ಭ್ರಷ್ಟಾಚಾರ ವಿಚಾರದಲ್ಲಿ ತಾನು ಮಾಡಿರುವುದು 'ಬ್ಲ್ಯಾಕ್ ಮೇಲ್' ತಂತ್ರವಾಗಿದ್ದರೆ ಅದನ್ನೇ ಮುಂದುವರಿಸಲಿದ್ದೇನೆ ಎಂದು ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ತಿಳಿಸಿದ್ದಾರೆ.
ಇತ್ತೀಚೆಗಷ್ಟೇ ಜನ ಲೋಕಪಾಲ್ ಮಸೂದೆ ಜಾರಿಗೆ ಸಂಬಂಧಪಟ್ಟಂತೆ ರಾಷ್ಟ್ರ ರಾಜಧಾನಿಯ ಜಂತರ್ ಮಂತರ್‌ನಲ್ಲಿ ತನ್ನ ಅನುಯಾಯಿಗಳೊಂದಿಗೆ ಉಪವಾಸ ಸತ್ಯಾಗ್ರಹವನ್ನು ಹಜಾರೆ ಕೈಗೊಂಡಿದ್ದರು. ಆ ಮೂಲಕ ಸರಕಾರದ ಮೇಲೆ ಒತ್ತಡ ಹೇರುವಲ್ಲಿ ಯಶಸ್ವಿಯಾಗಿದ್ದರು.
ಒಂದು ವೇಳೆ ತಾವು ಕೈಗೆಂಡಿರುವ ಉಪವಾಸ ಸತ್ಯಾಗ್ರಹವನ್ನು ಸರ್ಕಾರದ ವಿರುದ್ಧದ ಬೆದರಿಕೆ ತಂತ್ರ ಎಂದು ಯಾರದರೂ ಭಾವಿಸುವುದಾದರೆ ಮತ್ತೆ ಅದನ್ನೇ ಮಾಡಲು ನಾನು ಸಿದ್ಧನಾಗಿದ್ದೇನೆ ಎಂದವರು ತಿಳಿಸಿದ್ದಾರೆ.
ಇದರಿಂದ ಭ್ರಷ್ಟಾಚಾರ ವಿರುದ್ಧದ ಹೋರಾಟದಲ್ಲಿ ಎಲ್ಲ ವಿಭಾಗದವರಿಗೂ ಅನುಕೂಲವಾಗಲಿದೆ. ಹೀಗಾಗಿ ಹೋರಾಟ ಮುಂದುವರಿಸಲು ಸಿದ್ಧನಾಗಿದ್ದೇನೆ ಎಂದವರು ಹೇಳಿದರು.
ತಮ್ಮ ಉಪವಾಸಕ್ಕೆ ಅಷ್ಟೊಂದು ಜನಬೆಂಬಲ ಸಿಗಲಿದೆ ಎಂದು ಭಾವಿಸಲಿರಿಲ್ಲ. ಒಂದು ವೇಳೆ ಮೂರು ದಿನಗಳ ಕಾಲ ಉಪವಾಸ ಮುಂದುವರಿಸಿದರೆ ಸರಕಾರವೇ ಉರುಳಿ ಬೀಳುತಿತ್ತು ಎಂಬುದು ತಮಗೆ ಇನ್ನೂ ಅರ್ಥವಾಗಿಲ್ಲ ಎಂದವರು ತಿಳಿಸಿದರು.