ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಭ್ರಷ್ಟ ರಾಜಕಾರಣಿಗಳು ಕುಡುಕರಂತೆ ವರ್ತಿಸುತ್ತಿದ್ದಾರೆ: ಹಜಾರೆ (Do or die | Movement | Corruption | Anna Hazare)
PTI
ಭ್ರಷ್ಟಾಚಾರ ವಿರೋಧಿ ಜನಲೋಕಪಾಲ ಮಸೂದೆಯನ್ನು ಜಾರಿಗೊಳಿಸುವಂತೆ ಒತ್ತಾಯಿಸಿ ಗಾಂಧಿವಾದಿ ಅಣ್ಣಾ ಹಜಾರೆ ನಡೆಸುತ್ತಿರುವ ಅಮರಣ ಉಪವಾಸ ಸತ್ಯಾಗ್ರಹ ಉಗ್ರಸ್ವರೂಪವನ್ನು ಪಡೆದುಕೊಂಡಿದ್ದು, ಇದೊಂದು ಮಾಡು ಇಲ್ಲವೆ ಮಡಿ ಚಳುವಳಿ ಎಂದು ಹಜಾರೆ ಘೋಷಿಸಿದ್ದಾರೆ.

ರಾಜಕಾರಣಿಗಳನ್ನು ಕುಡುಕರಿಗೆ ಹೋಲಿಸಿದ ಹಜಾರೆ, ಹಣಬಲ, ಅಧಿಕಾರದ ದಾಹದ ಮೋಹದಿಂದಾಗಿ ಮಾನಸಿಕವಾಗಿ ವಿಚಲಿತವಾಗಿದ್ದಾರೆ. ಯಾವುದನ್ನು ಜಾರಿಗೆ ತರಬೇಕು ಯಾವುದನ್ನು ಜಾರಿಗೆ ತರಬಾರದು ಎನ್ನುವ ಗೊಂದಲಕ್ಕೆ ಸಿಲುಕಿದ್ದಾರೆ. ದೇಶಕ್ಕೆ ಅಗತ್ಯವಾದ ಕಾನೂನು ಜಾರಿಗೆ ತರಲು ವಿಫಲವಾಗಿದ್ದಾರೆ ಎಂದು ಕಟುವಾಗಿ ಟೀಕಿಸಿದ್ದಾರೆ.

ಮಾಹಿತಿ ಹಕ್ಕು ಕಾಯ್ದೆ ಜಾರಿಗೆ ತಾವು ಹಮ್ಮಿಕೊಂಡ ಹೋರಾಟವನ್ನು ಸ್ಮರಿಸಿದ ಹಜಾರೆ, ರಾಜಕಾರಣಿಗಳು ಗೋಪ್ಯವಾದದ ಹೆಸರಿನಲ್ಲಿ ಭ್ರಷ್ಟಾಚಾರವನ್ನು ಎಸಗುತ್ತಿದ್ದಾರೆ ಎಂದು ಆರೋಪಿಸಿದರು.

ಭಾರತವನ್ನು ಬ್ರಿಟಿಷರು 100 ವರ್ಷಗಳ ಕಾಲ ನಿರಂತರವಾಗಿ ಲೂಟಿ ಮಾಡಿದರು. 1947ರಲ್ಲಿ ಬ್ರಿಟಿಷರು ಭಾರತವನ್ನು ಬಿಟ್ಟು ತೊಲಗಿದಾಗ ಅವರ ಸ್ಥಾನಕ್ಕೆ ರಾಜಕಾರಣಿಗಳು ಬಂದು ಕುಳಿತಿದ್ದಾರೆ. ಸ್ವಾತಂತ್ರ್ಯ ಬಂದಾಗಲೇ ಮಾಹಿತಿ ಹಕ್ಕು ಕಾಯ್ದೆ ಜಾರಿಗೆ ಬರಬೇಕಾಗಿತ್ತು ಎಂದು ಅಭಿಪ್ರಾಯಪಟ್ಟರು.

ಪ್ರಸ್ತುತ ಸ್ಥಿತಿಯಲ್ಲಿ ಆದರ್ಶ ಹಗರಣ, 2ಜಿ ತರಂಗಾಂತರ ಹಂಚಿಕೆ, ಕಾಮನ್‌ವೆಲ್ತ್ ಗೇಮ್ಸ್ ಸೇರಿದಂತೆ ಹಲವಾರು ಹಗರಣಗಳು ಬಹಿರಂಗವಾಗಿವೆ. ಆದರೆ, ಆರೋಪಿಗಳನ್ನು ಬಂಧಿಸುವ ತಾಕತ್ತು ಸರಕಾರ ತೋರಿಲ್ಲ. ಎಲ್ಲಾ ಆರೋಪಿಗಳನ್ನು ಬಂಧಿಸಿ ಜೈಲಿಗೆ ಕಳುಹಿಸಬೇಕಾಗಿತ್ತು ಎಂದು ಅಣ್ಣಾ ಹಜಾರೆ ಕಿಡಿಕಾರಿದ್ದಾರೆ.
ಇವನ್ನೂ ಓದಿ