ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಸಚಿನ್ ತೆಂಡುಲ್ಕರ್‌ಗೆ ಭಾರತ ರತ್ನ: ಮಹಾರಾಷ್ಟ್ರ ಶಿಫಾರಸು
(Sachin Tendulkar | Maharashtra | Bharat Ratna Award | Cricket God)
ಸಚಿನ್ ತೆಂಡುಲ್ಕರ್‌ಗೆ ಭಾರತ ರತ್ನ: ಮಹಾರಾಷ್ಟ್ರ ಶಿಫಾರಸು
ಮುಂಬೈ, ಮಂಗಳವಾರ, 5 ಏಪ್ರಿಲ್ 2011( 18:02 IST )
PTI
ವಿಶ್ವಕಪ್ ಗೆದ್ದ ಭಾರತ ತಂಡಕ್ಕೆ ಮಂಗಳವಾರ ಅಭಿನಂದನೆ ಸಲ್ಲಿಸಿದ ಮಹಾರಾಷ್ಟ್ರ ವಿಧಾನಸಭೆಯು, ಬ್ಯಾಟಿಂಗ್ ದಿಗ್ಗಜ, ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್ ಅವರಿಗೆ ದೇಶದ ಪರಮೋಚ್ಚ ಪೌರ ಪ್ರಶಸ್ತಿ 'ಭಾರತ ರತ್ನ' ನೀಡುವಂತೆ ಕೇಂದ್ರ ಸರಕಾರಕ್ಕೆ ಶಿಫಾರಸು ಮಾಡಿತು.
28 ವರ್ಷಗಳ ಬಳಿಕ 121 ಕೋಟಿ ಜನತೆಯ ಆಕಾಂಕ್ಷೆ ಈಡೇರಿಸಿದ ತಂಡವನ್ನು ಅಭಿನಂದಿಸುವ ಮತ್ತು ಸಚಿನ್‌ಗೆ ಭಾರತ ರತ್ನ ಪ್ರಶಸ್ತಿಗೆ ಶಿಫಾರಸು ಮಾಡುವ ಗೊತ್ತುವಳಿಯನ್ನು ಮುಖ್ಯಮಂತ್ರಿ ಪೃಥ್ವಿರಾಜ್ ಚೌಹಾಣ್ ಮಂಡಿಸಿದಾಗ, ಎಲ್ಲ ಸದಸ್ಯರೂ ಪಕ್ಷಭೇದವಿಲ್ಲದೆ ಬೆಂಬಲಿಸಿದರು.
ಮಹಾರಾಷ್ಟ್ರ ಸರಕಾರವು ರಾಜ್ಯದ ವಿಶ್ವಕಪ್ ಆಟಗಾರರಾದ ಸಚಿನ್ ಹಾಗೂ ಜಹೀರ್ ಖಾನ್ ್ವರಿಗೆ ತಲಾ ಒಂದು ಕೋಟಿ ರೂಪಾಯಿ ನಗದು ಪುರಸ್ಕಾರ ಹಾಗೂ ಟೀಂ ಇಂಡಿಯಾದ ಬೆಂಬಲ-ತಂಡದ ಸದಸ್ಯರಾದ ಮಾಯಾಂಕ್ ಪಾರೇಖ್ ಹಾಗೂ ರಮೇಶ್ ಮಾನೆ ಅವರಿಗೆ ತಲಾ 50 ಲಕ್ಷ ರೂ. ನಗದು ನೀಡುವುದಾಗಿ ಘೋಷಿಸಿದೆ.
ಸಚಿನ್ ಅವರು ವ್ಯಕ್ತಿಗತ ಸಾಧನೆಗಾಗಿಯೇ ಆಡುತ್ತಾರೆ ಎಂಬ ತೀವ್ರ ಟೀಕೆಗಳಿದ್ದ ಹೊರತಾಗಿಯೂ, ಟೀಕೆಗಳನ್ನೆಲ್ಲಾ ಲೆಕ್ಕಿಸದೆ ಅವರು ತಂಡಕ್ಕಾಗಿ ಆಡಿದರು. ಅವರ 21 ವರ್ಷಗಳ ಕಠಿಣ ಪರಿಶ್ರಮದ ಫಲವಿದು. ಸಚಿನ್ ಅವರು ಕ್ರಿಕೆಟ್‌ನ ದೇವರು ಎಂದು ಪ್ರತಿಪಕ್ಷ ನಾಯಕ ಏಕನಾಥ ಖೋಡ್ಸೆ ಹೇಳಿದರು.