ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಮೊದಲ ಹಂತದ ಚುನಾವಣೆ ಕಾಂಗ್ರೆಸ್‌ ಮೈತ್ರಿಕೂಟಕ್ಕೆ ನಿರ್ಣಾಯಕ (Bengal polls | Congress | Left Front government | Assembly elections)
ದೇಶದಲ್ಲಿ ಭಾರಿ ಕುತೂಹಲ ಕೆರಳಿಸಿರುವ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ಮೊದಲ ಹಂತದ ಮತದಾನವು ಸೋಮವಾರ ಆರಂಭಗೊಂಡಿದ್ದು, ಕಾಂಗ್ರೆಸ್ ಮೈತ್ರಿಕೂಟಕ್ಕೆ ನಿರ್ಣಾಯಕವೆನಿಸಲಿದೆ.

ಉತ್ತರ ಬಂಗಾಳದ ಆರು ಜಿಲ್ಲೆಗಳ 54 ಕ್ಷೇತ್ರಗಳಿಗೆ ಮೊದಲ ಹಂತದಲ್ಲಿ ಚುನಾವಣೆ ನಡೆಯಲಿದೆ. ಡಾರ್ಜೆಲಿಂಗ್, ನಾರ್ತ್ ದಿನಜ್‌ಪುರ, ಕೂಚ್ ಬೇಹಾರ್, ಉತ್ತರ ಮತ್ತು ದಕ್ಷಿಣ ದಿನಾಜ್‌ಪುರ್ ಮತ್ತು ಮಲ್ಡಾ ಜಿಲ್ಲೆಗಳಲ್ಲಿ ಇಂದು ಮತದಾನ ನಡೆಯಲಿದೆ.

ಆಡಳಿತಾರೂಢ ಎಡರಂಗ ಪಕ್ಷದ 11 ಸಚಿವುರುಗಳ ಭವಿಷ್ಯ ಇಂದು ನಿರ್ಧಾರವಾಗಲಿದ್ದು, ನಗರಭಿವೃದ್ಧಿ ಸಚಿವ ಅಶೋಕ್ ಭಟ್ಟಚಾರ್ಯ, ಪರಿಸರ ಸಚಿವ ಸೈಲೆನ್ ಸರ್ಕಾರ್ ಮತ್ತು ಮೀನುಗಾರಿಕಾ ಸಚಿವ ಕಿರಾನ್ ಮೊಯ್ ನಂದಾ ಇದರಲ್ಲಿ ಸೇರಿಕೊಂಡಿದ್ದಾರೆ.

ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಮತ್ತು ಕಾಂಗ್ರೆಸ್ ಮೈತ್ರಿಕೂಟವು ಮೊದಲ ಬಾರಿ ಬಂಗಾಳದಲ್ಲಿ ಐತಿಹಾಸಿಕ ಗೆಲುವು ದಾಖಲಿಸಲು ಅವಿರತ ಪ್ರಯತ್ನ ನಡೆಸಿದೆ. ಎಡರಂಗಳು ಕೂಡಾ ಅಧಿಕಾರ ಉಳಿಸಿಕೊಳ್ಳಲು ಭಾರಿ ಪ್ರಚಾರದಲ್ಲಿ ತೊಡಗಿದ್ದವು.

ಚುನಾವಣೆ ಹಿನ್ನಲೆಯಲ್ಲಿ ಭಾರಿ ಭದ್ರತೆ ಒದಗಿಸಲಾಗಿದ್ದು ಬಿರುಸಿನ ಮತದಾನ ನಡೆಯುತ್ತಿದೆ. ಒಟ್ಟು ಆರು ಹಂತಗಳಲ್ಲಾಗಿ ಚುನಾವಣೆ ನಡೆಯಲಿದೆ.
ಇವನ್ನೂ ಓದಿ