ಯುಪಿಎ ಸರಕಾರ ವಿಶ್ವಾಸಮತ ಸಂದರ್ಭದಲ್ಲಿ ಸಂಸದರಿಗೆ ಲಂಚವನ್ನು ನೀಡಿದೆ ಎಂದು ಬಿಜೆಪಿ ಹಿರಿಯ ನಾಯಕ ಎಲ್.ಕೆ.ಅಡ್ವಾಣಿ ಟೀಕಾ ಪ್ರಹಾರ ನಡೆಸಿದ್ದಾರೆ.
ಮೇ 2004ರಿಂದ ಪ್ರಧಾನಿ ಹುದ್ದೆಯನ್ನು ಅಲಂಕರಿಸಿರುವ ಮನಮೋಹನ್ ಸಿಂಗ್, ಜುಲೈ 2008ರಲ್ಲಿ ಅನೈತಿಕವಾಗಿ ಸರಕಾರವನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಕಿಡಿಕಾರಿದ್ದಾರೆ.
ವಿಶ್ವಾಸಮತ ಸಂದರ್ಭದಲ್ಲಿ ಸಂಸದರಿಗೆ ಲಂಚವನ್ನು ನೀಡಿ ಸದನದಿಂದ ಹೊರಗುಳಿಯುವಂತೆ ಮಾಡಿ ವಿಶ್ವಾಸಮತವನ್ನು ಸಾಬೀತುಪಡಿಸಿತು. ಯುಪಿಎ ಸರಕಾರ ಬಹಿರಂಗವಾಗಿ ನಾಚಿಕೆಯಿಲ್ಲದೇ ಇಂತಹ ಘನ ಕಾರ್ಯಕ್ಕೆ ಕೈ ಹಾಕಿತು ಎಂದು ಅಡ್ವಾಣಿ ತಮ್ಮಅಧಿಕೃತ ಬ್ಲಾಗ್‌ನಲ್ಲಿ ಪ್ರಕಟಿಸಿದ್ದಾರೆ.
ಜಪಾನ್‌ನ ಫುಕುಶೀಮಾದಲ್ಲಿ ಸಂಭವಿಸಿದ ಪರಮಾಣು ದುರಂತದ ನಂತರವೂ ದೇಶದ ಪರಮಾಣು ಘಟಕಗಳ ಸುರಕ್ಷತೆಯ ಬಗ್ಗೆ ಸರಕಾರ, ಎಚ್ಚರಿಕೆಯ ಕ್ರಮಗಳನ್ನು ತೆಗೆದುಕೊಂಡಿಲ್ಲ ಎಂದು ಎಲ್.ಕೆ.ಅಡ್ವಾಣಿ ಅಸಮಧಾನ ವ್ಯಕ್ತಪಡಿಸಿದ್ದಾರೆ.