ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಭಾರತ-ಪಾಕ್ ಸಹಜ ಸ್ಥಿತಿಗೆ ಮರಳಿದರೆ ಕೆಲಸ ಆಯ್ತು: ಸಿಂಗ್ (Manmohan Singh | Indo-Pak ties | Cricket World Cup | Pakistan)
ಭಾರತ ಮತ್ತು ಪಾಕಿಸ್ತಾನ ನಡುವಣ ಸಂಬಂಧವು ಸಹಜ ಸ್ಥಿತಿಗೆ ಮರಳಿದ್ದಲ್ಲಿ ಅಲ್ಲಿಗೆ ನನ್ನ ಕೆಲಸ ಮುಗಿಯಿತು ಎಂದು ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಅಭಿಪ್ರಾಪಯಪಟ್ಟಿದ್ದಾರೆ.

ಐದು ದಿನಗಳ ವಿದೇಶ ಪ್ರವಾಸ ಮುಗಿಸಿ ತವರಿಗೆ ಮರಳಿದ್ದ ಸಂದರ್ಭದಲ್ಲಿ ಜತೆಗಿದ್ದ ಪ್ರತಕರ್ತರು ಕೇಳಿದ ಪ್ರಶ್ನೆಗೆ ಸಿಂಗ್ ಈ ರೀತಿಯಾಗಿ ಉತ್ತರಿಸಿದರು. ಪಾಕಿಸ್ತಾನ ನಡುವಣ ಬಾಂಧವ್ಯವು ಸಹಜ ಸ್ಥಿತಿಗೆ ಮರಳಿದ್ದಲ್ಲಿ, ಈ ವಿಷಯದಲ್ಲಿ ನನ್ನ ಕೆಲಸ ಆಯ್ತು ಎಂದು ಅಭಿಪ್ರಾಯಪ್ಟಟಿದ್ದಾರೆ.

ಪಾಕಿಸ್ತಾನ ಜತೆಗಿನ ಬಾಂಧವ್ಯದಲ್ಲಿ ಯಾವೆಲ್ಲಾ ಐದು ವಿಚಾರಗಳನ್ನು ಗುರಿಯಾಗಿರಿಸಿದ್ದೀರಿ ಎಂಬುದಕ್ಕೆ, ಅದು ತುಂಬಾನೇ ಜಾಸ್ತಿಯಾಗಬಹುದು ಎಂದು ನಗುಮುಖದಿಂದ ಉತ್ತರಿಸಿದರು.

ಕಳೆದ ತಿಂಗಳಷ್ಟೇ ಏಕದಿನ ವಿಶ್ವಕಪ್ ಸೆಮಿಫೈನಲ್ ಪಂದ್ಯ ವೀಕ್ಷಣೆಗೆಗಾಗಿ ಪಾಕಿಸ್ತಾನ ಪ್ರಧಾನಿ ಯೂಸುಫ್ ರಾಜಾ ಗಿಲಾನಿ ಅವರನ್ನು ಆಮಂತ್ರಿಸಿದ್ದ ಪ್ರಧಾನಿ ಉಭಯ ದೇಶಗಳ ಸಂಬಂಧ ವೃದ್ಧಿಗೆ ಉತ್ತೇಜನ ನೀಡಿದ್ದರು.
ಇವನ್ನೂ ಓದಿ