ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಜನಾಂದೋಲನಕ್ಕೆ ಜಯ, ಮಣಿದ ಕೇಂದ್ರ; ಅಣ್ಣಾ ನಿರಶನ ಅಂತ್ಯ (India | Manmohan Singh | Anna Hazare | Lokpal Bill)
PTI
'ಜನ ಲೋಕಪಾಲ ಮಸೂದೆ' ರಚನೆಗೆ ಸಂಬಂಧಿಸಿದಂತೆ ಮಂದಿಟ್ಟಿದ್ದ ಬೇಡಿಕೆಗಳಲ್ಲಿ ಹೆಚ್ಚಿನವುಗಳನ್ನು ಈಡೇರಿಸಲು ಸರ್ಕಾರ ಒಪ್ಪಿಕೊಂಡಿರುವ ಹಿನ್ನಲೆಯಲ್ಲಿ ಕಳೆದ ನಾಲ್ಕು ದಿನಗಳಿಂದ ಜಂತರ್ ಮಂಥರ್‌ನಲ್ಲಿ ತಾವು ನಡೆಸುತ್ತಿದ್ದ ನಿರಶನವನ್ನು ಶನಿವಾರ ಬೆಳಗ್ಗೆ ಅಂತ್ಯಗೊಳಿಸುವುದಾಗಿ ಅಣ್ಣಾ ಹಜಾರೆ ಘೋಷಿಸಿದ್ದಾರೆ.

ಇದರೊಂದಿಗೆ ಭ್ರಷ್ಟಾಚಾರ ತಡೆಗಟ್ಟುವ ನಿಟ್ಟಿನಲ್ಲಿ ಜನಲೋಕಪಾಲ ಮಸೂದೆ ಜಾರಿಗೆ ಆಗ್ರಹಿಸಿ ಸಾಮಾಜಿಕ ಕಾರ್ಯಕರ್ತ ಅಣ್ಣ ಹಜಾರೆ ನಡೆಸಿ ಬಂದಿರುವ ಅಮರಣಾಂತ ಉಪವಾಸ ಸತ್ಯಾಗ್ರಹಕ್ಕೆ ಕೇಂದ್ರ ಸರ್ಕಾರ ಮಣಿದಿದೆ. ಜನಲೋಕಪಾಲ ಮಸೂದೆ ಕರಡು ಸಿದ್ಧಪಡಿಸುವ ನಿಟ್ಟಿನಲ್ಲಿ ಹತ್ತು ಮಂದಿಯ ಜಂಟಿ ಸಮಿತಿ ರಚಿಸಲು ಅಧಿಸೂಚನೆ ಹೊರಡಿಸುವುದಾಗಿ ಕೇಂದ್ರ ಸರಕಾರ ಭರವಸೆ ನೀಡಿದೆ.

ಭಾರತೀಯರಿಗೆ ಸಿಕ್ಕ ಜಯ...
ಭ್ರಷ್ಟಾಚಾರ ನಿರ್ಮೂಲನೆಯ ನಿಟ್ಟಿನಲ್ಲಿ ಜನಲೋಕಪಾಲ ಮಸೂದೆ ರಚನೆಗೆ ಕೇಂದ್ರ ಸರ್ಕಾರ ಮಣಿದಿರುವುದು ಭಾರತೀಯರೆಲ್ಲರಿಗೂ ಸಿಕ್ಕ ಜಯವಾಗಿದೆ ಎಂದು ಕಳೆದು ನಾಲ್ಕು ದಿನಗಳಿಂದ ಉಪವಾಸ ಸತ್ಯಾಗ್ರಹ ನಡೆಸಿಕೊಂಡು ಬಂದಿದ್ದ ಅಣ್ಣಾ ತಿಳಿಸಿದರು.

ಎರಡೂ ಕಡೆಯ ಸಂಧಾನಕಾರರು ಹಲವು ಸುತ್ತಿನ ಮಾತುಕತೆಯ ನಂತರ ಒಮ್ಮತಕ್ಕೆ ಬಂದರು. ಹಣಕಾಸು ಸಚಿವ ಪ್ರಣವ್ ಮುಖರ್ಜಿ ಅವರು ಜಂಟಿ ಸಮಿತಿಯ ಅಧ್ಯಕ್ಷರಾಗಿರುವರು. ಜನರ ಪರ ಶಾಂತಿ ಭೂಷಣ್ ಸಹ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುವರು. ಕಾನೂನು ಸಚಿವ ಎಂ. ವೀರಪ್ಪ ಮೊಯಿಲಿ, ದೂರ ಸಂಪರ್ಕ ಸಚಿವ ಕಪಿಲ್ ಸಿಬಲ್, ಗೃಹ ಸಚಿವ ಪಿ. ಚಿದಂಬರಂ ಮತ್ತು ಜಲ ಸಂಪನ್ಮೂಲ ಚಚಿವ ಸಲ್ಮಾನ್ ಖುರ್ಷಿದ್ ಅವರು ಸಮತಿಯಲ್ಲಿರುವ ಇತರ ಸಚಿವರು.

ಜನರ ಪರವಾಗಿ ಅಣ್ಣ ಹಜಾರೆ ಅವರಲ್ಲದೆ, ಕರ್ನಾಟಕದ ಲೋಕಾಯುಕ್ತ ನ್ಯಾಯಮೂರ್ತಿ ಎನ್. ಸಂತೋಷ್ ಹೆಗ್ಡೆ, ವಕೀಲರಾದ ಶಾಂತಿ ಭೂಷಣ್, ಪ್ರಶಾಂತ್ ಭೂಷನ್, ಮಾಹಿತಿ ಹಕ್ಕು ಕಾರ್ಯಕರ್ತ ಅರವಿಂದ್ ಕೇಜ್ರಿವಾಲ್ ಇರಲಿದ್ದಾರೆ.

ಪ್ರಧಾನಿ ಧನ್ಯವಾದ...
ಇದೇ ಸಂದರ್ಭದಲ್ಲಿ ನಿರಶನ ಅಂತ್ಯಗೊಳಿಸಿದ ಅಣ್ಣಾ ಅವರಿಗೆ ಪ್ರಧಾನಿ ಮನಮೋಹನ್ ಸಿಂಗ್ ಧನ್ಯವಾದ ಹೇಳಿದ್ದಾರೆ. ಮುಂಗಾರು ಅಧಿವೇಶನದಲ್ಲಿ ಲೋಕಪಾಲ ಮಸೂದೆಯನ್ನು ಮಂಡಿಸುತ್ತೇವೆ ಎಂದವರು ತಿಳಿಸಿದರು. ಹಾಗೆಯೇ ಜನರು ನಡೆಸಿದ ಹೋರಾಟಕ್ಕೆ ಪ್ರಧಾನಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇವನ್ನೂ ಓದಿ