ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಭ್ರಷ್ಟಾಚಾರ ವಿರುದ್ಧ ನೀವೂ ಬನ್ನಿ, ಹೋರಾಡೋಣ: ಪ್ರಧಾನಿಗೆ ಹಜಾರೆ (Anna Hazare | India Against Corruption | Lokpal | Manmohan Singh)
PTI
ಭ್ರಷ್ಟಾಚಾರದ ವಿರುದ್ಧ ಯಾವುದೇ ವ್ಯಕ್ತಿಯ ಅಥವಾ ರಾಜಕೀಯ ಪಕ್ಷದ ವಿರುದ್ಧವಲ್ಲ, ಇದು ಜನರ ಆಂದೋಲನ. ಭ್ರಷ್ಟಾಚಾರ ರಹಿತ ಸಮಾಜ ನಮ್ಮ ಜನತೆಯ ಹಕ್ಕು ಎಂದು ಹೇಳಿರುವ ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ, ಭ್ರಷ್ಟಾಚಾರದಿಂದ ಜನರು ರೋಸಿ ಹೋಗಿದ್ದಾರೆ. ಎಚ್ಚೆತ್ತುಕೊಂಡು ದೃಢ ನಿರ್ಧಾರ ಕೈಗೊಳ್ಳಲು ಪ್ರಧಾನಮಂತ್ರಿ ಮನಮೋಹನ್ ಸಿಂಗ್‌ಗೆ ಇದು ಸಕಾಲ ಎಂದು ಹೇಳಿದ್ದಾರೆ.

ಈಗ ಬುಧವಾರ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಅವರಿಗೆ ಪತ್ರ ಬರೆದಿರುವ ಹಜಾರೆ, ಇದು ಭ್ರಷ್ಟಾಚಾರದ ವಿರುದ್ಧ ಹೋರಾಟವಾಗಿದ್ದು, ಭಾರತವನ್ನು ಭ್ರಷ್ಟಾಚಾರ-ಮುಕ್ತವಾಗಿಸಲು ನೀವೂ ಉಪವಾಸ ಮಾಡಿ ಎಂದು, ಈ ಹೋರಾಟದಲ್ಲಿ ಕೈಜೋಡಿಸಬೇಕೆಂದು ಕೇಳಿಕೊಂಡಿದ್ದಾರೆ.

ಬೇರೆಯವರಿಂದ ಪ್ರಭಾವಕ್ಕೀಡಾಗಲು ನಾನೇನೂ ಮಗುವಲ್ಲ...
ತನ್ನ ಉಪವಾಸದ ಕುರಿತು ಕಾಂಗ್ರೆಸ್ ಪಕ್ಷ ಮತ್ತು ಅದರ ವಕ್ತಾರರು ಎತ್ತಿರುವ ಆಕ್ಷೇಪಾರ್ಹ ಮಾತುಗಳ ಕುರಿತು ಈ ಬಹಿರಂಗ ಪತ್ರದಲ್ಲಿ ನೋವಿನಿಂದಲೇ ಸ್ಪಷ್ಟಪಡಿಸಿರುವ ಹಜಾರೆ, ಯಾರದೋ ಕುಮ್ಮಕ್ಕಿನಿಂದ ಉಪವಾಸ ನಡೆಸುತ್ತಿರುವುದಾಗಿ ಆರೋಪಿಸಲಾಗಿದೆ. ಇದು ನನ್ನ ಬೌದ್ಧಿಕತೆಗೆ ಅವಮಾನ. ಬೇರೆಯವರಿಂದ 'ಪ್ರಭಾವ'ಕ್ಕೀಡಾಗಿ ಆಮರಣ ಉಪವಾಸ ನಡೆಸಲು ನಾನೇನೂ ಮಗುವಲ್ಲ. ಯಾರೇನೇ ಸಲಹೆ ಕೊಟ್ಟರೂ ಒಳಿತು-ಕೆಡುಕು ನಿರ್ಧರಿಸುವ ಬುದ್ಧಿಶಕ್ತಿ ತನಗಿದೆ. ಈ ರೀತಿ ಆಗಿರುವುದು ಇದೇ ಮೊದಲಲ್ಲ. ಹಿಂದೆಯೂ ಭ್ರಷ್ಟಾಚಾರ ವಿರುದ್ಧ ಧ್ವನಿ ಎತ್ತಿದಾಗ, ಸಮಸ್ಯೆಯ ಬಗ್ಗೆ ಗಮನ ಹರಿಸುವುದು ಬಿಟ್ಟು ಒಳಸಂಚು ಸಿದ್ಧಾಂತವನ್ನೇ ಮುಂದಿಟ್ಟಿವೆ ಎಂದಿದ್ದಾರೆ.

ಇನ್ನೂ ಸ್ವಾತಂತ್ರ್ಯ ಸಿಕ್ಕಿಲ್ಲ...
ಭ್ರಷ್ಟಾಚಾರ ನಡೆಯಲು ಈ ಹಿಂದಿನ ಪ್ರತಿಯೊಂದು ಸರಕಾರಕ್ಕೂ ಇಚ್ಛಾಶಕ್ತಿಯಾಗಲೀ, ಬದ್ಧತೆಯಾಗಲೀ ಇರಲಿಲ್ಲ. ಸ್ವಾತಂತ್ರ್ಯ ಸಿಕ್ಕಿ 62 ವರ್ಷಗಳೇ ಆದರೂ, ನಮಗೆ ಸ್ವಾತಂತ್ರ್ಯ ಇಲ್ಲ ಮತ್ತು ಪರಿಣಾಮಕಾರಿ ಭ್ರಷ್ಟಾಚಾರ-ವಿರೋಧಿ ವ್ಯವಸ್ಥೆಯೂ ಇಲ್ಲ. ಕಳೆದ 42 ವರ್ಷಗಳಲ್ಲಿ 8 ಬಾರಿ ಸಂಸತ್ತಿನಲ್ಲಿ ಲೋಕಪಾಲ ಮಸೂದೆ ಮಂಡನೆಯಾಗಿದೆ. ಈ ದುರ್ಬಲ ಮಸೂದೆಗಳಿಗೆ ಕೂಡ ಅಂಗೀಕಾರ ದೊರೆತಿಲ್ಲ. ಅಂದರೆ, ರಾಜಕಾರಣಿಗಳು ಮತ್ತು ಅಧಿಕಾರಿಗಳು ತಮ್ಮ ಮೇಲೆ ನೇರ ಪರಿಣಾಮ ಬೀರಬಲ್ಲ ಯಾವುದೇ ಕಾನೂನನ್ನು ಅಂಗೀಕಾರವಾಗಲು ಬಿಡುವುದಿಲ್ಲ. ಅಭೂತಪೂರ್ವ ಹಗರಣಗಳು ದೇಶವನ್ನು ಕಾಡುತ್ತಿರುವಾಗ ಜನರು ತಾಳ್ಮೆಗೆಡುತ್ತಿದ್ದಾರೆ. ಹೀಗಾಗಿ ನಿಮ್ಮತ್ತ ನಾನು ನೋಡುತ್ತಿದ್ದೇವೆ. ಹಿಂದಿನ ಸಂಪ್ರದಾಯವನ್ನೇ ಪಾಲಿಸಬೇಕಿಲ್ಲ. ದೃಢವಾದ ಅಭೂತಪೂರ್ವ ಕ್ರಮ ಕೈಗೊಳ್ಳಿ ಎಂದು ಪ್ರಧಾನಿಗೆ ಹಜಾರೆ ಕೋರಿದ್ದಾರೆ.

ಭ್ರಷ್ಟರೇ ಇರುವ ಮಂಡಳಿಯೇಕೆ...
ಲೋಕಪಾಲ ಮಸೂದೆಯ ಕರಡು ಸಿದ್ಧಪಡಿಸಲು ಸಚಿವರ ಮಂಡಳಿಯನ್ನು ನೇಮಿಸಿದ್ದೀರಿ. ಇದರಲ್ಲಿರುವ ಹೆಚ್ಚಿನವರು ಭ್ರಷ್ಟಾಚಾರದ ಚರಿತ್ರೆಯುಳ್ಳವರೇ. ಸರಿಯಾದ ಕಾನೂನಿದ್ದಿದ್ದರೆ ಅವರಲ್ಲಿ ಕೆಲವರು ಜೈಲಿನಲ್ಲಿರುತ್ತಿದ್ದರು. ಇಂತಹಾ ಸಮಿತಿಯ ಮೇಲೆ ನಾವು ಭರವಸೆಯಿಡಬೇಕೇ ಎಂದು ಅವರು ಪ್ರಶ್ನಿಸಿದ್ದಾರೆ.

ಡಿಸೆಂಬರ್ 1ರಂದು ಹಲವು ಪತ್ರಗಳು ಬರೆದು, ಜನ ಲೋಕಪಾಲ ಮಸೂದೆಯ ಕರಡು ಪ್ರತಿಯನ್ನೂ ಕಳುಹಿಸಿದ್ದರೂ ನಿಮ್ಮಿಂದ ಯಾವುದೇ ಉತ್ತರ ಬಂದಿಲ್ಲ. ಉಪವಾಸ ಮಾಡುತ್ತೇನೆ ಎಂದು ಹೇಳಿದ ಬಳಿಕವಷ್ಟೇ ಸರಕಾರವು ಮಾರ್ಚ್ 7ರಂದು ಚರ್ಚೆಗೆ ಕರೆಯಿತು. ಅಂದರೆ ಬೆದರಿಕೆಯೊಡ್ಡಿದರೆ ಮಾತ್ರವೇ ಸರಕಾರ ಕೆಲಸ ಮಾಡುತ್ತದೆ ಎಂಬಂತೆಯೇ? ಎಂದು ಕೇಳಿದ ಅವರು,

ಮೊಯಿಲಿಗೆ ಕಳುಹಿಸಿದ್ದ ಜನ ಲೋಕಪಾಲ ಕರಡು ಕಳೆದು ಹೋಯ್ತಂತೆ!...
ನಮ್ಮ "ಭ್ರಷ್ಟಾಚಾರ ವಿರುದ್ಧ ಭಾರತ" ಸಂಘಟನೆ ಸದಸ್ಯರು ಕಾನೂನು ಮಂತ್ರಿ ವೀರಪ್ಪ ಮೊಯಿಲಿಯಲ್ಲಿ ಪ್ರತ್ಯೇಕವಾಗಿ ಭೇಟಿಯಾಗಿ ಜನ ಲೋಕಪಾಲ ಮಸೂದೆಯ ಕರಡು ಪ್ರತಿ ನೀಡಿದ್ದರು. ನಾನು ನಿಮ್ಮೊಂದಿಗೆ ಮಾತುಕತೆ ನಡೆಸುವ ಕೆಲವೇ ಗಂಟೆಗಳ ಮೊದಲು ಮೊಯಿಲಿ ಕಚೇರಿಯಿಂದ ದೂರವಾಣಿ ಕರೆ ಬಂದು, ಆ ಕರಡು ಕಳೆದುಹೋಗಿದೆ, ಇನ್ನೊಂದು ಪ್ರತಿಯನ್ನು ಕೊಡಿ ಎಂಬ ಕೋರಿಕೆ ಬಂತು. ಇದು ಜನ ಲೋಕಪಾಲ ಮಸೂದೆಯನ್ನು ಸರಕಾರವು ಪರಿಗಣಿಸಿದ ರೀತಿಗೆ ಸಾಕ್ಷಿ ಎಂದು ಹಜಾರೆ ಕೆಂಡ ಕಾರಿದ್ದಾರೆ.

ದಿಕ್ಕು ತಪ್ಪಿಸುವುದೇಕೆ...
ಇದೀಗ ಇಡೀ ದೇಶವೇ ಭ್ರಷ್ಟಾಚಾರ ವಿರುದ್ಧ ತಾಳ್ಮೆ ಕೆಡುತ್ತಿದೆ. ಆದರೆ, ಕರಡು ತಯಾರಿಸಲು ಜಂಟಿ ಸಮಿತಿ ರೂಪಿಸುವ ಸಂಪ್ರದಾಯವೇ ಇಲ್ಲ ಎನ್ನುತ್ತಿದ್ದಾರೆ ನಿಮ್ಮ ಪಕ್ಷದ ವಕ್ತಾರರು. ಮಹಾರಾಷ್ಟ್ರದಲ್ಲಿ ಕನಿಷ್ಠ ಏಳು ಕಾಯಿದೆಗಳು ಜಂಟಿ ಸಮಿತಿ ಮೂಲಕವೇ ಬಂದಿದ್ದವು. ಕೇಂದ್ರದಲ್ಲಿ ಕೂಡ, ಎರಡು ವರ್ಷಗಳ ಹಿಂದೆ ನಿಮ್ಮದೇ ಸರಕಾರ ಭೂಮಸೂದೆ ಕುರಿತು 48 ಗಂಟೆಗಳೊಳಗೆ ಜಂಟಿ ಸಮಿತಿದ ಉದಾಹರಣೆಯಿದ್ದು, ನೀವೇ ಅದರ ಅಧ್ಯಕ್ಷರಾಗಿದ್ದಿರಿ. ಹಾಗಿರುವಾಗ ಇಂತಹಾ ಸುಳ್ಳು ಹೇಳಿಕೆ ನೀಡಿ, ದೇಶದ ಜನತೆಯ ದಾರಿ ತಪ್ಪಿಸುವ ಕ್ರಮವೇಕೆ ಎಂದವರು ಕೇಳಿದ್ದಾರೆ.

ಮಾತುಕತೆಗೆ ಕರೆದರೂ ನಾವು ಬರುತ್ತಿಲ್ಲ ಎಂದು ಅಪಪ್ರಚಾರ ಮಾಡಲಾಗುತ್ತಿದೆ. ಈ ಕುರಿತು ಚರ್ಚೆಗೆ ಕರೆದು ನಾವು ಬಾರದಿರುವ ಒಂದೇ ಒಂದು ಉದಾಹರಣೆಯಿದ್ದರೆ ಹೇಳಿ ಎಂದ ಅವರು, ಈ ರೀತಿ ಸುಳ್ಳು ಹೇಳಿ ದೇಶದ ಜನತೆಯ ದಿಕ್ಕು ತಪ್ಪಿಸಬೇಡಿ. ಭ್ರಷ್ಟಾಚಾರ ನಿವಾರಿಸಲು ಒಂದು ಉತ್ತರದಾಯಿ ತೀರ್ಮಾನವನ್ನು ತೆಗೆದುಕೊಳ್ಳಿ. ನಮ್ಮ ಆಂದೋಲನದ ಹಿಂದೆ 'ಒಳಸಂಚು' ಇರುವುದನ್ನು ಪತ್ತೆ ಹಚ್ಚುವ ವ್ಯರ್ಥ ಪ್ರಯತ್ನ ಬಿಟ್ಟು, ಭ್ರಷ್ಟಾಚಾರ ತಡೆಗೆ ಮುಂದಾಗಿ ಎಂದು ಪ್ರಧಾನಿಗೆ ನೇರವಾಗಿ ಹೇಳಿದ್ದಾರೆ ಹಜಾರೆ.

ಎರಡನೇ ಸ್ವಾತಂತ್ರ್ಯ ಹೋರಾಟ
ಸುದ್ದಿಗೋಷ್ಠಿಯಲ್ಲಿಯೂ ಈ ವಿಷಯ ಹೇಳಿದ ಹಜಾರೆ, ದೇಶಾದ್ಯಂತ ಯುವಕರು ಈ ಭ್ರಷ್ಟಾಚಾರದ ವಿರುದ್ಧದ ಆಂದೋಲನದಲ್ಲಿ ಪಾಲ್ಗೊಂಡಿರುವುದು ತನಗೆ ನೂರಾನೆ ಬಲ ನೀಡಿದಂತಾಗಿದೆ. ಲೋಕಪಾಲ ಮಸೂದೆ ಎಂಬುದು ಜನತೆಯ ಹಕ್ಕೇ ಹೊರತು, ಸರಕಾರ ಕೊಡುವ ಉಡುಗೊರೆಯೇನಲ್ಲ ಎಂದರು.

ಈ ರೀತಿಯಾಗಿ ಸರಕಾರ ಕಾರ್ಯ ನಿರ್ವಹಿಸಲು ಅವಕಾಶ ಮಾಡಿಕೊಡುವುದಿಲ್ಲ. ಇದು ಎರಡನೇ ಸ್ವಾತಂತ್ರ್ಯ ಹೋರಾಟ. ಜೆಪಿ ಆಂದೋಲನದ ನಂತರದ ಅತಿದೊಡ್ಡ ಜನಾಂದೋಲನ ಇದಾಗಿದೆ. ಸರಕಾರ ಉತ್ತರ ಕೊಡಲೇಬೇಕು ಎಂದು ಆಗ್ರಹಿಸಿದರು.
ಇವನ್ನೂ ಓದಿ