ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಓಟಿಗಾಗಿ ನೋಟು: ಹಿಂದೆ ಮಾಡಿದ್ದಕ್ಕೆ ನಾವು ಜವಾಬ್ದಾರರಲ್ಲ - ಕಾಂಗ್ರೆಸ್ (India Cables | WikiLeaks |cash for votes | trust vote | UPA)
PTI
ಕಾಂಗ್ರೆಸ್ ಪಕ್ಷವು ಕುರ್ಚಿ ಉಳಿಸಿಕೊಳ್ಳಲು ಕಳೆದ ಅವಧಿಯಲ್ಲಿ ಸಂಸದರಿಗೆ ತಲಾ 10 ಕೋಟಿ ರೂಪಾಯಿ ಲಂಚ ನೀಡಿತ್ತು ಎಂಬ ಮಾಹಿತಿಯು ವಿಕಿಲೀಕ್ಸ್ ಮೂಲಕ ಸ್ಫೋಟಗೊಂಡ ಹಿನ್ನೆಲೆಯಲ್ಲಿ ಗುರುವಾರ ರಾಜ್ಯಸಭೆಯಲ್ಲಿ, ಕೇಂದ್ರ ವಿತ್ತ ಸಚಿವ ಪ್ರಣಬ್ ಮುಖರ್ಜಿ ಅವರು 'ನಾವಿದನ್ನು ಧೃಢಪಡಿಸುವುದೂ ಇಲ್ಲ, ನಿರಾಕರಿಸುವುದೂ ಇಲ್ಲ' ಎನ್ನುತ್ತಾ ಸರಕಾರವನ್ನು ಸಮರ್ಥಿಸಿಕೊಂಡರು.

ಇದೆಲ್ಲಾ ನಡೆದದ್ದು ಹಿಂದಿನ (14ನೇ) ಲೋಕಸಭೆಯಲ್ಲಿ. ನಾವೀಗ 15ನೇ ಲೋಕಸಭೆಯಲ್ಲಿ ಕೂಡ ಜನರಿಂದ ಚುನಾಯಿತರಾಗಿ ಹೊಸದಾಗಿ ಅಧಿಕಾರಕ್ಕೆ ಬಂದಿದ್ದೇವೆ. ಹಿಂದಿನ ಲೋಕಸಭೆಯಲ್ಲಾದ ಸಂಗತಿಗಳಿಗೆ ನಾವು ಉತ್ತರದಾಯಿಯಲ್ಲ, ನಾವು ಹಾಲಿ ಲೋಕಸಭೆಗೆ ಜವಾಬ್ದಾರರು ಎಂದು ಪ್ರಣಬ್ ಹೇಳಿದ್ದು ಪ್ರತಿಪಕ್ಷಗಳನ್ನು ಮತ್ತಷ್ಟು ಕೆರಳುವಂತೆ ಮಾಡಿತು.

ಓಟಿಗಾಗಿ ನೋಟು ಹಗರಣವು ಬಯಲಾಗುತ್ತಿದ್ದಂತೆಯೇ ಪ್ರಧಾನಿ ಮನಮೋಹನ್ ಸಿಂಗ್ ಮತ್ತವರ ಸರಕಾರವು ಎಲ್ಲ ಕಡೆಗಳಿಂದಲೂ ದಾಳಿಯನ್ನು ಎದುರಿಸುತ್ತಿದ್ದು, ವಾಗ್ದಾಳಿ ತಪ್ಪಿಸಿಕೊಳ್ಳಲು ತೀವ್ರವಾಗಿ ಪ್ರಯತ್ನಿಸುತ್ತಿದೆ.

ಸರಕಾರದ ರಾಜೀನಾಮೆಗೆ ಆಗ್ರಹಿಸಿ ಪ್ರತಿಪಕ್ಷಗಳು ಗದ್ದಲವೆಬ್ಬಿಸಿದ ಬಳಿಕ ಉತ್ತರಿಸಿದ ಪ್ರಣಬ್, ವಿಕಿಲೀಕ್ಸ್‌ನಲ್ಲಿ ಬಂದಿರುವ ಕೇಬಲ್‌ಗಳು ಒಂದು ಸಾರ್ವಭೌಮ ರಾಷ್ಟ್ರ ಮತ್ತು ಅದರ ವಿದೇಶೀ ಕಾರ್ಯಕ್ರಮದ ನಡುವಿನ ಸಂವಹನವಷ್ಟೇ. ಅವರಿಗೆ ರಾಜತಾಂತ್ರಿಕ ಸಂರಕ್ಷಣೆ (ಡಿಪ್ಲೊಮ್ಯಾಟಿಕ್ ಇಮ್ಯುನಿಟಿ) ಇರುವುದರಿಂದ ಸರಕಾರವು ಇದನ್ನು ದೃಢಪಡಿಸುವಂತಿಲ್ಲ ಮತ್ತು ನಿರಾಕರಿಸುವಂತೆಯೂ ಇಲ್ಲ ಎಂದರು.

ಪತ್ರಿಕೆಗಳಲ್ಲಿ ಬಂದಿರುವ ಆರೋಪಗಳು ಈ ದೇಶದ ಯಾವುದೇ ನ್ಯಾಯಾಲಯಗಳಲ್ಲಿ ಸಾಬೀತು ಮಾಡುವುದು ಸಾಧ್ಯವಿಲ್ಲ ಎಂದೂ ಪ್ರಣಬ್ ಹೇಳಿದರು.

ಹಾಗಿದ್ದರೆ ಹಿಂದೆ ಮಾಡಿದ ತಪ್ಪಿಗಾಗಿ 2ಜಿ ಹಗರಣದ ತನಿಖೆ ನಡೆಯುತ್ತಿದೆ, ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಮೇಲಿನ ಇಪ್ಪತ್ತು ವರ್ಷಗಳಷ್ಟು ಹಳೆಯ ಕೇಸುಗಳು ಕೂಡ ತನಿಖೆಯಾಗುತ್ತಿದೆ. ಹೀಗಿರುವಾಗ ಹಿಂದೆ ಮಾಡಿದ ತಪ್ಪುಗಳಿಗೆ ಯಾರು ಜವಾಬ್ದಾರರು? ಎಂಬುದು ಮತದಾರರ ಪ್ರಶ್ನೆ.
ಇವನ್ನೂ ಓದಿ