ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಮೋದಿ ಸಭೆಯಲ್ಲಿ ಸಂಜೀವ್ ಭಟ್‌ ಇರಲಿಲ್ಲ: ಮಾಜಿ ಡಿಜಿಪಿ (post-Godhra riots | Gujarat | Sanjiv Rajendra Bhatt | K. Chakrabarthi)
PTI
ಗುಜರಾತ್‌ ಹಿಂಸಾಚಾರಕ್ಕೆ ಮುಖ್ಯಮಂತ್ರಿ ನರೇಂದ್ರ ಮೋದಿ ಪ್ರಚೋದನೆ ನೀಡಿದ್ದ ಸಭೆಯಲ್ಲಿ ನಾನು ಹಾಜರಿದ್ದೆ ಎಂದು ಐಪಿಎಸ್‌ ಅಧಿಕಾರಿ ಸಂಜೀವ್ ರವೀಂದ್ರ ಭಟ್‌ ನೀಡಿದ್ದ ಹೇಳಿಕೆಯನ್ನು ಆ ಸಂದರ್ಭದಲ್ಲಿ ಪೊಲೀಸ್‌ ಮಹಾ ನಿರ್ದೇಶಕರಾಗಿದ್ದ ಕೆ.ಚಕ್ರವರ್ತಿ ಅಲ್ಲಗಳೆದಿದ್ದಾರೆ.

ಮುಖ್ಯಮಂತ್ರಿ ನರೇಂದ್ರ ಮೋದಿ ಉನ್ನತಾಧಿಕಾರಿಗಳೊಂದಿಗೆ ನಡೆಸಿದ ಸಭೆಯಲ್ಲಿ ಐಪಿಎಸ್‌ ಅಧಿಕಾರಿ ಸಂಜೀವ್ ರವೀಂದ್ರ ಭಟ್‌ ಅವರು ಹಾಜರಿರಲಿಲ್ಲ ಎಂದು ತಾವು ಗುಜರಾತ್‌ ಹಿಂಸಾಚಾರದ ಕುರಿತು ತನಿಖೆ ನಡೆಸುತ್ತಿರುವ ವಿಶೇಷ ತನಿಖಾದಳಕ್ಕೆ ತಿಳಿಸಿರುವುದಾಗಿ ಹೇಳಿದ್ದಾರೆ.

ತಾವು ಈ ಕುರಿತು ವಿಚಾರಣೆ ನಡೆಸುವಂತೆ ವಿಶೇಷ ತನಿಖಾದಳ ಹಾಗೂ ಸುಪ್ರೀಂ ಕೋರ್ಟ್‌‌ಗೆ ತಿಳಿಸಿರುವುದಾಗಿ ಚಕ್ರವರ್ತಿ ಹೇಳಿದ್ದಾರೆ.

ಗುಜರಾತ್‌ ಹಿಂಸಾಚಾರದ ಕುರಿತು ಸುಪ್ರೀಂ ಕೋರ್ಟ್‌‌ಗೆ ಪ್ರಮಾಣಪತ್ರ ಸಲ್ಲಿಸಿದ್ದ ಭಟ್‌, ಗೋಧ್ರಾ ರೈಲು ಹತ್ಯಾಕಾಂಡದ ನಂತರ ಮುಖ್ಯಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಡಿಜಿಪಿ ಅವರೊಂದಿಗೆ ತಾವೂ ಭಾಗವಹಿಸಿದ್ದಾಗಿ ತಿಳಿಸಿದ್ದರು.

ಆ ಸಂದರ್ಭದಲ್ಲಿ ತಮ್ಮನ್ನು ರಾಜ್ಯ ಗುಪ್ತಚರ ವಿಭಾಗದ ಡಿಸಿಪಿಯಾಗಿ ನೇಮಿಸಿದ್ದು, ತಾವು ಡಿಜಿಪಿ ಅವರೊಂದಿಗೆ ಸಭೆಯಲ್ಲಿ ಭಾಗವಹಿಸಿದ್ದಾಗಿ ಭಟ್‌ ತಿಳಿಸಿದ್ದರು.

ಈ ಕುರಿತು ವಿಶೇಷ ತನಿಖಾ ದಳದ ಮುಂದೆ ವಿಚಾರಣೆಗೆ ಹಾಜರಾಗಿದ್ದ ಮುಖ್ಯಮಂತ್ರಿ ಮೋದಿ, ಭಟ್‌ ಅವರು 2002 ರಲ್ಲಿ ಕಿರಿಯ ಅಧಿಕಾರಿಯಾಗಿದ್ದ ಭಟ್‌ ಅವರು ಸಭೆಯಲ್ಲಿ ಭಾಗವಹಿಸಿರಲಿಲ್ಲ ಎಂದು ತಿಳಿಸಿದ್ದರು.

ಗುಜರಾತ್‌ ಹಿಂಸಾಚಾರದ ನಂತರ ಪೊಲೀಸ್‌ ಉನ್ನತಾಧಿಕಾರಿಗಳೊಂದಿಗೆ ಸಭೆ ನಡೆಸಿದ ಮೋದಿ, ಮುಸ್ಲಿಮರಿಗೆ ಪಾಠ ಕಲಿಸಲು ಹಿಂದೂಗಳಿಗೆ ಅವಕಾಶ ನೀಡುವಂತೆ ಪೊಲೀಸ್‌ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದರು ಎಂದು ಭಟ್‌ ಸುಪ್ರೀಂ ಕೋರ್ಟ್‌‌ಗೆ ಪ್ರಮಾಣಪತ್ರ ಸಲ್ಲಿಸಿದ್ದರು. ಸಿಬಿಐ ಮಾಜಿ ನಿರ್ದೇಶಕ ಆರ್‌.ಕೆ.ರಾಘವನ್‌ ನೇತೃತ್ವದ ವಿಶೇಷ ತನಿಖಾ ದಳ ಪ್ರಕರಣವನ್ನು ಮುಚ್ಚಿಹಾಕಲು ಯತ್ನಿಸುತ್ತಿದೆ ಎಂದು ಭಟ್‌ ಆಪಾದಿಸಿದ್ದರು.
ಇವನ್ನೂ ಓದಿ