ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ರಾಹುಲ್ ಗಾಂಧಿ 'ಅಮೂಲ್ ಬೇಬಿ': ಕೇರಳ ಸಿಎಂ ವ್ಯಂಗ್ಯ (Achuthanandan | Kerala | Amul baby | Rahul Gandhi | CPM)
PTI
ಕೇರಳ ವಿಧಾನಸಭೆ ಚುನಾವಣೆಯಲ್ಲಿ ಎಲ್‌ಡಿಎಫ್ ಗೆದ್ದರೆ ಮುಂದಿನ ಚುನವಾಣೆವರೆಗೆ ಆ ರಾಜ್ಯಕ್ಕೆ 93ರ ಹರೆಯದ ವೃದ್ಧರೊಬ್ಬರು ಮುಖ್ಯಮಂತ್ರಿಯಾಗಿರುತ್ತಾರೆ ಎಂಬ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಾಹುಲ್ ಗಾಂಧಿ ಹೇಳಿಕೆಗೆ ಕೇರಳ ಮುಖ್ಯಮಂತ್ರಿ ವಿ. ಎಸ್. ಅಚ್ಯುತಾನಂದನ್ ತಿರುಗೇಟು ನೀಡಿದ್ದು, ಕಾಂಗ್ರೆಸ್‌ನ ಈ ಯುವ ನೇತಾರನನ್ನು 'ಅಮೂಲ್ ಬೇಬಿ' ಎಂದು ವ್ಯಂಗ್ಯವಾಡಿದ್ದಾರೆ.

ಇದೇ ಸಂದರ್ಭದಲ್ಲಿ ಕೇರಳ ಮತ್ತು ಪಶ್ಚಿಮ ಬಂಗಾಳದಲ್ಲಿ ಎಡರಂಗ ಅಧಿಕಾರದಿಂದಾಗಿ ಗಂಭೀರ ಹಾನಿಯನ್ನುಂಟು ಮಾಡಿದೆಯೆಂಬ ಪ್ರಧಾನಿ ಮನಮೋಹನ್ ಸಿಂಗ್ ಹೇಳಿಕೆಗೂ ಕೇರಳ ಸಿಎಂ ತಿರುಗೇಟು ನೀಡಿದ್ದಾರೆ.

ರಾಹುಲ್ ಗಾಂಧಿ ಅವರೊಬ್ಬ ಅಮೂಲ್ ಬೇಬಿ; ಇದರ ಪ್ರಚಾರಕ್ಕಾಗಿ ಅವರು ಇಲ್ಲಿಗೆ ಆಗಮಿಸಿದ್ದಾರೆ ಎಂದು ಪಾಲಕ್ಕಾಡ್‌ನಲ್ಲಿ ನಡೆದ ಚುನಾವಣಾ ರ‌್ಯಾಲಿನಲ್ಲಿ ಅಚ್ಯುತಾನಂದನ್ ತರಾಟೆ ತೆಗೆದುಕೊಂಡರು.

ಕಾಂಗ್ರೆಸ್‌ ನೇತೃತ್ವದ ಯುಡಿಎಫ್ ಯುವಕರ ಹಾಗೂ ಅನುಭವಿಗಳ ಸಂಗಮವಾಗಿದೆ ಎಂದು ಕೇರಳಕ್ಕೆ ಶನಿವಾರ ಭೇಟಿ ನೀಡಿದ್ದ ಸಂದರ್ಭದಲ್ಲಿ ರಾಹುಲ್ ನುಡಿದಿದ್ದರು. ಎಲ್‌ಡಿಎಫ್ ಮತ್ತೆ ಅಧಿಕಾರಕ್ಕೆ ಬಂದಲ್ಲಿ ಮುಂದಿನ ಐದು ವರ್ಷ 93ರ ಹರೆಯದ ವಯೋವೃದ್ಧರು ಮುಖ್ಯಮಂತ್ರಿಗಳಾಗುತ್ತಾರೆ ಎಂದು ಅಪಹಾಸ್ಯ ಮಾಡಿದ್ದರು.

ರಾಹುಲ್ ಅವಹೇಳನಕ್ಕೆ ಪ್ರತಿಯಾಗಿ ಅಚ್ಯುತಾನಂದನ್, ನಾನು 16ರ ಹರೆಯದಿಂದಲೇ ರಾಜಕೀಯ ಪ್ರವೇಶ ಮಾಡಿದ್ದು, ಯಾವತ್ತೂ ಭ್ರಷ್ಟಾಚಾರಕ್ಕೆ ತಲೆಬಾಗಿದವನಲ್ಲ ಎಂದು ಉತ್ತರಿಸಿದ್ದಾರೆ. ಒಟ್ಟಿನಲ್ಲಿ ಕೇರಳದಲ್ಲಿ ವಿಧಾನಸಭೆ ಚುನಾವಣೆ ಕಾವೇರುತ್ತಿದ್ದಂತೆಯೇ ಪ್ರಮುಖ ನಾಯಕರ ಹೇಳಿಕೆಯು ಬಾರಿ ಗಮನ ಸಳೆಯುತ್ತಿವೆ.
ಇವನ್ನೂ ಓದಿ