ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಪ್ರಧಾನಿಗೆ ಸಾಕಷ್ಟು ಕೆಲಸ ಇದೆ: ಮೋದಿಗೆ ಕಾಂಗ್ರೆಸ್ (Narendra Modi | Manish Tiwari | Prime Minister | Vote | Assam)
ಪ್ರಧಾನಿಗೆ ಸಾಕಷ್ಟು ಕೆಲಸ ಇದೆ: ಮೋದಿಗೆ ಕಾಂಗ್ರೆಸ್
ನವದೆಹಲಿ, ಶನಿವಾರ, 16 ಏಪ್ರಿಲ್ 2011( 09:04 IST )
ಓಟು ಹಾಕುವ ಮೂಲಕ ಯುವಜನತೆಗೆ ಮಾದರಿಯಾಗಬೇಕಿರುವ ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಅವರೇ ಮತದಾನ ಮಾಡಲು ತಪ್ಪಿಸಿಕೊಂಡಿರುವುದು ನೋವು ತಂದಿದೆ ಎಂಬ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಹೇಳಿಕೆಗೆ ಕಾಂಗ್ರೆಸ್ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದು, ಪ್ರಧಾನಿಗೆ "ಶಾಸನಾತ್ಮಕ ಪೂರ್ವನಿರ್ಧಾರಿತ ಕಾರ್ಯಗಳು ಸಾಕಷ್ಟಿವೆ" ಎಂದು ಸ್ಪಷ್ಟನೆ ನೀಡಿದೆ.
ಮೋದಿ ಹೇಳಿಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ವಕ್ತಾರ ಮನೀಷ್ ತಿವಾರಿ, ಭಾರತವು ಎಷ್ಟು ದೊಡ್ಡ ದೇಶ, ಅದರ ಪ್ರಧಾನಿಗೆ ಸಹಜವಾಗಿ ಶಾಸನಾತ್ಮಕ ಕೆಲಸ ಕಾರ್ಯಗಳಿರುತ್ತವೆ ಒಂದು ಅರ್ಥ ಮಾಡಿಕೊಳ್ಳಲು ಭಾರೀ ಬುದ್ಧಿವಂತಿಕೆಯೇನೂ ಬೇಕಾಗಿಲ್ಲ. ವಿಷಯವೇ ಅಲ್ಲದ ವಿಷಯಗಳನ್ನು ಪ್ರಸ್ತಾಪಿಸುವುದು ಬಿಜೆಪಿಗಾಗಲೀ, ಗುಜರಾತ್ ಮುಖ್ಯಮಂತ್ರಿಗಾಗಲೀ ಶೋಭೆ ತರುತ್ತದೆ ಎಂದು ನನಗನಿಸುವುದಿಲ್ಲ ಎಂದಿದ್ದಾರೆ.
ದೇಶ ಕಟ್ಟುವ ನಿಟ್ಟಿನಲ್ಲಿ ಪ್ರಧಾನಿಯವರ ಕೊಡುಗೆಯನ್ನು ಸಮಗ್ರತೆಯ ದೃಷ್ಟಿಕೋನದಿಂದ ನೋಡಬೇಕು. ಅವರು ಎಷ್ಟು ಸಕ್ರಿಯವಾಗಿ ಅಸ್ಸಾಂನಾದ್ಯಂತ ಚುನಾವಣಾ ಪ್ರಚಾರದಲ್ಲಿ ಭಾಗವಹಿಸಿದ್ದಾರೆ ಮತ್ತು ಅಸ್ಸಾಂ ಅಭಿವೃದ್ಧಿಗೆ ವೈಯಕ್ತಿಕ ಆಸಕ್ತಿ ತೋರಿದ್ದಾರೆ ಎಂಬುದನ್ನು ಗಮನಿಸಬೇಕು ಎಂದು ತಿವಾರಿ ಹೇಳಿದ್ದಾರೆ.