ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ವಿಕಿ ಕೇಬಲ್ ಬರೆದ ಕೆಲವರು ಕ್ಷಮೆ ಕೇಳಿದ್ದಾರೆ: ಚಿದಂಬರಂ (WikiLeaks | Cables | West Bengal Election 2011 | Chidambaram)
ವಿಕಿ ಕೇಬಲ್ ಬರೆದ ಕೆಲವರು ಕ್ಷಮೆ ಕೇಳಿದ್ದಾರೆ: ಚಿದಂಬರಂ
ಕೋಲ್ಕತಾ, ಮಂಗಳವಾರ, 26 ಏಪ್ರಿಲ್ 2011( 08:58 IST )
PTI
ಅಮೆರಿಕದ ರಾಜತಾಂತ್ರಿಕ ಕೇಬಲ್‌ಗಳು ಬಯಲಾಗಿರುವ ವಿಕಿಲೀಕ್ಸ್ ಕುರಿತು ತಡವಾಗಿ ಪ್ರತಿಕ್ರಿಯೆ ನೀಡಿರುವ ಕೇಂದ್ರ ಗೃಹ ಸಚಿವ ಪಿ.ಚಿದಂಬರಂ ಅವರು, ಈ ಕೇಬಲ್‌ಗಳನ್ನು ಬರೆದವರಲ್ಲಿ ಕೆಲವು, ಅವುಗಳು ಉಂಟು ಮಾಡಿದ ಇರಿಸುಮುರಿಸಿನ ಪರಿಸ್ಥಿತಿಯನ್ನು ಮನಗಂಡು, ಖಾಸಗಿಯಾಗಿ ಕ್ಷಮೆ ಕೇಳಿದ್ದಾಗೆ ಎಂದು ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು, ಈ ರಾಜತಾಂತ್ರಿಕ ವರದಿಗಳನ್ನು ಸಿದ್ಧಪಡಿಸಿದ ಕೆಲವರು ಖಾಸಗಿಯಾಗಿ ಕ್ಷಮೆ ಯಾಚಿಸಿದ್ದಾರೆ. ಆದರೆ ಅವರ ಹೆಸರು ಹೇಳಲು ನಾನು ಇಷ್ಟಪಡುವುದಿಲ್ಲ ಎಂದು ಹೇಳಿದರು.
ವಿಧಾನಸಭೆ ಚುನಾವಣೆಗಳು ನಡೆಯುತ್ತಿರುವ ಪಶ್ಚಿಮ ಬಂಗಾಳದಲ್ಲಿ ಕಾಂಗ್ರೆಸ್-ತೃಣಮೂಲ ಕಾಂಗ್ರೆಸ್ ಮೈತ್ರಿಕೂಟವು ಅಧಿಕಾರಕ್ಕೆ ಬರಬೇಕೆಂಬುದು ಅಮೆರಿಕದ ಇಚ್ಛೆ ಎಂಬ ಕುರಿತ ವಿಕಿ ಲೀಕ್ಸ್ ಕೇಬಲ್‌ಗಳನ್ನು ಉಲ್ಲೇಖಿಸಿ ಪ.ಬಂಗಾಳದ ಆಡಳಿತಾರೂಢ ಎಡರಂಗ ಅಧ್ಯಕ್ಷ ಬಿಮನ್ ಬೋಸ್ ಅವರು ಹೇಳಿದ್ದರು. ಇದಕ್ಕೆ ಸುದ್ದಿಗಾರರು ಪ್ರತಿಕ್ರಿಯೆ ಕೇಳಿದಾಗ ಚಿದಂಬರಂ ಈ ಮೇಲಿನ ಉತ್ತರ ನೀಡಿದ್ದರು.
ವಿಕಿಲೀಕ್ಸ್ ಕೇಬಲ್‌ಗಳು ಯಾವುದೇ ಸಭೆಯ ಸರ್ವಸಮ್ಮತ ಟಿಪ್ಪಣಿಗಳಲ್ಲ. ಅದು ಏನಾಯಿತು ಎಂಬುದರ ಕುರಿತು ಒಬ್ಬ ವ್ಯಕ್ತಿಯ ಅಭಿಪ್ರಾಯವಷ್ಟೇ. ಹೆಚ್ಚಿನ ಲೇಖಕರು (ಅಮೆರಿಕ ರಾಯಭಾರ ಕಚೇರಿ ಸಿಬ್ಬಂದಿ) ಅರ್ಥೈಸಿಕೊಳ್ಳುವ ಬಗ್ಗೆ ಅಜ್ಞಾನವಿದೆ. ಈ ಕೇಬಲ್‌ಗಳನ್ನು ನಾವು ತಿರಸ್ಕರಿಸಬೇಕು ಎಂದು ಅವರು ಹೇಳಿದರು.