿಧಾನಸಭೆಗಳಿಗೆ ಚುನಾವಣಾ ಆಯೋಗವು ದಿನಾಂಕಗಳನ್ನು ಘೋಷಿಸಿದ್ದು, ಚುನಾವಣಾ ಸಂಹಿತೆಯು ತಕ್ಷಣದಿಂದಲೇ ಜಾರಿಗೆ ಬರಲಿದೆ.

ಚುನಾವಣಾ ಆಯೋಗದ ಮುಖ್ಯ ಆಯುಕ್ತ ಎಸ್.ವೈ.ಖುರೇಷಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯವನ್ನು ತಿಳಿಸಿದ್ದು, ತಮಿಳುನಾಡು, ಅಸ್ಸಾಂ, ಪುದುಚೇರಿ, ಕೇರಳ ಮತ್ತು ಪಶ್ಚಿಮ ಬಂಗಾಳಗಳಲ್ಲಿ ಚುನಾವಣೆಗಳು ನಡೆಯಲಿವೆ. ಏಪ್ರಿಲ್ 4ರಿಂದ ಮೇ 10ರವರೆಗೆ ಚುನಾವಣೆಗಳು ನಡೆಯಲಿವೆ. ಮತಗಳ ಎಣಿಕೆಯು ಮೇ 13ರಂದು ನಡೆಯಲಿದ್ದು, ಅಂದೇ ಫಲಿತಾಂಶ ಹೊರಬೀಳಲಿದೆ.

ಅಸ್ಸಾಂನಲ್ಲಿ ಎರಡು ಹಂತಗಳಲ್ಲಿ ಏಪ್ರಿಲ್ 4 ಮತ್ತು 11ರಂದು ಮತದಾನ ನಡೆಯಲಿದ್ದರೆ, ತಮಿಳುನಾಡು, ಕೇರಳ, ಪುದುಚೇರಿಗಳಲ್ಲಿ ಒಂದು ಹಂತದಲ್ಲಿ ಏಪ್ರಿಲ್ 13ರಂದು ಚುನಾವಣೆಗಳು ನಡೆಯಲಿವೆ. ಆದರೆ ಎಡರಂಗ ಆಡಳಿತದಲ್ಲಿರುವ ಪಶ್ಚಿಮ ಬಂಗಾಳದಲ್ಲಿ ಹಿಂಸಾಚಾರದ ಆತಂಕದಿಂದಾಗಿ ಏಪ್ರಿಲ್ 18ರಿಂದ ಮೇ 10ರವರೆಗೆ 6 ಹಂತಗಳಲ್ಲಿ ನಡೆಯಲಿದೆ.

ತಮಿಳುನಾಡಿನಲ್ಲಿ 4.59 ಕೋಟಿ ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದಾರೆ.

ಪರೀಕ್ಷೆಗಳು, ಹಬ್ಬಗಳು, ಕೇಂದ್ರೀಯ ಪಡೆಗಳ ಲಭ್ಯತೆ, ಭದ್ರತೆಗಾಗಿ ಅವುಗಳ ಸಾಗಾಟ ಮುಂತಾದವುಗಳನ್ನು ಪರಿಗಣಿಸಿ ದಿನಾಂಕಗಳನ್ನು ಘೋಷಿಸಲಾಗಿದೆ ಎಂದು ಖುರೇಷಿ ವಿವರಿಸಿದರು.