ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಮುಲಾಯಂ ಬಂಧನ: ಗದ್ದಲದಿಂದಾಗಿ ಸಂಸತ್ತು ಮುಂದೂಡಿಕೆ (Samajwadi Party | Mulayam Singh Yadav | BSP | Lok Sabha | Parliament)
PTI
ಮಾಜಿ ಮುಖ್ಯಮಂತ್ರಿ ಮುಲಾಯಂ ಸಿಂಗ್ ಯಾದವ್ ಹಾಗೂ ಅವರ ಪುತ್ರ ಅಖಿಲೇಶ್ ಅವರಿಗೆ ಗೃಹ ಬಂಧನದಲ್ಲಿಟ್ಟಿರುವ ಮಾಯಾವತಿ ಸರಕಾರದ ಕ್ರಮವನ್ನು ವಿರೋಧಿಸಿ, ಸಮಾಜವಾದಿ ಪಕ್ಷದ ಸಂಸದರ ಕೋಲಾಹಲದಿಂದಾಗಿ ಸಂಸತ್ತನ್ನು ಮುಂದೂಡಲಾಗಿದೆ.

ಆದರೆ, ಮಾಯಾವತಿ ಸರಕಾರದ ಅಧಿಕಾರಿಗಳು ಆರೋಪಗಳನ್ನು ತಳ್ಳಿಹಾಕಿದ್ದು, ಉಭಯ ನಾಯಕರನ್ನು ಗೃಹ ಬಂಧನದಲ್ಲಿರಿಸಿಲ್ಲ ಎಂದು ಸ್ಪಷ್ಟನೆ ನೀಡಿದೆ.

ಶುಕ್ರವಾರದಂದು ನಿಧನ ಹೊಂದಿದ ಕಾಂಗ್ರೆಸ್ ನಾಯಕ ಅರ್ಜುನ್ ಸಿಂಗ್ ಅವರಿಗೆ ಶೃದ್ಧಾಂಜಲಿ ಸಲ್ಲಿಸಿದ ನಂತರ ಸಂಸತನಲ್ಲಿ ಕೋಲಾಹಲ ಸೃಷ್ಟಿಸಿ, ಕಾನೂನು ಅವ್ಯವಸ್ಥೆಯ ಹಿನ್ನೆಲೆಯಲ್ಲಿ ಉತ್ತರ ಪ್ರದೇಶ ಸರಕಾರವನ್ನು ವಜಾಗೊಳಿಸಬೇಕು ಎಂದು ಪ್ರಧಾನಿಯವರನ್ನು ಒತ್ತಾಯಿಸಿದರು.

ಸಮಾಜವಾದಿ ಪಕ್ಷದ ಸದಸ್ಯರ ಗದ್ದಲದಿಂದಾಗಿ, ಲೋಕಸಭಾ ಸ್ಪೀಕರ್ ಮೀರಾ ಕುಮಾರ್ ತಮ್ಮ ಮೂಲ ಸ್ಥಾನಗಳಿಗೆ ತೆರಳುವಂತೆ ಹಲವು ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗದಿರುವುದರಿಂದ, ಅನಿವಾರ್ಯವಾಗಿ 15 ನಿಮಿಷಗಳ ಕಾಲ ಸದನವನ್ನು ಮುಂದೂಡಿದರು.

ಸಂಸತ್ತಿನಲ್ಲಿ ಮತ್ತೆ ಕಲಾಪ ಆರಂಭವಾದ ಹಿನ್ನೆಲೆಯಲ್ಲಿ, ಸಮಾಜವಾದಿ ಪಕ್ಷದ ಸದಸ್ಯ ರಿಯೋಟಿ ರಮಣ್ ಸಿಂಗ್ ಅವರಿಗೆ ಮಾತನಾಡಲು ಅವಕಾಶ ನೀಡಿದರು.

ಸಿಂಗ್ ಮಾತನಾಡಿ, ಸಮಾಜವಾದಿ ಪಕ್ಷದ ಮುಖ್ಯಸ್ಥ ಮಾಜಿ ಮುಖ್ಯಮಂತ್ರಿ ಮುಲಾಯಂ ಸಿಂಗ್ ಯಾದವ್, ಸಂಸದರು ಮತ್ತು ಕಾರ್ಯಕರ್ತರನ್ನು ಗೃಹಬಂಧನದಲ್ಲಿರಿಸಲಾಗಿದೆ ಎಂದು ಆರೋಪಿಸಿದರು.

ಸದನದ ನಾಯಕರಾದ ಪ್ರಣಬ್ ಮುಖರ್ಜಿ, ಗೃಹ ಸಚಿವಾಲಯಕ್ಕೆ ಮನವಿ ಮಾಡಿ, ಮುಲಾಯಂ ಗೃಹ ಬಂಧನ ಕುರಿತಂತೆ ಸತ್ಯಾಂಶಗಳನ್ನು ಸಂಸತ್ತಿಗೆ ವರದಿ ಮಾಡುವಂತೆ ಕೋರಿದರು.

ಏತನ್ಮಧ್ಯೆ, ಮುಖರ್ಜಿ ಹೇಳಿಕೆಯಿಂದ ತೃಪ್ತರಾಗದ ಸಮಾಜವಾದಿ ಪಕ್ಷದ ಸದಸ್ಯರು, ಮತ್ತೊಮ್ಮೆ ಸದನದಲ್ಲಿ ಕೋಲಾಹಲ ಸೃಷ್ಟಿಸಿದ್ದರಿಂದ ಸದನವನ್ನು ಮುಂದೂಡಲಾಯಿತು.
ಇವನ್ನೂ ಓದಿ