2002ರ ಗುಜರಾತ್ ದಂಗೆಯಲ್ಲಿ ಮುಖ್ಯಮಂತ್ರಿ ನರೇಂದ್ರ ಮೋದಿ ಅವರ ಭಾಗೀದಾರಿ ಕುರಿತು ಹಿರಿಯ ಐಪಿಎಸ್ ಅಧಿಕಾರಿ ಸಂಜೀವ್ ಭಟ್ ನೀಡಿರುವ ಹೇಳಿಕೆಯನ್ನು ಸ್ವಾಗತಿಸಿರುವ ಕೇಂದ್ರ ಗೃಹ ಸಚಿವ ಪಿ.ಚಿದಂಬರಂ, ಇದುವರೆಗೆ ಗಾಳಿಸುದ್ದಿಯಂತಿದ್ದ ಆಪಾದನೆಗಳ ಬಗ್ಗೆ ಜನ ಈಗ ಧೈರ್ಯ ವಹಿಸಿ ಬಾಯಿ ಬಿಡಲು ಮುಂದಾಗಿರುವುದರಿಂದ ತನಗೆ ಸಂತೋಷವಾಗಿದೆ ಎಂದಿದ್ದಾರೆ.
ಚುನಾವಣಾ ಪ್ರಚಾರಕ್ಕೆ ಆಗಮಿಸಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಭಟ್ ಅವರು ಹೇಳುವಂತೆ ಅವರು ಈ ಹೇಳಿಕೆಯನ್ನು ಹಿಂದೆಯೇ ಸುಪ್ರೀಂ ಕೋರ್ಟ್ ನೇಮಿಸಿದ್ದ ವಿಶೇಷ ತನಿಖಾ ತಂಡ (ಎಸ್ಐಟಿ)ಕ್ಕೆ ಹೇಳಿದ್ದರು. ಆದರೆ ಅದನ್ನು ಯಾರೂ ಗಂಭೀರವಾಗಿ ತೆಗೆದುಕೊಂಡಿರಲಿಲ್ಲ ಎಂದು ನುಡಿದರು.
ಈಗಿನ ಪರಿಸ್ಥಿತಿ ಗಮನಿಸಿದರೆ, ಗುಜರಾತಿನಲ್ಲಿ ಹೆಚ್ಚಿನವರು ಸತ್ಯ ಹೇಳುವ ಇಚ್ಛೆ ಹೊಂದಿದ್ದಾರೆ, ಆದರೆ ಹೇಳಲು ಭಯ ಪಡುತ್ತಿದ್ದರು ಎಂದ ಚಿದಂಬರಂ, ಈಗ ಭಯವಿಲ್ಲದೆ ಮನಸ್ಸಿನಲ್ಲಿರುವುದನ್ನು ಹೇಳಲು ಆರಂಭಿಸಿದ್ದಾರೆ ಎಂದು ಗೃಹ ಸಚಿವರು ಹೇಳಿದರು.