ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಆಂದೋಲನ ಮಾಡಿದ್ರೆ ಹೀರೋ ಆಗಲ್ಲ: ರಾಹುಲ್‌ಗೆ ಮೋದಿ ಕುಟುಕು (Narendra Modi | Hero | Rahul Gandhi | Anna Hazare | Corruption)
ಜನತೆಯ ಹಕ್ಕುಗಳಿಗಾಗಿ ಹೋರಾಡುವುದು ನಮ್ಮ ಕರ್ತವ್ಯ. ಅಣ್ಣಾ ಹಜಾರೆಯೇನೂ ಹೀಗೆ ಹೋರಾಟ ಮಾಡುವುದರಿಂದ 'ಹೀರೋ' ಆಗಲು ಹೊರಟಿಲ್ಲ ಎಂದು ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಾಹುಲ್ ಗಾಂಧಿಗೆ ಟಾಂಗ್ ನೀಡಿದ್ದಾರೆ.

ನ್ಯಾಯಮೂರ್ತಿ ಕೃಷ್ಣ ಅಯ್ಯರ್ ಅವರಿಗೆ ಬರೆದಿರುವ ಪತ್ರವೊಂದರಲ್ಲಿ ರಾಹುಲ್ ಗಾಂಧಿ ಅವರು, "ಭ್ರಷ್ಟಾಚಾರ ಕೊನೆಗೊಳಿಸಲು ನಾನು ಕೂಡ ಪ್ರಯತ್ನಿಸುತ್ತಿದ್ದೇನೆ, ಆದರೆ ನನಗೆ 'ಹೀರೋ' ಆಗುವ ಇರಾದೆಯೇನೂ ಇಲ್ಲ" ಎಂದು ಅಣ್ಣಾ ಹಜಾರೆ ಆಂದೋಲನವನ್ನು ಕುಟುಕಿದ್ದರು.

ಇದೀಗ ರಾಹುಲ್ ಗಾಂಧಿಯನ್ನು ಪರೋಕ್ಷವಾಗಿ ಟೀಕಿಸಿದ ಮೋದಿ, ಅಣ್ಣಾ ಹಜಾರೆಯವರು ಜನತೆಯ ಹಕ್ಕುಗಳಿಗಾಗಿ ಹೋರಾಡುತ್ತಿದ್ದಾರೆ. ಕೆಲವರು ಹಜಾರೆ ಗುಜರಾತ್ ಸರಕಾರವನ್ನು ಹೊಗಳಿದ್ದಕ್ಕಾಗಿ ಅವರನ್ನೇ ಗುರಿಯಾಗಿರಿಸಿ ಮಾತನಾಡುತ್ತಿದ್ದಾರೆ ಎಂದರು.

ಕೇಂದ್ರದ ಮೇಲೂ ಹರಿಹಾಯ್ದ ಮೋದಿ, ತನ್ನ ಸರಕಾರವು ಕೈಗೊಳ್ಳುತ್ತಿರುವ ಅಭಿವೃದ್ಧಿ ಕಾರ್ಯಗಳೆಲ್ಲವಕ್ಕೂ ಕೇಂದ್ರದ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರ ಅಡ್ಡಗಾಲು ಹಾಕುತ್ತಿದೆ. ಕೇಂದ್ರ ಸರಕಾರ ಸಹಕಾರ ನೀಡದಿದ್ದರೂ ಕೂಡ ಸಮಯಕ್ಕೆ ಸರಿಯಾಗಿ ವಿಭಿನ್ನ ಯೋಜನೆಗಳನ್ನು ಮಾಡಿ ಮುಗಿಸುತ್ತೇವೆ ಎಂದು ಅವರು ವಿಶ್ವಾಸದಿಂದ ನುಡಿದರು.

ಗುಜರಾತ್ ಉಳಿದ ರಾಜ್ಯಗಳಂತೆ ಕೇಂದ್ರದಿಂದ ಯಾವುದೇ ಪ್ರಯೋಜನಗಳನ್ನು ಪಡೆಯುತ್ತಿಲ್ಲ, ಅಷ್ಟು ಮಾತ್ರವಲ್ಲದೆ ರಾಜ್ಯದ ಯೋಜನೆಗಳಿಗೆ ಕೇಂದ್ರವು ಅಡ್ಡಿಯನ್ನು ಉಂಟು ಮಾಡುತ್ತಿದೆ ಎಂದರು ಮೋದಿ ವಿಷಾದದಿಂದ.

ಕೃಷಿ ಇಲಾಖೆಯಲ್ಲಿ ಶೇ.10 ಪ್ರಗತಿ ಸಾಧಿಸಿದ ಭಾರತದ ಏಕೈಕ ರಾಜ್ಯ ಗುಜರಾತ್ ಎಂದು ಮೋದಿ ಹಮ್ಮೆಯಿಂದ ಹೇಳಿಕೊಂಡರು.
ಇವನ್ನೂ ಓದಿ