ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ತಮಿಳುನಾಡಿನಲ್ಲಿ ಮಧ್ಯಂತರ ಚುನಾವಣೆ: ಸ್ವಾಮಿ ಭವಿಷ್ಯ
(Subramanian Swamy | Janata party | Tamil nadu Government | Elections)
ತಮಿಳುನಾಡಿನಲ್ಲಿ ಮಧ್ಯಂತರ ಚುನಾವಣೆ: ಸ್ವಾಮಿ ಭವಿಷ್ಯ
ಕೊಯಮತ್ತೂರು, ಶುಕ್ರವಾರ, 22 ಏಪ್ರಿಲ್ 2011( 13:22 IST )
ತಮಿಳುನಾಡಿನಲ್ಲಿ ರಚನೆಯಾಗಲಿರುವ ಹೊಸ ಸರಕಾರ 2013 ರಲ್ಲಿ ನಡೆಯಲಿರುವ ಲೋಕಸಭೆ ಚುನಾವಣೆಗೆ ಮುನ್ನವೇ ಪತನವಾಗಲಿದ್ದು, ಮಧ್ಯಂತರ ಚುನಾವಣೆ ನಡೆಯಲಿದೆ ಎಂದು ಹೇಳುವ ಮೂಲಕ ಜನತಾ ಪಕ್ಷದ ಅಧ್ಯಕ್ಷ ಸುಬ್ರಹ್ಮಣ್ಯನ್ ಸ್ವಾಮಿ ಅಚ್ಚರಿ ಮೂಡಿಸಿದ್ದಾರೆ.
ತಮಿಳುನಾಡು ವಿಧಾನ ಸಭೆಗೆ ಏ.13 ರಂದು ಚುನಾವಣೆ ನಡೆದಿತ್ತು. ಮೇ 13 ಕ್ಕೆ ಚುನಾವಣೆಯ ಫಲಿತಾಂಶ ಹೊರಬೀಳಲಿದೆ.
ಲೋಕಸಭೆ ಚುನಾವಣೆ ವೇಳೆಗೆ ಡಿಎಂಕೆ ಹಾಗೂ ಎಐಎಡಿಎಂಕೆ ಮಿತ್ರ ಪಕ್ಷಗಳು ಬೇರೆಯಾಗಲಿವೆ ಎಂದು ಸ್ವಾಮಿ ತಿಳಿಸಿದರು. 5 ರಾಜ್ಯಗಳಲ್ಲಿ ನಡೆದಿರುವ ಚುನಾವಣಾ ಫಲಿತಾಂಶ ರಾಷ್ಟ್ರ ರಾಜಕಾರಣದ ಮೇಲೂ ಗಂಭೀರ ಪರಿಣಾಮ ಬೀರಲಿದ್ದು, 2011 ರ ನವೆಂಬರ್ ಮತ್ತು 2012 ರ ಮಾರ್ಚ್ ವೇಳೆಗೆ ಲೋಕಸಭೆಗೂ ಮಧ್ಯಂತರ ಚುನಾವಣೆ ನಡೆಯುವ ಸಾಧ್ಯತೆಯಿದೆ ಎಂದು ಹೇಳಿದರು.
ಡಿಎಂಡಿಕೆ ಮುಖಂಡ ಹಾಗೂ ಚಿತ್ರನಟ ವಿಜಯ ಕಾಂತ್ ಮಧ್ಯಂತರ ಚುನಾವಣೆ ಸಂದರ್ಭದಲ್ಲಿ ಜಯಲಲಿತಾ ಅವರ ಮಿತ್ರಕೂಟವನ್ನು ತೊರೆಯುವ ಸಂಭವವಿದೆ ಎಂದು ಸ್ವಾಮಿ ಹೇಳಿದ್ದಾರೆ.
ಸುಪ್ರೀಂ ಕೋರ್ಟ್‌ನ ಕಣ್ಗಾವಲು ವಹಿಸಿರುವುದರಿಂದ 2 ಜಿ ಪ್ರಕರಣದ ತನಿಖೆ ಸಿಬಿಐಗೆ ಇದ್ದ ಅಡ್ಡಿ ಆತಂಕಗಳ ನಡುವೆಯೂ ವಿಚಾರಣೆ ಸರಿದಾರಿಯಲ್ಲಿ ಸಾಗುತ್ತಿದೆ ಎಂದು ಸ್ವಾಮಿ ತಿಳಿಸಿದ್ದಾರೆ.