ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಭ್ರಷ್ಟರಿಗೆ ಗಲ್ಲುಶಿಕ್ಷೆ ವಿಧಿಸೋ ಕಾನೂನು ಬೇಕು: ಅಣ್ಣಾ ಹಜಾರೆ (Baba Ramdev | Anna Hazare | Lokpal Bill | Kiran Bedi | UPA)
'ದೇಶದ ಪ್ರಜಾಪ್ರಭುತ್ವ, ಸಂವಿಧಾನದ ಮೇಲೆ ಅಪಾರ ಗೌರವವಿದೆ. ಆದರೆ ಭ್ರಷ್ಟಾಚಾರದ ವಿರುದ್ಧ ಹೋರಾಟ ನಮಗೆ ಅನಿವಾರ್ಯವಾಗಿತ್ತು. ಹಾಗಂತ ಪ್ರತಿಭಟನೆ ಬ್ಲ್ಯಾಕ್‌ಮೇಲ್ ತಂತ್ರ ಅಲ್ಲ' ಎಂದು ಹೇಳಿರುವ ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ, ಭ್ರಷ್ಟರಿಗೆ ಗಲ್ಲುಶಿಕ್ಷೆ ವಿಧಿಸುವ ಕಾನೂನಿನ ಅಗತ್ಯವಿದೆ ಎಂದರು.

ಭಾನುವಾರ ಸಂಜೆ ನವದೆಹಲಿಯಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಪ್ರತಿಯೊಬ್ಬ ಮತದಾರನೂ ದೇಶದ ಮಾಲೀಕರಾಗಿದ್ದಾರೆ. ನಾವು ನಮ್ಮ ಹಕ್ಕಿಗಾಗಿ ಹೋರಾಡುವುದು ತಪ್ಪಲ್ಲ ಎಂದು ಪ್ರತಿಪಾದಿಸಿದರು.

ಭ್ರಷ್ಟಾಚಾರ ವಿರುದ್ಧದ ಹೋರಾಟಕ್ಕೆ ಈ ರೀತಿಯ ಬೆಂಬಲ ನಿರೀಕ್ಷಿಸಿರಲಿಲ್ಲವಾಗಿತ್ತು. ಈ ಬೆಂಬಲ ನಮ್ಮಲ್ಲಿ ಮತ್ತಷ್ಟು ಉತ್ಸಾಹ ಮೂಡಿಸಿದೆ. ಹಾಗಾಗಿ ಮಸೂದೆ ಜಾರಿಯಿಂದ ಭ್ರಷ್ಟಾಚಾರಕ್ಕೆ ಕಡಿವಾಣ ಬೀಳಲು ಸಹಾಯಕವಾಗುತ್ತದೆ. ಅದೇ ರೀತಿ ಕರಡು ಸಮಿತಿಯಲ್ಲಿ ಯಾವುದೇ ಬದಲಾವಣೆ ಇಲ್ಲ. ಸಮಿತಿ ರಚನೆ ಬಗ್ಗೆಯೂ ಭಿನ್ನಮತವಿಲ್ಲ ಎಂದು ಸ್ಪಷ್ಟನೆ ನೀಡಿದರು.

ಮುಂದಿನ ವಾರ ಕರಡು ಸಮಿತಿ ಸಭೆ ನಡೆಯಲಿದೆ. ಅಲ್ಲದೆ ಸಮಿತಿಯ ಸದಸ್ಯರು ತಮ್ಮ ಆಸ್ತಿ ವಿವರನ್ನು ಘೋಷಿಸಿಕೊಳ್ಳಬೇಕು ಎಂದು ಸಲಹೆ ನೀಡಿದ ಅಣ್ಣಾ ಹಜಾರೆ, ಸಮಿತಿಯ ಸಭೆ ಸಾರ್ವಜನಿಕವಾಗಿ ನಡೆಯಲಿದೆ. ಮಸೂದೆ ಪ್ರಕ್ರಿಯೆಗಳ ವೀಡಿಯೋ ಚಿತ್ರೀಕರಣ ಕೂಡ ನಡೆಯಲಿದೆ ಎಂದು ವಿವರಿಸಿದರು.

ಸಮಿತಿಯಲ್ಲಿ ತಜ್ಞರಿರಬೇಕು, ವ್ಯಕ್ತಿಗಳು ನಗಣ್ಯ:
ಲೋಕಪಾಲ್ ಮಸೂದೆ ರಚನಾ ಜಂಟಿ ಸಮಿತಿಯಲ್ಲಿ ತಜ್ಞರು ಇರುವುದು ಮುಖ್ಯವಿನಃ ವ್ಯಕ್ತಿಗಳು ನಗಣ್ಯ ಎಂದು ಬಾಬಾ ರಾಮ್‌ದೇವ್ ಎತ್ತಿದ ಆಕ್ಷೇಪಕ್ಕೆ ಈ ರೀತಿ ಪ್ರತಿಕ್ರಿಯೆ ನೀಡಿದರು. ಈ ಬಗ್ಗೆ ಬಾಬಾ ರಾಮ್‌ದೇವ್ ಜತೆ ಚರ್ಚಿಸಿದ್ದೇನೆ ಎಂದ ಹಜಾರೆ, ಕಿರಣ್ ಬೇಡಿ ಸಮಿತಿಯ ಸದಸ್ಯತ್ವ ಬೇಡ ಎಂದಿದ್ದರು. ಆ ನಿಟ್ಟಿನಲ್ಲಿ ಸಮಿತಿ ರಚನೆಯಲ್ಲಿ ಯಾವುದೇ ಅಪಸ್ವರ ಇಲ್ಲ ಎಂದು ಹೇಳಿದರು.

ಒಂದೇ ಕುಟುಂಬದ ಇಬ್ಬರೂ ಸಮಿತಿಯಲ್ಲಿ ಇರುವುದು ತಪ್ಪಲ್ಲ, ನಮಗೆ ಬೇಕಿರುವುದು ಅನುಭವ ಹೊಂದಿರುವ ತಜ್ಞರು. ಲೋಕಪಾಲ್ ಮಸೂದೆ ಸದೃಢವಾಗಿ ರಚನೆಯಾಗಬೇಕು. ಅದಕ್ಕೆ ತಜ್ಞರು ಬೇಕು ಹಾಗಾಗಿ ಸಮಿತಿಯಲ್ಲಿ ತಜ್ಞರಿರುವುದು ಮುಖ್ಯವೇ ಹೊರತು ಯಾವುದೇ ವ್ಯಕ್ತಿಗಳ ಪ್ರಾಮುಖ್ಯತೆ ಮುಖ್ಯ ಅಲ್ಲ ಎಂದು ತಿಳಿಸಿದರು.
ಇವನ್ನೂ ಓದಿ