ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ತಮಿಳುನಾಡು, ಕೇರಳ, ಪುದುಚೇರಿ ಮತದಾನ ಆರಂಭ (Assembly Elections 2011 | Tamilnadu | Kerala | Puducherry | Vote)
ತಮಿಳುನಾಡಿನ 234, ಕೇರಳದ 140 ಹಾಗೂ ಪುದುಚೇರಿಯ 30 ವಿಧಾನಸಭಾ ಕ್ಷೇತ್ರಗಳಿಗೆ ನಿರ್ಣಾಯಕ ಮತದಾನವು ಬುಧವಾರ ಬೆಳಗ್ಗೆ ಬಿರುಸಿನಿಂದ ಆರಂಭವಾಗಿದ್ದು, ಪಟ್ಟಣ ಪ್ರದೇಶಗಳಲ್ಲಿ ಜನಸಂಚಾರ ಕಡಿಮೆ ಇದ್ದರೂ, ಜನತೆ ಉತ್ಸಾಹದಿಂದ ಮತ ಚಲಾಯಿಸಿದರು.

ತಮಿಳುನಾಡಿನಲ್ಲಿ ಮುಖ್ಯಮಂತ್ರಿ ಎಂ.ಕರುಣಾನಿಧಿ, ಪುತ್ರ ಸ್ಟಾಲಿನ್, ಮಾಜಿ ಮುಖ್ಯಮಂತ್ರಿ ಜೆ.ಜಯಲಲಿತಾ, ನಟ ವಿಜಯಕಾಂತ್ ಮುಂತಾದ ಪ್ರಮುಖರು ಹೋರಾಟ ಕಣದಲ್ಲಿದ್ದು, ಮೇ 13ರವರೆಗೆ ಫಲಿತಾಂಶಕ್ಕಾಗಿ ಕಾತರದಿಂದ ಕಾಯಲಿದ್ದಾರೆ. ಆಡಳಿತ-ವಿರೋಧಿ ಅಲೆಯಿರುವುದರಿಂದಾಗಿ ಜಯಲಲಿತಾ ಅವರ ಎಐಎಡಿಎಂಕೆ ಮೈತ್ರಿಕೂಟವು ಅಧಿಕಾರಕ್ಕೆ ಮರಳುವ ಉತ್ಸಾಹದಲ್ಲಿದೆ.

ಎಲ್ಲೆಡೆ ಬಿಗಿ ಭದ್ರತೆ ಏರ್ಪಡಿಸಲಾಗಿದ್ದು, 2748 ಅಭ್ಯರ್ಥಿಗಳಲ್ಲಿ ಉತ್ತಮರನ್ನು 4.6 ಕೋಟಿ ಮತದಾರರು ಆಯ್ಕೆ ಮಾಡುತ್ತಿದ್ದಾರೆ. 5400 ಚುನಾವಣಾ ಬೂತ್‌ಗಳನ್ನು ರಚಿಸಲಾಗಿದೆ.

ಡಿಎಂಕೆ 119 ಸ್ಥಾನಗಳಲ್ಲಿ, ಕಾಂಗ್ರೆಸ್ 63, ಪಿಎಂಕೆ 30ರಲ್ಲಿ ಮೈತ್ರಿಕೂಟದ ಮೂಲಕ ಸ್ಪರ್ಧಿಸುತ್ತಿದ್ದರೆ, ಎಐಎಡಿಎಂಕೆ 160 ಸ್ಥಾನದಲ್ಲಿಯೂ, ಮಿತ್ರಪಕ್ಷ ಡಿಎಂಡಿಕೆಗೆ 41, ಸಿಪಿಎಂಗೆ 12 ಹಾಗೂ ಸಿಪಿಐಗೆ 10 ಸ್ಥಾನಗಳನ್ನು ಸ್ಪರ್ಧೆಗೆ ಬಿಟ್ಟು ಕೊಟ್ಟಿದೆ.

ಸುಮಾರು 80 ಕ್ಷೇತ್ರಗಳಲ್ಲಿ ಬದ್ಧ ಪ್ರತಿಸ್ಪರ್ಧಿಗಳಾದ ಆಡಳಿತಾರೂಢ ಡಿಎಂಕೆ ಮತ್ತು ಎಐಎಡಿಎಂಕೆ ನಡುವೆ ನೇರ ಹೋರಾಟ ಏರ್ಪಟ್ಟಿದೆ.

ಕೇರಳದಲ್ಲಿ 140 ಕ್ಷೇತ್ರಗಳಲ್ಲಿ 971 ಅಭ್ಯರ್ಥಿಗಳು ಅದೃಷ್ಟ ಪರೀಕ್ಷೆಗೆ ಇಳಿದಿದ್ದು, ಇಲ್ಲಿ ಆಡಳಿತಾರೂಢ ಸಿಪಿಎಂ ನೇತೃತ್ವದ ಎಡರಂಗ (ಎಲ್‌ಡಿಎಫ್) ಮತ್ತು ಕಾಂಗ್ರೆಸ್ ನೇತೃತ್ವದ ಯುಡಿಎಫ್ ನಡುವೆ ಕಾಡಾಕಾಡಿ ಹೋರಾಟ ಏರ್ಪಟ್ಟಿದೆ.

ಪುದುಚೇರಿಯ ಸುಮಾರು 8.10 ಲಕ್ಷ ಮತದಾರರು ಕಣದಲ್ಲಿರುವ 187ರಲ್ಲಿ 30 ಅಭ್ಯರ್ಥಿಗಳನ್ನು ಆರಿಸಲಿದ್ದಾರೆ. ಇವರಲ್ಲಿ 78 ಮಂದಿ ಸ್ವತಂತ್ರರು. ಆಡಳಿತಾರೂಢ ಕಾಂಗ್ರೆಸ್ 17ರಲ್ಲಿ ಹಾಗೂ ಮಿತ್ರಪಕ್ಷ ಡಿಎಂಕೆ 10ರಲ್ಲಿ ಕಣಕ್ಕಿಳಿದಿದ್ದರೆ, ಅಖಿಲ ಭಾರತ ಎನ್ಆರ್ ಕಾಂಗ್ರೆಸ್ 17 ಮತ್ತು ಅದರ ಪಾಲುದಾರ ಪಕ್ಷವಾಗಿರುವ ಎಐಎಡಿಎಂಕೆ 10 ಸ್ಥಾನಗಳಲ್ಲಿ ಸ್ಪರ್ಧಿಸುತ್ತಿದೆ.
ಇವನ್ನೂ ಓದಿ