ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಅಕ್ರಮ ಸಂಪಾದನೆ ಕಾಯ್ದೆ: ಜನತೆಯ ಸಲಹೆಗಳಿಗೆ ಸರಕಾರ ಆದ್ಯತೆ (Government | Anti-graft law | Views of public | Corruption | Black money issues)
ಅಕ್ರಮ ಸಂಪಾದನೆ ಕಾಯ್ದೆ: ಜನತೆಯ ಸಲಹೆಗಳಿಗೆ ಸರಕಾರ ಆದ್ಯತೆ
ನವದೆಹಲಿ, ಬುಧವಾರ, 13 ಏಪ್ರಿಲ್ 2011( 12:50 IST )
PTI
ದೇಶದಲ್ಲಿ ಹೆಚ್ಚುತ್ತಿರುವ ಭ್ರಷ್ಟಾಚಾರ ಹಾಗೂ ಕಪ್ಪು ಹಣ ವರ್ಗಾವಣೆ ಸಮಸ್ಯೆಗಳ ಪರಿಹಾರಕ್ಕಾಗಿ, ವಿದೇಶಿ ಅಧಿಕಾರಿಗಳನ್ನು ದೇಶಕ್ಕೆ ಕರೆತಂದು ವಿಚಾರಣೆ ನಡೆಸಲು ಅನುಮತಿ ನೀಡುವ 'ಅಕ್ರಮ ಸಂಪಾದನೆ ವಿರೋಧಿ' ನೀತಿಯನ್ನು ಜಾರಿಗೊಳಿಸುವ ಕುರಿತಂತೆ ಜನತೆ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುವಂತೆ ಸರಕಾರ ಕೋರಿದೆ.
ಕೇಂದ್ರ ಸರಕಾರ ಸಾರ್ವಜನಿಕರಿಗಾಗಿ ಪ್ರಕಟಣೆಯೊಂದನ್ನು ಹೊರಡಿಸಿದ್ದು, ಸಾರ್ವಜನಿಕರು ತಮ್ಮ ಅನಿಸಿಕೆ ಹಾಗೂ ಸಲಹೆ ಸೂಚನೆಗಳನ್ನು ನೀಡುವಂತೆ ಮನವಿ ಮಾಡಿದೆ.
ಬಜೆಟ್ ಅಧಿವೇಶನದ ಕೊನೆಯ ದಿನದಂದು ಅಕ್ರಮ ಸಂಪಾದನೆ ವಿರೋಧಿ ನೀತಿ ಮಸೂದೆ ಕುರಿತಂತೆ ಸಲಹೆಗಳನ್ನು ನೀಡುವಂತೆ ಲೋಕಸಭೆಯ ಮಂಡಿಸಲಾಗಿತ್ತು. ಸಾರ್ವಜನಿಕರಿಂದ ಸಲಹೆ ಸೂಚನೆಗಳನ್ನು ಸ್ವೀಕರಿಸುವ ಗಡುವನ್ನು ಏಪ್ರಿಲ್ 30ರವರೆಗೆ ವಿಸ್ತರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಲಂಚದ ಹಗರಣದಲ್ಲಿ ಭಾಗಿಯಾದ ವಿದೇಶಿ ಅಧಿಕಾರಿಗಳು, ಲಂಚದ ಹಣವನ್ನು ಅಂತಾರಾಷ್ಟ್ರೀಯ ಹಣ ವರ್ಗಾವಣೆ ಮಾಡಿದ ಪ್ರಕರಣಗಳಲ್ಲಿ, ಆರೋಪಿಗಳನ್ನು ಪ್ರಸ್ತುತವಿರುವ ಕಾಯ್ದೆ ಅನ್ವಯ ಬಂಧಿಸಿ ವಿಚಾರಣೆ ನಡೆಸುವಂತಿಲ್ಲ. ಆದ್ದರಿಂದ ನೂತನ ಕಾಯ್ದೆ ಜಾರಿಗೆ ಸರಕಾರ ಸಿದ್ಧತೆ ನಡೆಸಿದೆ ಎಂದು ಮೂಲಗಳು ತಿಳಿಸಿವೆ.
ಭಷ್ಟಾಚಾರವನ್ನು ತಡೆಯಲು ಭಾರತದಲ್ಲಿ ಈಗಾಗಲೇ ಪ್ರೆವೆನ್ಶನ್ ಆಫ್ ಕರಪ್ಶನ್ ಆಕ್ಟ್ 1988 ಮತ್ತು ಪ್ರೆವೆನ್ಶನ್ ಆಫ್ ಮನಿ ಲಾಂಡ್ರಿಂಗ್ ಆಕ್ಟ್ 2002 ಕಾನೂನುಗಳು ಜಾರಿಯಲ್ಲಿವೆ. ಆದರೆ, ಮತ್ತಷ್ಟು ಕಠಿಣವಾದ ನಿಯಮಗಳು ಜಾರಿಗೊಳಿಸುವ ಅಗತ್ಯವಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.