ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಅತಿ ಹೆಚ್ಚು ಭ್ರಷ್ಟ ದೇಶ ಪಟ್ಟ; ಭಾರತಕ್ಕೆ 4ನೇ ಸ್ಥಾನ! (Most Corrupt Countries | India Number Four | Hong Kong | Cambodia | Indonesia)
ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಅಣ್ಣಾ ಹಜಾರೆ ಅವರ ಹೋರಾಟದ ಫಲವಾಗಿ ಜನಲೋಕಪಾಲ್ ಮಸೂದೆ ಜಾರಿಗೆ ಸರಕಾರ ಗ್ರೀನ್ ಸಿಗ್ನಲ್ ಸಿಕ್ಕಿರುವ ನಡುವೆಯೇ ಭ್ರಷ್ಟಾಚಾರದಲ್ಲಿ ಭಾರತ 4ನೇ ಸ್ಥಾನಕ್ಕೆ ಜಿಗಿದಿರುವ ಅಂಶ ಬೆಳಕಿಗೆ ಬಂದಿದೆ.

ಹಾಂಗ್‌ಕಾಂಗ್ ಮೂಲದ ಬಿಸಿನೆಸ್ ಕನ್ಸ್‌ಲ್ಟೆನ್ಸಿ ರಚಿತ ಪೊಲಿಟಿಕಲ್ ಮತ್ತು ಎಕಾನಾಮಿಕ್ ರಿಸ್ಕ್ (ಪಿಇಆರ್‌ಸಿ) ನಡೆಸಿರುವ ಸಮೀಕ್ಷೆಯ ಅತಿ ಹೆಚ್ಚು ಭ್ರಷ್ಟಾಚಾರದಲ್ಲಿ ಮುಳುಗಿರುವ 16 ದೇಶಗಳ ಪೈಕಿ ಭಾರತ 4ನೇ ಸ್ಥಾನದಲ್ಲಿದೆ.

ಪ್ರಥಮ ಸ್ಥಾನದಲ್ಲಿ ಕಾಂಬೋಡಿಯಾ (9.27), ದ್ವಿತೀಯ ಇಂಡೋನೇಷಿಯಾ (9.25). ತೃತೀಯ ಸ್ಥಾನ ಫಿಲಿಫೈನ್ಸ್ (8.9) ಹಾಗೂ ನಾಲ್ಕನೆ ಸ್ಥಾನದಲ್ಲಿ ಭಾರತ (8.67) ಸ್ಥಾನ ಪಡೆದಿದೆ. ನಂತರದ ಸ್ಥಾನಗಳಲ್ಲಿ ವಿಯೆಟ್ನಾಂ (8.3), ಚೀನಾ (7.93), ಥಾಯ್ಲೆಂಡ್ (7.55). ಅಮೆರಿಕ (2.39) ಜಪಾನ್ (1.90), ಆಸ್ಟ್ರೇಲಿಯಾ (1.39) ಹಾಂಗ್‌ಕಾಂಗ್(1.10) ಮತ್ತು ಸಿಂಗಾಪುರ್(0.37) ಇದೆ.

ಅದೇ ರೀತಿ ಭಾರತದಲ್ಲಿನ ರಾಜಕಾರಣಿಗಳು ಮತ್ತು ನಾಗರಿಕರು ರಾಷ್ಟ್ರಮಟ್ಟದ ರಾಜಕಾರಣಿಗಳು ಹಾಗೂ ನಾಗರಿಕರಿಗಿಂತ ಹೆಚ್ಚು ಭ್ರಷ್ಟರು(9.25) ಎಂದು ವರದಿ ತಿಳಿಸಿದೆ.

ಭಾರತದ ನಾಗರಿಕ ಸೇವಾ ಅಧಿಕಾರಿಗಳೂ ಸಹ ಹೆಚ್ಚು ಭ್ರಷ್ಟರಾಗಿದ್ದು,ನಾಗರಿಕ ಸೇವಾ ಅಧಿಕಾರಿಗಳೂ ಕೂಡ ಆ ಸಾಲಿಗೆ ಸೇರಿದ್ದಾರೆ. ಇಲ್ಲಿಯೂ ಭಾರತ ನಾಗರಿಕ ಸೇವಾ ಅಧಿಕಾರಿಗಳೇ ಹೆಚ್ಚು ಭ್ರಷ್ಟರು ಎಂದು ವರದಿ ವಿವರಿಸಿದೆ. ಕೇಂದ್ರ ಸರಕಾರ ಹಗರಣಗಳ ಸರಮಾಲೆಯಿಂದ 2ಜಿ ಹಗರಣ, ಕಾಮನ್ವೆಲ್ತ್ ಗೇಮ್ಸ್ ಆಯೋಜನೆಯಲ್ಲಿ ನಡೆದ ಹಗರಣ, ಸೇನಾ ಅಧಿಕಾರಿಗಳನ್ನೊಳಗೊಂಡ ಭೂ ಹಗರಣ ಮತ್ತು ಅಕ್ರಮ ಆಸ್ತಿ ಸಂಪಾದನೆ ಬಗ್ಗೆ ವರದಿ ಒತ್ತು ನೀಡಿದೆ.

ಅಮೆರಿಕ ಮತ್ತು ಭಾರತ ನಡುವಿನ ಅಣು ಒಪ್ಪಂದಕ್ಕೆ 2008ರಲ್ಲಿ ಸಂಸದರನ್ನು ಖರೀದಿ ಮಾಡಲು ಹಣ ನೀಡಲಾಗಿತ್ತು ಎಂದು ವಿಕಿಲೀಕ್ಸ್ ಬಹಿರಂಗಪಡಿಸಿದ ವರದಿ ಆಧಾರದಲ್ಲಿ ಸಮೀಕ್ಷೆ ನಡೆಸಲಾಯಿತು ಎಂದು ವರದಿ ತಿಳಿಸಿದೆ.
ಇವನ್ನೂ ಓದಿ