ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಲೋಕಾಯುಕ್ತ ವಿಳಂಬ: ಮೋದಿ ವಿರುದ್ಧ ಗವರ್ನರ್‌ಗೆ ಕಾಂಗ್ರೆಸ್‌ ದೂರು (Narendra Modi | Lokayukta | Governor Dr Kamla Beniwal |Shaktisinh Gohil)
ಲೋಕಾಯುಕ್ತರನ್ನು ನೇಮಕ ಮಾಡುವಲ್ಲಿ ವಿಳಂಬ ನೀತಿ ಅನುಸರಿಸುತ್ತಿರುವ ಗುಜರಾತ್‌ ಮುಖ್ಯಮಂತ್ರಿ ನರೇಂದ್ರ ಮೋದಿ ಅವರ ವಿರುದ್ಧ ಸಂವಿಧಾನದ 355 ನೇ ಕಲಂ ಅಡಿಯಲ್ಲಿ ಕ್ರಮ ಕೈಗೊಳ್ಳುವಂತೆ ಕಾಂಗ್ರೆಸ್‌ ಪಕ್ಷದ ರಾಜ್ಯ ಘಟಕ ರಾಜ್ಯಪಾಲರಾದ ಡಾ.ಕಮಲಾ ಬೆನಿವಾಲ್‌ ಅವರನ್ನು ಒತ್ತಾಯಿಸಿದೆ.

ರಾಜ್ಯಪಾಲರು ನಿವೃತ್ತ ನ್ಯಾಯಮೂರ್ತಿ ದವೆ ಅವರನ್ನು ಲೋಕಾಯುಕ್ತರನ್ನಾಗಿ ನೇಮಿಸಲು ಶಿಫಾರಸು ಮಾಡಿದ್ದರೂ ಬೇರೊಬ್ಬರನ್ನು ನೇಮಕ ಮಾಡಲು ಸಚಿವ ಸಂಪುಟ ಅನುಮೋದನೆ ನೀಡಿದೆ ಎಂದು ಪ್ರತಿಪಕ್ಷದ ನಾಯಕ ಶಕ್ತಿಸಿನ್ಹ ಗೋಹಿಲ್‌ ಆಪಾದಿಸಿದ್ದಾರೆ.

ರಾಜ್ಯಪಾಲರು ಸಂವಿಧಾನದ 355 ಹಾಗೂ 356 ನೇ ಕಲಂ ಪ್ರಕಾರ ಮೋದಿ ಅವರ ವಿರುದ್ಧ ಸಾಂವಿಧಾನಿಕ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.

ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಹಾಗೂ ವಿಧಾನ ಸಭೆ ಪ್ರತಿಪಕ್ಷ ನಾಯಕರೊಂದಿಗೆ ಚರ್ಚಿಸಿದ ನಂತರ ಲೋಕಾಯುಕ್ತರನ್ನು ನೇಮಕ ಮಾಡಲು ಗುಜರಾತ್‌ ಲೋಕಾಯುಕ್ತ ಕಾಯಿದೆಯಲ್ಲಿ ರಾಜ್ಯಪಾಲರಿಗೆ ಅವಕಾಶವಿದೆ ಎಂದು ಗೋಹಿಲ್‌ ತಿಳಿಸಿದ್ದಾರೆ.

ಲೋಕಾಯುಕ್ತರ ನೇಮಕ ಮಾಡದೇ ಇರುವ ನರೇಂದ್ರ ಮೋದಿ ಅವರ ವಿರುದ್ಧ ಸಂವಿಧಾನದ 355ನೇ ಕಲಂ ಅಡಿಯಲ್ಲಿ ರಾಷ್ಟ್ರಪತಿ ಪ್ರತಿಭಾ ಪಾಟೀಲ್‌ ಅವರಿಗೆ ದೂರು ನೀಡುವಂತೆ ರಾಜ್ಯಪಾಲರಿಗೆ ಗೋಹಿಲ್‌ ಒತ್ತಾಯಿಸಿದ್ದಾರೆ.
ಇವನ್ನೂ ಓದಿ