ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ತನ್ನದೇ ಸರಕಾರದಲ್ಲಿ ಪ್ರಧಾನಿ ಸಿಂಗ್ ಮೂಲೆಗುಂಪು: ವಿಕಿಲೀಕ್ಸ್ (Pakistan | WikiLeaks | Manmohan Singh | Sonia Gandhi)
ನೆರೆರಾಷ್ಟ್ರ ಪಾಕಿಸ್ತಾನದ ಜತೆ ಮಾತುಕತೆ ಪುನರಾರಂಭಿಸುವ ಕುರಿತ ವಿಚಾರಕ್ಕೆ ಸಂಬಂಧಪಟ್ಟಂತೆ ತನ್ನದೇ ನೇತೃತ್ವದ ಸರಕಾರದಲ್ಲಿ ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಅವರು ಮೂಲೆಗುಂಪಾಗಿದ್ದರು ಎಂದು ಬಹಿರಂಗವಾಗಿದೆ.

'ವಿಕಿಲೀಕ್ಸ್' ಪಡೆದುಕೊಂಡಿರುವ ಈ ದಾಖಲೆಯನ್ನು ಬಹಿರಂಗ ಮಾಡಿರುವುದು 'ದಿ ಹಿಂದೂ' ಆಂಗ್ಲ ಪತ್ರಿಕೆ. ದೆಹಲಿಯಲ್ಲಿನ ಅಮೆರಿಕಾ ರಾಯಭಾರಿ ತಿಮೋತಿ ರೋಮರ್ ಅವರು ಈ ವಿಚಾರಗಳನ್ನು ದಾಖಲು ಮಾಡಿ, ಅಮೆರಿಕಾಕ್ಕೆ ರವಾನಿಸಿದ್ದರು.

ಹೀಗೆ ಪ್ರಧಾನ ಮಂತ್ರಿಯೇ ಕೇಂದ್ರದಲ್ಲಿ ಮೂಲೆಗುಂಪಾಗಲು ಕಾರಣ ಆಗಿನ ರಾಷ್ಟ್ರೀಯ ಭದ್ರತಾ ಸಲಹೆಗಾರ ಎಂ.ಕೆ. ನಾರಾಯಣನ್. ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರ ಸಾಂಪ್ರದಾಯಿಕ ಪಟಾಲಂ ಮತ್ತು ಸುದೀರ್ಘ ಕಾಲದಿಂದ ಗಾಂಧಿ ಕುಟುಂಬದ ನಿಷ್ಠಾವಂತನಾಗಿ ಗುರುತಿಸಿಕೊಂಡಿರುವ, 2005ರ ಜನವರಿ 12ರಂದು ಅಮೆರಿಕಾಕ್ಕೆ ಕಳುಹಿಸಲಾಗಿದ್ದ ದಾಖಲೆಯಲ್ಲಿ ಬಳಸಿದ್ದ ಉಪಮೆಯನ್ನು ಬಳಸಿಯೇ ಎಂ.ಕೆ. ನಾರಾಯಣನ್ ಅವರನ್ನು ಹೆಸರಿಸಲಾಗಿತ್ತು. ಪಾಕಿಸ್ತಾನದ ಜತೆಗಿನ ಮಾತುಕತೆಗೆ ಅವರು ವಿರೋಧ ವ್ಯಕ್ತಪಡಿಸಿದ್ದರು ಎಂಬುದು ಇದರ ಸಾರಾಂಶ.

ಇಸ್ಲಾಮಿಕ್ ಬಂದೂಕುದಾರಿಗಳು ಮುಂಬೈಯಲ್ಲಿ 166 ಮಂದಿಯನ್ನು ಕೊಂದು ಹಾಕಿದ 2008ರ ಘಟನೆಯ ನಂತರ ಪಾಕಿಸ್ತಾನದ ಜತೆ ಸ್ಥಗಿತಗೊಂಡಿದ್ದ ಮಾತುಕತೆಯನ್ನು ಪುನರಾರಾಂಭಿಸುವ ಕುರಿತು ಈ ಭಿನ್ನಾಭಿಪ್ರಾಯ ಮೂಡಿತ್ತು.

ಪ್ರಧಾನಿ ಸಿಂಗ್ ಅವರು ಇಸ್ಲಾಮಾಬಾದ್ ಜತೆ ಮಾತುಕತೆಯಲ್ಲಿ ಹೆಚ್ಚು ನಂಬಿಕೆ ಹೊಂದಿದ್ದರು. ಆದರೆ ನಾರಾಯಣನ್ ಇದನ್ನು ವಿರೋಧಿಸಿದ್ದರು. ಇದನ್ನು ರಾಯಭಾರಿ ರೋಮರ್‌ಗೆ ಹೇಳಿದ್ದು ಸ್ವತಃ ನಾರಾಯಣನ್. ಅದನ್ನು ತನ್ನ ದಾಖಲೆಯಲ್ಲಿ ನಮೂದಿಸಿ 2009ರ ಆಗಸ್ಟ್ 11ರಂದು ರೋಮರ್ ಅಮೆರಿಕಾಕ್ಕೆ ರವಾನಿಸಿದ್ದರು.

ಭಾರತವು ಪಾಕಿಸ್ತಾನದ ಜತೆ 'ಸಮಾನ ಉದ್ದೇಶ'ವನ್ನು ಹೊಂದಿದೆ ಎಂಬ ಪ್ರಧಾನ ಮಂತ್ರಿ ಸಿಂಗ್ ಅವರ ಅಭಿಪ್ರಾಯವನ್ನು ನಾರಾಯಣನ್ ಒಪ್ಪಿಕೊಳ್ಳಲು ನಿರಾಕರಿಸಿದ್ದರು. 'ನೀವು (ಸಿಂಗ್) ಸಮಾನ ಉದ್ದೇಶವನ್ನು ಹೊಂದಿರಬಹುದು, ಆದರೆ ನಾವಲ್ಲ' ಎಂದು ಅವರು ಹೇಳಿದ್ದರು ಎಂದೂ ದಾಖಲೆಯಲ್ಲಿ ನಮೂದುಗೊಂಡಿದೆ.

ಭಾರತ ಮತ್ತು ಪಾಕಿಸ್ತಾನಗಳು ಔಪಚಾರಿಕ ಮಾತುಕತೆಯನ್ನು ಆರಂಭಿಸಿದ್ದು 2004ರಲ್ಲಿ. ಇದಕ್ಕೆ ಮುಂಬೈ ದಾಳಿ ಮತ್ತೆ ಅಡ್ಡ ಬಂದಿತ್ತು. ಈಗ ಮತ್ತೆ ಮಾತುಕತೆ ಪುನರಾರಂಭಿಸಲಾಗಿದೆ. ಈ ನಡುವೆ ಸರಕಾರದ ಮಟ್ಟದಲ್ಲಿ ನಡೆದಿರುವ ಸಂಘರ್ಷಗಳು ಅಮೆರಿಕಾ ರಾಯಭಾರಿ ಕಿವಿಗೆ ಬಿದ್ದಿತ್ತು. ಅದನ್ನು ಪಡಿಯಚ್ಚಿನಂತೆ ಟೈಪಿಸಿ, ತನ್ನ ಅಭಿಪ್ರಾಯವನ್ನೂ ಸೇರಿಸಿ ಅಮೆರಿಕಾಕ್ಕೆ ರವಾನಿಸಿದ್ದರು.
ಇವನ್ನೂ ಓದಿ