ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಸಿವಿಸಿ ನೇಮಕ: ಹೊಣೆ ಹೊತ್ತುಕೊಂಡರು ಪ್ರಧಾನಿ (CVC Appointment | Supreme Court | PM Manmohan Singh | Moral Responsibility | Scam)
ಸಿವಿಸಿ ನೇಮಕ: ಹೊಣೆ ಹೊತ್ತುಕೊಂಡರು ಪ್ರಧಾನಿ
ಜಮ್ಮು, ಶನಿವಾರ, 5 ಮಾರ್ಚ್ 2011( 09:21 IST )
ಸಿವಿಸಿ ನೇಮಕಾತಿ ಕುರಿತು ಸುಪ್ರೀಂ ಕೋರ್ಟು ಚಾಟಿಯೇಟು ನೀಡಿದ ನಂತರ ಎಚ್ಚೆತ್ತಿರುವ ಪ್ರಧಾನಿ ಮನಮೋಹನ್ ಸಿಂಗ್, ಕಳಂಕಿತ ಅಧಿಕಾರಿ ಪಿ.ಜೆ.ಥಾಮಸ್ ಅವರನ್ನು ಮುಖ್ಯ ವಿಚಕ್ಷಣಾ ಆಯುಕ್ತರನ್ನಾಗಿ ಆಯ್ಕೆ ಮಾಡಿರುವುದಕ್ಕೆ ತಾನೇ ಜವಾಬುದಾರ ಎಂದು ಒಪ್ಪಿಕೊಂಡಿದ್ದಾರೆ.
ಸುಪ್ರೀಂ ಕೋರ್ಟು ತೀರ್ಪನ್ನು ತಾನು ಗೌರವಿಸುವುದಾಗಿ ಈಗಾಗಲೇ ಹೇಳಿದ್ದೇನೆ ಎಂದು ಪತ್ರಿಕಾಗೋಷ್ಠಿಯಲ್ಲಿ ಹೇಳಿರುವ ಸಿಂಗ್, ನಾನು ನನ್ನ ಜವಾಬ್ದಾರಿ ಒಪ್ಪಿಕೊಂಡಿರುತ್ತೇನೆ ಎಂದರು.
ಭಯೋತ್ಪಾದನಾ ಚಟುವಟಿಕೆಗಳಿಂದಾಗಿ ಕಾಶ್ಮೀರದಿಂದ ಪಲಾಯನ ಮಾಡಿದ್ದ ಹಿಂದೂ ಕುಟುಂಬಗಳಿಗಾಗಿ ನಿರ್ಮಿಸಲಾಗಿದ್ದ ಟೌನ್‌ಶಿಪ್ ಉದ್ಘಾಟನೆಗೆ ಶುಕ್ರವಾರ ಜಮ್ಮುವಿಗೆ ಬಂದಿದ್ದರು ಪ್ರಧಾನಿ.
ಥಾಮಸ್ ಅವರನ್ನು ನೇಮಿಸಿದ್ದ ತ್ರಿಸದಸ್ಯ ಸಮಿತಿಯ ಮುಖ್ಯಸ್ಥರಾಗಿದ್ದರು ಪ್ರಧಾನಿ ಸಿಂಗ್. ಥಾಮಸ್ ನೇಮಕವೇ ಅಕ್ರಮ ಮತ್ತು ಕಾನೂನು ಬಾಹಿರವಾಗಿದೆ ಎಂದು ಸುಪ್ರೀಂ ಕೋರ್ಟು ಗುರುವಾರ ಅವರ ನೇಮಕಾತಿಯನ್ನು ರದ್ದುಗೊಳಿಸಿತ್ತು.
ಸುಪ್ರೀಂ ಕೋರ್ಟಿನ ತೀರ್ಪು ಹಿನ್ನೆಲೆಯಲ್ಲಿ ಪ್ರತಿಪಕ್ಷಗಳು ಅವರ ವಿರುದ್ಧ ವಾಗ್ದಾಳಿ ನಡೆಸಿ, ಸಂಸತ್ತಿನಲ್ಲಿ ಈ ಕುರಿತು ಹೇಳಿಕೆ ನೀಡಬೇಕೆಂದು ಒತ್ತಾಯಿಸುತ್ತಿದ್ದವು. ಕೆಲವು ಪ್ರತಿಪಕ್ಷಗಳು ಪ್ರಧಾನಿ ಮತ್ತು ಗೃಹ ಸಚಿವರ ರಾಜೀನಾಮೆಗೂ ಒತ್ತಾಯಿಸುತ್ತಿದ್ದವು.