ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » 44 ವರ್ಷದ ಮಹಿಳೆ 10ನೇ ವಿದ್ಯಾರ್ಥಿ ಜತೆ ಪರಾರಿ (44 Year Old Woman | Elopes | Student)
ಅದೇನು ಪ್ರೇಮವೋ, ಅಥವಾ ಬೇರೇನೋ... 44 ವರ್ಷದ, ಮೂರು ಮಕ್ಕಳ ತಾಯಿಯೊಬ್ಬಳು 10ನೇ ತರಗತಿ ವಿದ್ಯಾರ್ಥಿಯೊಬ್ಬನ ಜೊತೆ ಓಡಿ ಹೋದ ಘಟನೆಯೊಂದು ಗಾಜಿಯಾಬಾದ್‌ನಿಂದ ವರದಿಯಾಗಿದೆ.

ಮೂರು ದಿನಗಳ ಹಿಂದೆ ಈ ಮಹಿಳೆಯು ಗುಡ್ಡು ಎಂಬ 17 ವರ್ಷ ಪ್ರಾಯದ ಹುಡುಗನ ಜೊತೆ ನಾಪತ್ತೆಯಾಗಿದ್ದಾಳೆ. ಇದು ಪರಾರಿ ಪ್ರಕರಣ ಎಂದು ಹೇಳಲಾಗುತ್ತಿದೆಯಾದರೂ, ಅಪಹರಣದ ಕೇಸು ದಾಖಲಾಗಿದೆ.

ಈ ಕುರಿತು ಹುಡುಗನ ತಂದೆಯು ಪೊಲೀಸಧಿಕಾರಿ ರಘುವೀರ್ ಲಾಲ್ ಅವರನ್ನು ಬುಧವಾರ ಭೇಟಿಯಾಗಿ, ಇದು ಅಪಹರಣ ಪ್ರಕರಣ ಎಂದು ದೂರು ಕೊಟ್ಟಿದ್ದಾರೆ. ಹೀಗಾಗಿ ಮಹಿಳೆಯ ಮೇಲೆ ಅಪಹರಣದ ಕೇಸನ್ನೇ ದಾಖಲಿಸಲಾಗಿದೆ ಎಂದಿದ್ದಾರೆ ಪೊಲೀಸರು.
ಇವನ್ನೂ ಓದಿ