ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಸಾಯಿಬಾಬಾ ದೇಹಸ್ಥಿತಿ ಗಂಭೀರ : ಪುಟ್ಟಪರ್ತಿಯಲ್ಲಿ ನಿಷೇಧಾಜ್ಞೆ (Satya Sai Baba Critical | Putaparthi | Sathya Sai Baba | Health)
PR
ಶ್ವಾಸಕೋಶ ಮತ್ತು ಎದೆ ನೋವಿನ ಪ್ರಯುಕ್ತ ಆಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿರುವ ದೇವ ಮಾನವ ಸತ್ಯ ಸಾಯಿಬಾಬಾ ಅವರ ದೇಹಸ್ಥಿತಿ ವಿಷಮಿಸಿದ್ದು, ಪರಿಸ್ಥಿತಿ ಚಿಂತಾಜನಕವಾಗಿದೆ. ಹಾಗೂ ಪುಟ್ಟಪರ್ತಿಯಲ್ಲಿ ಆತಂಕಗೊಂಡಿರುವ ಭಕ್ತಾದಿಗಳು ತಂಡೋಪತಂಡವಾಗಿ ಬರುತ್ತಿರುವುದರಿಂದಾಗಿ ಆ ಪ್ರದೇಶದ ಸುತ್ತಮುತ್ತ ನಿಷೇಧಾಜ್ಞೆ ಹೇರಲಾಗಿದೆ.

ಅನಾರೋಗ್ಯಕ್ಕೀಡಾಗಿರುವ ಸಾಯಿ ಬಾಬಾ ದರ್ಶನಕ್ಕೆ ಅವಕಾಶ ನೀಡುತ್ತಿಲ್ಲ ಎಂಬ ಕಾರಣಕ್ಕೆ ಕೆಲವು ಮಂದಿ ಭಕ್ತರು ಜಿಲ್ಲಾಧಿಕಾರಿ ಮತ್ತು ಇತರ ಅಧಿಕಾರಿಗಳ ಮೇಲೆ ಹಲ್ಲೆಯನ್ನೂ ನಡೆಸಿದ ಕಾರಣ, ಸೆಕ್ಷನ್ 144 ವಿಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಶ್ವಾಸಕೋಶ, ಕಿಡ್ನಿ ಮತ್ತಿತರ ಕೆಲವು ಅಂಗಗಳ ವೈಫಲ್ಯದಿಂದಾಗಿ 85ರ ಹರೆಯದ ಸಾಯಿ ಬಾಬಾ ಅವರನ್ನು ಮಾರ್ಚ್ 28ರಂದು ಪುಟ್ಟಪರ್ತಿ ಪ್ರಶಾಂತಿ ಗ್ರಾಮದ ಸೂಪರ್ ಸ್ಪೆಶಾಲಿಟಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರು ಚಿಕಿತ್ಸೆಗೆ ಸ್ಪಂದಿಸುತ್ತಿಲ್ಲ ಎಂದು ಸೋಮವಾರ ಸಂಜೆಯೇ ವೈದ್ಯರು ಘೋಷಿಸಿದ್ದು, ವೆಂಟಿಲೇಟರ್ ಮತ್ತು ಸಿಆರ್ಆರ್‌ಟಿ ಎಂಬ ನಿಧಾನ ಡಯಾಲಿಸಿಸ್ ಪ್ರಕ್ರಿಯೆಯ ಮೂಲಕ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದಿದ್ದಾರೆ.

ಅಲ್ಲಿ ನೆರೆದಿರುವ ಭಕ್ತಾದಿಗಳ ಮನಸ್ಥಿತಿಯಿಂದಾಗಿ ಹೆಚ್ಚುವರಿ ಪೊಲೀಸ್ ಪಡೆಗಳನ್ನು ನಿಯೋಜಿಸಲಾಗಿದ್ದು, ಶಾಂತಿ ಕಾಪಾಡಲು ವ್ಯವಸ್ಥೆ ಮಾಡಲಾಗಿದೆ.

ಇದುವರೆಗೆ, ಗಣ್ಯರೆಲ್ಲರೂ ಸಾಯಿ ಬಾಬಾ ದರ್ಶನ ಪಡೆಯುತ್ತಿದ್ದು, ಮಂಗಳವಾರ ಕರ್ನಾಟಕ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರೂ ಪುಟ್ಟಪರ್ತಿಗೆ ತೆರಳುತ್ತಿದ್ದಾರೆ.
ಇವನ್ನೂ ಓದಿ