ರಾಜಾ ಆಪ್ತ ಕಾರ್ಯದರ್ಶಿಯಿಂದ ಅಧಿಕಾರಿಗಳಿಗೆ ಬೆದರಿಕೆ: ಸಿಬಿಐ
ನವದೆಹಲಿ, ಭಾನುವಾರ, 3 ಏಪ್ರಿಲ್ 2011( 14:13 IST )
2ಜಿ ತರಂಗಾಂತರ ಲೈಸೆನ್ಸ್ ಪಡೆಯುವಲ್ಲಿ ಅನರ್ಹತೆಯನ್ನು ಹೊಂದಿದ್ದ ಸ್ವಾನ್ ಟೆಲಿಕಾಂ ಕಂಪೆನಿಗೆ, ಲೈಸೆನ್ಸ್ ನೀಡುವಂತೆ ಮಾಜಿ ಟೆಲಿಕಾಂ ಸಚಿವ ಎ.ರಾಜಾ ಆಪ್ತ ಕಾರ್ಯದರ್ಶಿ ಅಧಿಕಾರಿಗಳಿಗೆ ಬೆದರಿಕೆಯೊಡ್ಡಿದ್ದರು ಎಂದು ಸಿಬಿಐ ಅಧಿಕಾರಿಗಳು ಹೇಳಿದ್ದಾರೆ.
2ಜಿ ತರಂಗಾಂತರ ಹಂಚಿಕೆಯ ತನಿಖೆ ನಡೆಸಿದಿ ಸಿಬಿಐ ಅಧಿಕಾರಿಗಳು ನ್ಯಾಯಾಲಯದಲ್ಲಿ ಮೊದಲ ಆರೋಪ ಪಟ್ಟಿಯನ್ನು ದಾಖಲಿಸಿದ್ದಾರೆ.
ಸ್ವಾನ್ ಟೆಲಿಕಾಂ ಕಂಪೆನಿಗೆ 2ಜಿ ತರಂಗಾಂತರಗಳ ಹಂಚಿಕೆ ಲೈಸೆನ್ಸ್ ನೀಡುವಂತೆ ಮಾಜಿ ಸಚಿವ ರಾಜಾ ಆಪ್ತ ಕಾರ್ಯದರ್ಶಿ ಹಿರಿಯ ಅಧಿಕಾರಿಗಳ ಮೇಲೆ ಭಾರಿ ಒತ್ತಡವನ್ನು ತಂದಿದ್ದರು ಎಂದು ಸಿಬಿಐ ಮೂಲಗಳು ತಿಳಿಸಿವೆ.
ಟೆಲಿಕಾಂ ಇಲಾಖೆಯ ವೈರ್‌ಲೆಸ್ ಪ್ಲ್ಯಾನಿಂಗ್ ಆಂಡ್ ಕೋ ಆರ್ಡಿನೇಶನ್ ವಿಂಗ್ ಮುಖ್ಯಸ್ಥ ಆರ್.ಪಿ.ಅಗರ್ವಾಲ್ ಅವರಿಗೆ ಸ್ವಾನ್ ಟೆಲಿಕಾಂ ಕಂಪೆನಿ ಪರ ಕಾರ್ಯನಿರ್ವಹಿಸುವಂತೆ ಕಿರುಕುಳ ನೀಡಿದ್ದರು ಎಂದು ಆರೋಪಿಸಲಾಗಿದೆ.