ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಕಾರು ತಡೆದ ಪೊಲೀಸ್‌ ಕೈಯನ್ನೇ ಕಚ್ಚಿದ ಮಹಿಳೆ (Mobile Phone | Traffic Police | Rule Violation | women)
ಕಾರು ಚಾಲನೆ ಮಾಡುವ ಸಂದರ್ಭದಲ್ಲಿ ಮೊಬೈಲ್‌ನಲ್ಲಿ ಮಾತನಾಡುತ್ತಾ ಸಂಚಾರ ನಿಯಮ ಉಲ್ಲಂಘಿಸಿದ ಮಹಿಳೆಯೊಬ್ಬಳು ತನ್ನ ಕಾರನ್ನು ತಡೆದು ಡ್ರೈವಿಂಗ್‌ ಲೈಸೆನ್ಸ್‌ ಹಾಗೂ ವಾಹನದ ದಾಖಲೆ ಕೇಳಿದ ಟ್ರಾಫಿಕ್‌ ಪೊಲೀಸ್‌ ಕೈ ಕಚ್ಚಿದ ಘಟನೆ ನಗರದಲ್ಲಿ ಶುಕ್ರವಾರ ನಡೆದಿದೆ.

ಆ ಪ್ರದೇಶದ ನಿವಾಸಿ ಶಿಲ್ಪಿ ಸಂಚಾರ ನಿಯಮ ಉಲ್ಲಂಘಿಸಿದ್ದರಿಂದ ಈಕೆಯ ವಾಹನವನ್ನು ಟ್ರಾಫಿಕ್‌ ಪೊಲೀಸರು ತಡೆದು ನಿಲ್ಲಿಸಿದಾಗ ರೋಷಗೊಂಡ ಈ ಮಹಿಳೆ, ಡ್ರೈವಿಂಗ್‌ ಲೈಸೆನ್ಸ್‌ ಹಾಗೂ ಇತರೆ ದಾಖಲೆಗಳನ್ನು ನೀಡಲು ನಿರಾಕರಿಸಿ ಪರಾರಿಯಾಗಲು ಯತ್ನಿಸಿದಳು ಎಂದು ಕಾನ್‌ಸ್ಟೇಬಲ್‌ ಅಮರ್‌ಜಿತ್‌ ಸಿಂಗ್‌ ತಿಳಿಸಿದ್ದಾರೆ.

ಪರಾರಿಯಾಗಲೆತ್ನಿಸಿದ ಮಹಿಳೆಯ ಕಾರನ್ನು ಹೆಡ್‌ ಕಾನ್‌ಸ್ಟೇಬಲ್‌ ಓಂ ಪ್ರಕಾಶ್‌ ಕಾರು ತಡೆಯಲು ಯತ್ನಿಸಿದಾಗ ಆಕೆ ಅವರ ಕೈಯನ್ನು ಕಚ್ಚುವ ಮೂಲಕ ಅನುಚಿತವಾಗಿ ವರ್ತಿಸಿದ್ದಾಳೆ. ಆಕೆಯ ವಿರುದ್ಧ ಕೇಸು ದಾಖಲಾಗಿದೆ ಎಂದು ಅಮರ್‌ಜಿತ್‌ ಸಿಂಗ್‌ ಹೇಳಿದ್ದಾರೆ.
ಇವನ್ನೂ ಓದಿ