ಲೋಕಪಾಲ ಸಮತಿ ಸಹ ಅಧ್ಯಕ್ಷ ಶಾಂತಿ ಭೂಷಣ್ ವಿರುದ್ಧ ರೂಪಿಸಲಾಗಿರುವ ಸಿಡಿ ನಕಲಿಯಾಗಿದೆ ಎಂದು ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ಸ್ಪಷ್ಟಪಡಿಸಿದ್ದಾರೆ.
ವಿಧಿ ವಿಜ್ಞಾನ ಪ್ರಯೋಗಾಲಯದಲ್ಲಿ ಸಿಡಿ ನಕಲಿ ಎಂಬುದು ಸಾಬೀತಾಗಿದೆ. ಈ ಸಂಬಂಧ ಶಾಂತಿ ಭೂಷಣ್ ಅವರಿಂದ ಸೋಮವಾರ ಸುಪ್ರೀಂ ಕೋರ್ಟ್‌ನಲ್ಲಿ ನಿಂದನಾ ಅರ್ಜಿ ಸಲ್ಲಿಸಲಾಗುತ್ತದೆ ಎಂದು ಅಣ್ಣಾ ಸ್ಪಷ್ಟಪಡಿಸಿದರು.
ಹೀಗಿದ್ದರೂ ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದ ಹಜಾರೆ, ಒಂದು ವೇಳೆ ಆರೋಪ ಸಾಬೀತಾದಲ್ಲಿ ಶಿಕ್ಷೆ ಖಚಿತ ಎಂದು ತಿಳಿಸಿದ್ದಾರೆ.
ಈ ನಡುವೆ ಸ್ಪಷ್ಟನೆ ನೀಡಿರುವ ಶಾಂತಿ ಭೂಷನ್, ನಕಲಿ ಸಿ.ಡಿ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾಗುವುದಾಗಿ ತಿಳಿಸಿದರು.