ಧಕುವಕಾನಾ(ಅಸ್ಸಾಂ), ಶನಿವಾರ, 2 ಏಪ್ರಿಲ್ 2011( 19:12 IST )
ಎಲ್ಲ ಉಗ್ರಗಾಮಿ ಬಣಗಳೊಂದಿಗೆ ಮಾತುಕತೆಗೆ ಕೇಂದ್ರ ಸರಕಾರವು ಸಿದ್ಧವಿದೆ ಎಂದು ಹೇಳಿರುವ ಪ್ರಧಾನಿ ಮನಮೋಹನ್ ಸಿಂಗ್, ಉಲ್ಫಾ ಜತೆಗಿನ ಮಾತುಕತೆಯು ಉತ್ತಮ ಆರಂಭ ಎಂದು ಹೇಳಿದ್ದಾರೆ.
ಚುನಾವಣಾ ಪ್ರಚಾರ ಸಭೆಯಲ್ಲಿ ಶನಿವಾರ ಮಾತನಾಡಿದ ಅವರು, ಎಲ್ಲ ಉಗ್ರಗಾಮಿ ಬಣಗಳೊಂದಿಗೆ ಮಾತುಕತೆಗಾಗಿ ನಾವು ಬಾಗಿಲು ತೆರೆದಿಟ್ಟಿದ್ದೇವೆ. ಉಗ್ರಗಾಮಿಗಳು ಹಿಂಸಾಚಾರ ತೊರೆದು ಮಾತುಕತೆಗೆ ಬರಬೇಕು ಎಂದು ಹೇಳಿದರು.
ಸೋಮವಾರ ಆರಂಭವಾಗುವ ವಿಧಾನಸಭಾ ಚುನಾವಣೆಗಳಿಗಾಗಿ ಪ್ರಚಾರಸಭೆಗೆ ಬಂದಿದ್ದ ಮನಮೋಹನ್ ಸಿಂಗ್, ಪ್ರತಿಪಕ್ಷಗಳ ಹುಸಿ ಭರವಸೆಗಳಿಗೆ ಮರುಳಾಗದಂತೆ ಕರೆ ನೀಡಿದರಲ್ಲದೆ, ಕಾಂಗ್ರೆಸ್‌ಗೆ ಮೂರನೇ ಅವಧಿಗೆ ರಾಜ್ಯವಾಳಲು ಅವಕಾಶ ಕೊಡುವಂತೆ ಕೇಳಿಕೊಂಡರು.