ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಹಜಾರೆಗೆ ಮಂತ್ರಿಗಿರಿ ಕಳೆದುಕೊಂಡಿದ್ದ ಶಿವಸೇನೆ ಶಾಸಕ ಆಕ್ಷೇಪ (Suresh Jain | Anna Hazare | Fast | Corruption | Shiv Sena)
ಭ್ರಷ್ಟಾಚಾರ ವಿರುದ್ಧ ಹೋರಾಟ ನಡೆಸುತ್ತಿರುವ ಗಾಂಧಿವಾದಿ, ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆಯವರಿಗೆ ದೇಶದೆಲ್ಲೆಡೆಯಿಂದ ಮತ್ತು ವಿದೇಶದಲ್ಲಿ ನೆಲೆಸಿರುವ ಭಾರತೀಯರಿಂದಲೂ ಬೆಂಬಲ ಸಾಗರದೋಪಾದಿಯಲ್ಲಿ ಹರಿದುಬರುತ್ತಿದ್ದರೆ, ಒಂದು ಕಾಲದಲ್ಲಿ ಅವರ ಹೋರಾಟಕ್ಕೆ 'ತುತ್ತಾಗಿದ್ದ' ಶಿವಸೇನೆಯ ಮಾಜಿ ಮಂತ್ರಿ, ಹಾಲಿ ಶಾಸಕರೊಬ್ಬರು ಅಪಸ್ವರ ಎತ್ತಿದ್ದಾರೆ. ಹಜಾರೆ ವಿರುದ್ಧವೇ ಭ್ರಷ್ಟಾಚಾರ ಆರೋಪಗಳಿರುವುದರಿಂದ ಲೋಕಪಾಲ ಮಸೂದೆ ಕುರಿತು ಅವರು ಹೋರಾಟ ಕೈಬಿಡಬೇಕು, ಅವರಿಗೆ ಹೋರಾಟ ನಡೆಸುವ ಹಕ್ಕಿಲ್ಲ ಎಂದು ಮಹಾರಾಷ್ಟ್ರದ ಜಲಗಾಂವ್ ಶಾಸಕ ಸುರೇಶ್ ಜೈನ್ ಒತ್ತಾಯಿಸಿದ್ದಾರೆ.

ಅಣ್ಣಾ ಹಜಾರೆ ಹೋರಾಟದ ಫಲವಾಗಿ ಕೇಂದ್ರ ಕೃಷಿ ಸಚಿವ ಶರದ್ ಪವಾರ್ ಅವರು ಕರಡು ಸಿದ್ಧಪಡಿಸಲು ರಚಿಸಲಾಗಿದ್ದ ಸಚಿವರ ಗುಂಪಿನಿಂದ ಹೊರಬಂದಿದ್ದಾರೆ. ಅದೇ ರೀತಿ ಅಣ್ಣಾ ಹಜಾರೆಯೂ ಈ ಆಂದೋಲನದ ನೇತೃತ್ವದಿಂದ ಹಿಂದೆ ಸರಿಯಬೇಕು ಎಂದು ಜೈನ್ ಗುರುವಾರ ಆಗ್ರಹಿಸಿದ್ದಾರೆ. ಆದರೆ ಶಿವಸೇನೆಯು ಈಗಾಗಲೇ ಅಣ್ಣಾ ಹಜಾರೆ ಉಪವಾಸ ಸತ್ಯಾಗ್ರಹಕ್ಕೆ ಬೆಂಬಲ ಘೋಷಿಸಿದೆ.

ಇದು ತನ್ನ ವೈಯಕ್ತಿಕ ಹೇಳಿಕೆಯಾಗಿದ್ದು, ಶಿವಸೇನೆಯದ್ದಲ್ಲ ಎಂದೂ ಅವರು ಸ್ಪಷ್ಟಪಡಿಸಿದರು. ಆದರೆ, ಕಾಕತಾಳೀಯವೆಂದರೆ, ಕೆಲವು ವರ್ಷಗಳ ಹಿಂದೆ ಹಜಾರೆ ಅವರ ಭ್ರಷ್ಟಾಚಾರ-ವಿರೋಧಿ ಉಪವಾಸದ ಫಲವಾಗಿ ಮಂತ್ರಿ ಪದವಿ ಕಳೆದುಕೊಂಡದ್ದು ಕೂಡ ಇದೇ ಸುರೇಶ್ ಜೈನ್!

ಸಂಸತ್ತು ಅಥವಾ ಶಾಸಕಾಂಗವು ರಚಿಸುವ ಕಾನೂನಿನ ಕರಡನ್ನು ಒಬ್ಬ ವ್ಯಕ್ತಿಯ ಅಭಿಪ್ರಾಯಗಳು ರೂಪಿಸಬಾರದು. ನಾಳೆ ನಾನು ಕೂಡ ಯಾವುದೇ ಕಾನೂನಿನ ವಿರುದ್ಧ ಉಪವಾಸ ಕೂತರೆ, ಅದು ಸರಕಾರ ತರುವ ಕಾನೂನುಗಳನ್ನೇ ನಿರ್ಧರಿಸುವಂತಿರಬಾರದು. ಭ್ರಷ್ಟಾಚಾರಕ್ಕೆ ಅಂತ್ಯ ಹಾಡಬೇಕು ಎಂಬುದರಲ್ಲಿ ಎರಡು ಮಾತಿಲ್ಲ ಎಂದು ವಿಧಾನಸಭೆಯಲ್ಲಿ ನಡೆಯುತ್ತಿದ್ದ ಚರ್ಚೆ ಸಂದರ್ಭ ಸುರೇಶ್ ಜೈನ್ ಹೇಳಿದರು.
ಇವನ್ನೂ ಓದಿ