ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ದುಷ್ಪರಿಣಾಮ ಸಾಬೀತಾದಲ್ಲಿ ಎಂಡೋಸಲ್ಫಾನ್ ನಿಷೇಧ: ರಮೇಶ್ (Endosulfan | Health effects | Ban | Environment | Jairam Ramesh)
ದುಷ್ಪರಿಣಾಮ ಸಾಬೀತಾದಲ್ಲಿ ಎಂಡೋಸಲ್ಫಾನ್ ನಿಷೇಧ: ರಮೇಶ್
ನವದೆಹಲಿ, ಶನಿವಾರ, 23 ಏಪ್ರಿಲ್ 2011( 13:03 IST )
ಪರಿಸರವಾದಿಗಳು ಹಾಗೂ ವಿವಿಧ ರಾಜಕೀಯ ಪಕ್ಷಗಳಿಂದ ಎಂಡೋಸಲ್ಫಾನ್ ನಿಷೇಧಿಸುವಂತೆ ಒತ್ತಡ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಪರಿಸರ ಖಾತೆ ಸಚಿವ ಜೈರಾಮ್ ರಮೇಶ್,ಎಂಡೋಸಲ್ಫಾನ್ ಬಳಕೆಯಿಂದ ಆರೋಗ್ಯದ ಮೇಲೆ ದುಷ್ಪರಿಣಾಮವಾಗುವುದು ಖಚಿತವಾದಲ್ಲಿ ಅದನ್ನು ನಿಷೇಧಿಸಲಾಗುವುದು ಎಂದು ಹೇಳಿದ್ದಾರೆ.
ಕೇರಳ ರಾಜ್ಯದಲ್ಲಿ ಎಂಡೋಸಲ್ಫಾನ್ ನಿಷೇಧಿಸಲಾಗಿದೆ. ಕೇರಳ ಸರಕಾರದ ನಿರ್ಧಾರವನ್ನು ಗೌರವಿಸುತ್ತೇನೆ. ಎಂಡೋಸಲ್ಫಾನ್ ಬಳಕೆಯಿಂದ ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಕ್ಷ್ಯಾಧಾರಗಳು ದೊರೆತಲ್ಲಿ ರಾಷ್ಟ್ರಮಟ್ಟದಲ್ಲಿ ನಿಷೇಧಿಸಲಾಗುವುದು ಸಚಿವ ರಮೇಶ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಏತನ್ಮಧ್ಯೆ, ಎಂಡೋಸಲ್ಫಾನ್ ಪ್ರಮುಖ ಕೀಟನಾಶಕವಾಗಿದ್ದು, ಪರ್ಯಾಯವಾಗಿ ಪರಿಣಮಕಾರಿ ಕೀಟನಾಶಕಗಳು ಲಭ್ಯವಿಲ್ಲ ಎಂದು ಹೇಳಿದ್ದಾರೆ.
ಕೇರಳದ ಕಾಸರಗೋಡು ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಎಂಡೋಸಲ್ಫಾನ್ ದುಷ್ಪರಿಣಾಮ ಬೀರಿದೆ ಎನ್ನುವ ವರದಿಗಳು ಲಭ್ಯವಾಗಿದ್ದು, ಕೇಂದ್ರ ಸರಕಾರ ಎಂಡೋಸಲ್ಫಾನ್ ಬಳಕೆಯ ಪರಿಣಾಮಗಳ ಬಗ್ಗೆ ವಿಜ್ಞಾನಿಗಳು ಅಧ್ಯಯನ ನಡೆಸುತ್ತಿದ್ದಾರೆ ಎಂದು ವಿವರಣೆ ನೀಡಿದ್ದಾರೆ.
ಎಂಡೋಸಲ್ಫಾನ್ ಬಳಕೆ ನಿಷೇಧದ ವಿರುದ್ಧ ಹಲವು ಲಾಬಿಗಳು ಕಾರ್ಯನಿರ್ವಹಿಸುತ್ತಿವೆ. ಆದ್ದರಿಂದ, ಯಾವುದೇ ಲಾಬಿಯ ಮೋಹಕ್ಕೆ ಒಳಗಾಗದೆ, ಸತ್ಯ ಸಂಗತಿಯನ್ನು ಪರೀಕ್ಷಿಸಿದ ನಂತರ ಎಂಡೋಸಲ್ಫಾನ್ ನಿಷೇಧದ ಕುರಿತಂತೆ ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಹೇಳಿದ್ದಾರೆ.