ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಗುಜರಾತ್ ಅಭಿವೃದ್ಧಿ ಹೊಗಳಿದ್ರೆ ಜೋಕೆ: ಹಜಾರೆಗೆ ಮೋದಿ (Anna Hazare | Narendra Modi | Gujarat Development | Corruption)
ಭ್ರಷ್ಟಾಚಾರದ ವಿರುದ್ಧ ಪ್ರಾಣವನ್ನೇ ಪಣಕ್ಕಿಟ್ಟು ಹೋರಾಟ ಮಾಡುತ್ತಿರುವ ಗಾಂಧಿವಾದಿ, ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆಯವರು ತನ್ನನ್ನು ಮನಸಾರೆ ಶ್ಲಾಘಿಸಿರುವುದರಿಂದ ಅವರೀಗ ಗುಜರಾತ್ ಎಂದರೆ ದ್ವೇಷಕಾರುವವರಿಂದ ಅವಮಾನಕಾರಿ ನಿಂದನೆಗೆ ಗುರಿಯಾಗಬಹುದು ಎಂದು ಮುಖ್ಯಮಂತ್ರಿ ನರೇಂದ್ರ ಮೋದಿ ಆತಂಕ ವ್ಯಕ್ತಪಡಿಸಿದ್ದಾರೆ.

"ನೀವು ನನ್ನ ರಾಜ್ಯವನ್ನು ಮತ್ತು ನನ್ನನ್ನು ಹೊಗಳಿ ಹರಸಿದ್ದನ್ನು ನೋಡಿದೆ. ನೀವು ಇನ್ನು ನಿಂದನೆಗೆ, ಟೀಕೆಗಳಿಗೆ ಗುರಿಯಾಗುತ್ತೀರಿ ಎಂಬ ಆತಂಕ ನನ್ನದು. ಸತ್ಯಕ್ಕಾಗಿ ನಿಮ್ಮ ಪ್ರೀತಿ, ತ್ಯಾಗ, ತಪಸ್ಸು ಮತ್ತು ಬದ್ಧತೆಗೆ ಹಾನಿ ತರುವ ಈ ಅವಕಾಶವನ್ನು ಗುಜರಾತ್ ಕಂಡರೆ ಆಗದ 'ಕೆಲವರು' ಖಂಡಿತವಾಗಿಯೂ ಕಳೆದುಕೊಳ್ಳಲು ಇಚ್ಛಿಸಲಾರರು. ನೀವು ನನ್ನ ಮತ್ತು ನನ್ನ ರಾಜ್ಯದ ಬಗ್ಗೆ ಒಳ್ಳೆಯ ಅಭಿಪ್ರಾಯ ವ್ಯಕ್ತಪಡಿಸಿರುವುದರಿಂದ ಅವರು ನಿಮ್ಮ ಹೆಸರು ಹಾಳು ಮಾಡಲು ಪ್ರಯತ್ನಿಸುತ್ತಾರೆ" ಎಂದು ಹಜಾರೆಯವರಿಗೆ ಬರೆದ ಬಹಿರಂಗ ಪತ್ರದಲ್ಲಿ ಮೋದಿ ಎಚ್ಚರಿಕೆಯ ಮಾತುಗಳನ್ನು ಹೇಳಿದ್ದಾರೆ.

ಗುಜರಾತ್ ಮತ್ತು ಬಿಹಾರದ ಮುಖ್ಯಮಂತ್ರಿಗಳು ತಮ್ಮ ರಾಜ್ಯದ ಅಭಿವೃದ್ಧಿಗಾಗಿ ಕೈಗೊಳ್ಳುತ್ತಿರುವ ಕ್ರಮಗಳನ್ನು ನೋಡಿದರೆ, ಮನಸ್ಸು ತುಂಬಿ ಬರುತ್ತಿದ್ದು, ಇದನ್ನೇ ಬೇರೆ ರಾಜ್ಯಗಳ ಮುಖ್ಯಮಂತ್ರಿಗಳೂ ಅನುಕರಿಸಬೇಕು ಎಂದು ಲೋಕಪಾಲ ಮಸೂದೆ ಪರವಾಗಿ ಯಶಸ್ವಿ ಹೋರಾಟ ನಡೆಸಿರುವ ಹಜಾರೆ ಅವರು ಭಾನುವಾರ ಹೇಳಿದ್ದರು.

ಗುಜರಾತ್ ಬಗ್ಗೆ ಯಾರೇ ಒಳ್ಳೆಯ ಮಾತುಗಳನ್ನಾಡಿದರೂ ಆತ ಅಥವಾ ಆಕೆಯ ಮಾನ ಹರಾಜು ಹಾಕುವ ಆಂದೋಲನವೇ ಆರಂಭವಾಗುತ್ತದೆ ಎಂದು ಮೋದಿ ಅವರು ಹಲವು ಉದಾಹರಣೆಗಳೊಂದಿಗೆ ಹಜಾರೆಯವರಿಗೆ ಬರೆದ ಪತ್ರದಲ್ಲಿ ವಿವರಿಸಿದ್ದಾರೆ.

ಹಿಂದೆ, ಗುಜರಾತ್ ಮುಖ್ಯಮಂತ್ರಿಯ ಕಾರ್ಯಗಳನ್ನು ಶ್ಲಾಘಿಸಿದ್ದಕ್ಕೆ ಕೇರಳದ ಸಿಪಿಎಂನ ಹಿರಿಯ ಮುಸ್ಲಿಂ ಸಂಸದ ಪಿ.ಅಬ್ದುಲ್ಲಾ ಕುಟ್ಟಿ ಅವರನ್ನು ಪಕ್ಷದಿಂದಲೇ ಉಚ್ಚಾಟಿಸಿತು. ಗುಜರಾತ್ ಪ್ರವಾಸೋದ್ಯಮ ಅಭಿವೃದ್ಧಿಗಾಗಿ ವೀಡಿಯೋ ತುಣುಕಿನಲ್ಲಿ ಕಾಣಿಸಿಕೊಂಡ ಸೂಪರ್ ಸ್ಟಾರ್ ಅಮಿತಾಭ್ ಬಚ್ಚನ್ ಅವರ ಮೇಲೂ ಕೆಸರು ಎರಚಲಾಯಿತು. ದಿಯೋಬಂದ್ ದಾರೂಲ್ ಉಲೂಮ್ ಮುಖ್ಯಸ್ಥರಾಗಿ ಆಯ್ಕೆಯಾಗಿದ್ದ, ಗುಜರಾತಿನವರೇ ಆದ ಮೌಲಾನಾ ಗುಲಾಂ ವಸ್ತಾನವಿ ಗುಜರಾತ್ ಅಭಿವೃದ್ಧಿ ಕಾರ್ಯಗಳನ್ನು ಶ್ಲಾಘಿಸಿದ್ದಕ್ಕಾಗಿ ವ್ಯಾಪಕ ನಿಂದನೆಗಳಿಗೆ ಗುರಿಯಾಗಬೇಕಾಯಿತು. ಇತ್ತೀಚೆಗಷ್ಟೇ ನಮ್ಮ ರಾಜ್ಯದ ಪ್ರಗತಿಯನ್ನು ಶ್ಲಾಘಿಸಿದ ಭಾರತೀಯ ಸೇನಾಪಡೆಯ ಗೋಲ್ಡನ್ ಕತಾರಾ ವಿಭಾಗದ ಮೇಜರ್ ಜನರಲ್ ಐ.ಎಸ್.ಸಿನ್ಹಾ ಅವರ ಮೇಲೆ ಇದೇ ಗುಜರಾತ್ ವಿರೋಧಿ ಬಣಗಳು ಶಿಸ್ತುಕ್ರಕ್ಕೂ ಆಗ್ರಹಿಸಿದವು ಎಂದು ಮೋದಿ ವಿವರಿಸಿದ್ದಾರೆ.
ಇವನ್ನೂ ಓದಿ