ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ತಮಿಳುನಾಡಿನಲ್ಲಿ ಉಚಿತ: ನ್ಯಾನೋ ಕಾರು, ಸೆಲ್ ಫೋನ್, ಚಿನ್ನ! (Tamilnadu Elections 2011 | Freebies | Independent Candidates | DMK | AIADMK | Nano)
ಪ್ರಾದೇಶಿಕ ರಾಜಕೀಯ ಪಕ್ಷಗಳ ಉಚಿತ ಕೊಡುಗೆಗಳ ಭರಾಟೆಯಲ್ಲಿ ನಲುಗಿರುವ ಸ್ವತಂತ್ರ ಅಭ್ಯರ್ಥಿಗಳು ಕೂಡ ಮತದಾರರಿಗೆ ಆಮಿಷ ಒಡ್ಡುವುದರಲ್ಲಿ ಹಿಂದೆ ಬಿದ್ದಿಲ್ಲ. ತಮಿಳುನಾಡಿನಲ್ಲಿ ಏಪ್ರಿಲ್ 13ರಂದು ನಡೆಯಲಿರುವ ವಿಧಾನಸಭಾ ಚುನಾವಣೆಗಳಿಗೆ ಮತದಾರರ ಓಲೈಕೆಗೆ ಟಿವಿ, ಫ್ರಿಜ್, ಮಿಕ್ಸರ್, ಗ್ರೈಂಡರ್ ಇತ್ಯಾದಿಗಳನ್ನು ನೀಡುವುದಾಗಿ ಡಿಎಂಕೆ-ಎಐಎಡಿಎಂಕೆ ಇತ್ಯಾದಿಗಳು ಪೈಪೋಟಿ ನೀಡಿದರೆ, ಸ್ವತಂತ್ರ ಅಭ್ಯರ್ಥಿಗಳು ತಾವು ಗೆದ್ದರೆ ಮತದಾರರಿಗೆ ನ್ಯಾನೋ ಕಾರು ನೀಡುವುದಾಗಿ ಘೋಷಿಸಿದ್ದಾರೆ!

ಸೇಲಂ ದಕ್ಷಿಣ ಮತ್ತು ಉತ್ತರದಿಂದ ಸ್ಪರ್ಧಿಸುತ್ತಿರುವ ಸ್ವತಂತ್ರ ಅಭ್ಯರ್ಥಿ ಶಹಜಹಾನ್ ನ್ಯಾನೋ ಕಾರು ಮಾತ್ರವಲ್ಲದೆ, ಸೆಲ್ ಫೋನ್ ಮತ್ತು ಪವರ್ ಕಟ್‌ನಿಂದ ಜನರನ್ನು ರಕ್ಷಿಸಲು ಜನರೇಟರ್ ಸೆಟ್ ಮುಂತಾದವುಗಳ ಕೊಡುಗೆಗಳನ್ನೂ ಭರವಸೆ ನೀಡಿದ್ದಾರೆ. ಕೇಬಲ್ ಟಿವಿ ಸಂಪರ್ಕ, ಹಾಗೂ ಪ್ರತಿ ವಿದ್ಯಾರ್ಥಿಗೆ 200 ರೂಪಾಯಿಯ ಪಾಕೆಟ್ ಮನಿಯನ್ನು ಕೊಡುವುದಾಗಿಯೂ ಭರವಸೆ ನೀಡಿದ್ದಾರೆ ಅವರು.

ಇದಕ್ಕೆಲ್ಲಾ ಹಣ ಎಲ್ಲಿಂದ ತರುತ್ತೀರಿ ಎಂದು ಕೇಳಿದರೆ, ಅವರಲ್ಲಿ ಉತ್ತರ ಸಿದ್ಧವಿದೆ. 2ಜಿ ಸ್ಪೆಕ್ಟ್ರಂ ಹಗರಣದ ಕೋಟ್ಯಂತರ ರೂಪಾಯಿ ಹಣವನ್ನು ಮುಟ್ಟುಗೋಲು ಹಾಕಿಕೊಂಡರೆ ಎಲ್ಲವೂ ಸಾಧ್ಯ ಎಂಬುದು ಅವರ ವಾದ. ಅಂದಹಾಗೆ 2ಜಿ ಹಗರಣದ ಪ್ರಮುಖ ಆರೋಪಿ, ತಮಿಳುನಾಡಿನ ಡಿಎಂಕೆ ಪಕ್ಷದ ಮಾಜಿ ಕೇಂದ್ರ ಸಚಿವ ಎ.ರಾಜಾ.

ಈ ರೀತಿಯೆಲ್ಲಾ ಬೇಕಾಬಿಟ್ಟಿಯಾಗಿ ಮತದಾರರಿಗೆ ಆಮಿಷವೊಡ್ಡುವುದು ಪ್ರಜಾ ಪ್ರತಿನಿಧಿ ಕಾಯ್ದೆಯಡಿ ಅಪರಾಧವಾಗುವುದಿಲ್ಲವೇ ಎಂದು ಕೇಳಿದರೆ, ವೃತ್ತಿಯಲ್ಲಿ ವಕೀಲರೂ ಆಗಿರುವ ಶಹಜಹಾನ್ ಉತ್ತರಿಸುವುದು ಹೀಗೆ: "ರಾಜಕೀಯ ಪಕ್ಷಗಳೇ ಉಚಿತ ಕೊಡುಗೆಗಳ ಆಶ್ವಾಸನೆಯ ಮಹಾಪೂರವನ್ನೇ ಹರಿಸಬಹುದಾದರೆ, ನಾನೇಕೆ ಇದನ್ನು ಮಾಡಬಾರದು?"

ಮುಸಿರಿ ಕ್ಷೇತ್ರದ ಮತ್ತೊಬ್ಬ ಸ್ವತಂತ್ರ ಅಭ್ಯರ್ಥಿ ಕಣ್ಣಯ್ಯನ್ ಅವರಂತೂ ತಾವು ಗೆದ್ದರೆ ಎಲ್ಲ ಮತದಾರರಿಗೆ ಉಚಿತ ಚಿನ್ನದ ನಾಣ್ಯಗಳನ್ನು ಕೊಡುವುದಾಗಿ ಹೇಳಿದ್ದಾರೆ. ಹಾಗೂ ಚುನಾವಣೆಗಳ ಸಂದರ್ಭ ತನಗಾಗಿ ಕೆಲಸ ಮಾಡಿದ ಕಾರ್ಯಕರ್ತರಿಗೆ 3 ಸೆಂಟ್ಸ್ ಭೂಮಿ ನೀಡುವುದಾಗಿಯೂ ಹೇಳಱಿದ್ದು, ಕ್ಷೇತ್ರದ ಜನತೆಗೆ ಕೇಬಲ್ ಟಿವಿ ಸಂಪರ್ಕ ಕೊಡಿಸುವುದಾಗಿ ಭರವಸೆ ನೀಡಿದ್ದಾರೆ.

ಮನಪ್ಪರೈ ಕ್ಷೇತ್ರದ ಸ್ವತಂತ್ರ ಅಭ್ಯರ್ಥಿ ವಿನ್ಸೆಂಟ್ ಪೌಲ್ ಎಂಬವರು, ತಾವು ಗೆದ್ದರೆ ತಮ್ಮ ಕ್ಷೇತ್ರದಲ್ಲಿ ಮದುವೆಯಾಗುವ ಎಲ್ಲ ಯುವತಿಯರಿಗೆ ಐದು ಸವರಿನ್ ತೂಕದ ಚಿನ್ನದ ಸರ ಕೊಡಿಸುವ ಆಮಿಷ ಒಡ್ಡಿದ್ದಾರೆ.
ಇವನ್ನೂ ಓದಿ