ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ದೆಹಲಿ ಸಹಿತ ಉತ್ತರ ಭಾರತದಲ್ಲಿ ಲಘು ಭೂಕಂಪ (Earth Quake | North India | Tremor)
ನವದೆಹಲಿ: ಉತ್ತರ ಭಾರತದಾದ್ಯಂತ ಸೋಮವಾರ ಅಪರಾಹ್ನ ಭೂಮಿ ಕಂಪಿಸಿದ್ದು, ಜನರು ಭಯಭೀತರಾಗಿ ಕಚೇರಿಯಿಂದ, ಮನೆಯಿಂದ ಹೊರಗೋಡಿ ಬಂದರು. ಭೂಕಂಪದ ಪ್ರಮಾಣವು ರಿಚರ್ ಮಾಪಕದಲ್ಲಿ 5.7 ದಾಖಲಾಗಿದ್ದು, ಭಾರತ-ನೇಪಾಳ ಗಡಿಯಲ್ಲಿ ಅದರ ಭೂಕಂಪದ ಕೇಂದ್ರ ಬಿಂದು ಇತ್ತು ಎಂದು ಅಂದಾಜಿಸಲಾಗಿದೆ.

ಮೂರು ಸೆಕೆಂಡುಗಳ ಕಾಲ ಭೂಮಿ ಕಂಪಿಸಿದ್ದು, ಗಾಜಿಯಾಬಾದ್, ನೋಯಿಡಾ, ದೆಹಲಿ ಸುತ್ತಮುತ್ತ ಮತ್ತಿತರ ಕಡೆಗಳಲ್ಲಿ ಇದು ಅನುಭವಕ್ಕೆ ಬಂದಿದೆ.

ಯಾವುದೇ ಆಸ್ತಿಪಾಸ್ತಿ ಅಥವಾ ಪ್ರಾಣ ನಷ್ಟವಾದ ವರದಿಗಳಿಲ್ಲ. ಇದು ದೊಡ್ಡ ಭೂಕಂಪವೇನಲ್ಲ.

ಕಳೆದ ತಿಂಗಳು ಜಪಾನಿನಲ್ಲಿ ತೀವ್ರ ಭೂಕಂಪವಾಗಿ ಸುನಾಮಿಯಿಂದ ಅಪಾರ ಪ್ರಮಾಣದಲ್ಲಿ ಆಸ್ತಿ ಪಾಸ್ತಿ ಹಾಗೂ ಪ್ರಾಣಹಾನಿ ಸಂಭವಿಸಿದ್ದವು. ಇದಕ್ಕೆ ಸೂಪರ್ ಮೂನ್ ಪರಿಣಾಮ ಕಾರಣವೆಂದು ಆತಂಕ ಹುಟ್ಟಿಸಲಾಗಿತ್ತು.
ಇವನ್ನೂ ಓದಿ