ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಮೋದಿ ವಿರುದ್ಧ ಆರೋಪಿಸಿದ್ದ ಭಟ್‌ ಸ್ವತಃ ಕ್ರಿಮಿನಲ್‌ ! (Pali Bar association | NHRC| Narendra Modi | Sanjeev Bhatt | Gujarat High Court)
PTI
ಗೋಧ್ರಾ ಹಿಂಸಾಚಾರದಲ್ಲಿ ಮುಖ್ಯಮಂತ್ರಿ ನರೇಂದ್ರ ಮೋದಿ ಅವರ ಪಾತ್ರವಿದೆ ಎಂದು ಆಪಾದಿಸಿ ಸುಪ್ರೀಂಕೋರ್ಟ್‌‌ಗೆ ಪ್ರಮಾಣಪತ್ರ ಸಲ್ಲಿಸಿದ್ದ ಗುಜರಾತ್‌ ಐಪಿಎ‌ಸ್‌ ಅಧಿಕಾರಿ ಸಂಜೀವ್ ಭಟ್‌ ಅವರು ರಾಜಸ್ಥಾನದಲ್ಲಿ ವಕೀಲರೊಬ್ಬರ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಿದ ಅಂಶ ಬಯಲಿಗೆ ಬಂದಿದೆ.

ವಕೀಲರೊಬ್ಬರು ಮಾದಕ ದ್ರವ್ಯ ಹೊಂದಿದ್ದಾರೆ ಎಂದು ಸುಳ್ಳು ಕೇಸ್‌ ದಾಖಲಿಸಿದ್ದಕ್ಕೆ ಸಂಬಂಧಿಸಿದಂತೆ ರಾಜಸ್ಥಾನ ಪೊಲೀಸರು 2000 ದ ಏ.13 ರಂದು ಭಟ್‌ ವಿರುದ್ಧ ಜೈಪುರ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದರು. ಈ ಕುರಿತು ವಿಚಾರಣೆ ನಡೆಸಿದ್ದ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ, ಭಟ್‌ ಆರೋಪಿ ಎಂದು ತಿಳಿಸಿತ್ತು. ಪ್ರಕರಣದಲ್ಲಿ ಸಂತ್ರಸ್ತರಾಗಿದ್ದ ಸಮರ್‌ ಸಿಂಗ್‌ ರಾಜ್‌ಪುರೋಹಿತ್‌ ಅವರಿಗೆ 1 ಲಕ್ಷ ರೂ. ಪರಿಹಾರ ನೀಡುವಂತೆ ಭಟ್‌ಗೆ ಸೂಚಿಸಿತ್ತು. ಪಾಲಿ ಮೂಲದ ರಾಜ ಪುರೋಹಿತ್‌ ಅವರಿಗೆ ಗುಜರಾತ್‌ ಸರಕಾರ ಕಳೆದ ಜ.25 ರಂದು ಪರಿಹಾರ ನೀಡಿತ್ತು.

ನರೇಂದ್ರ ಮೋದಿ ವಿರುದ್ಧ ಸುಪ್ರೀಂ ಕೋರ್ಟ್‌‌ಗೆ ಪ್ರಮಾಣಪತ್ರ ಸಲ್ಲಿಸುವ ಮೂಲಕ ಹೀರೋನಂತೆ ಬಿಂಬಿಸಿಕೊಳ್ಳುತ್ತಿರುವ ಸಂಜಯ ಭಟ್‌ ಒಬ್ಬ ಸಂಚುಕೋರ ಹಾಗೂ ರಾಜಪುರೋಹಿತ್‌ ಪ್ರಕರಣ ಸೇರಿದಂತೆ ಅನೇಕ ಅಪರಾಧ ಪ್ರಕರಣಗಳಲ್ಲಿ ಅವರು ಆರೋಪಿಯಾಗಿದ್ದಾರೆ ಎಂದು ಪಾಲಿ ಸಂಸದ ಹಾಗೂ ಪಾಲಿ ವಕೀಲರ ಸಂಘದ ಅಧ್ಯಕ್ಷ ಪುಷ್ಪಕುಮಾರ್‌ ಜೈನ್‌ ಮಂಗಳವಾರ ಆಪಾದಿಸಿದ್ದಾರೆ.

ಬಾರ್‌ ಅಸೋಸಿಯೇಷನ್‌ ಪರವಾಗಿ ಮಾತನಾಡಿದ ಜೈನ್‌, ಗುಜರಾತ್‌ ಹೈಕೋರ್ಟ್‌‌ನಲ್ಲಿ ಹಿಂಬಡ್ತಿ ಪಡೆದು ನಂತರ ಅಮಾನತಿಗೊಳಗಾಗಿದ್ದ ಮಾಜಿ ನ್ಯಾಯಾಧೀಶ ಆರ್‌.ಆರ್‌. ಜೈನ್‌ ಹಾಗೂ ಭಟ್‌ ಆತ್ಮೀಯ ಸ್ನೇಹಿತರಾಗಿದ್ದು, ರಾಜಪುರೋಹಿತ್‌ ವಿರುದ್ಧ ಸಂಚು ರೂಪಿಸಿದ್ದರು ಎಂದು ಆಪಾದಿಸಿದರು.

ಗುಜರಾತ್‌ ಹೈ ಕೋರ್ಟ್‌ ಜಡ್ಜ್‌ ಆಗಿದ್ದ ಜೈನ್‌ ಅವರ ಸಹೋದರಿ ಅಮ್ರಿಬಾಯಿ ಮಾಲೀಕತ್ವದಲ್ಲಿದ್ದ ವರ್ಧಮಾನ್‌ ಮಾರ್ಕೆಟ್‌ನಲ್ಲಿ ಮಳಿಗೆಯೊಂದನ್ನು ರಾಜಪುರೋಹಿತ್‌ ಬಾಡಿಗೆ ಪಡೆದಿದ್ದರು. ಬಾಡಿಗೆದಾರರಾಗಿದ್ದ ಅವರನ್ನು ಬಿಡಿಸುವ ಉದ್ದೇಶದಿಂದ ಅಮ್ರಿಬಾಯಿ ತಮ್ಮ ಚಿಕ್ಕಪ್ಪ ಫೂತರ್‌ ಮಲ್‌ ಹಾಗೂ ಐಪಿಎಸ್‌ ಅಧಿಕಾರಿ ಸಂಜಯ ಭಟ್‌ ಅವರೊಂದಿಗೆ ಸೇರಿ ಪುರೋಹಿತ್‌ರನ್ನು ಅಪಹರಿಸಿದ್ದರು ಎಂದು ಜೈನ್‌ ಆಪಾದಿಸಿದರು.

ಸಂಜಯ ಭಟ್‌ ಅವರನ್ನು ಕೇಂದ್ರ ಗೃಹ ಸಚಿವ ಪಿ.ಚಿದಂಬರಂ ಹೊಗಳಿರುವುದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಬಿಜೆಪಿ ಮಾಜಿ ಸಂಸದ ಜೈನ್‌, ಸುಪ್ರೀಂ ಕೋರ್ಟ್‌‌ನಲ್ಲಿ ಅಮಾನತಿಗೊಳಗಾಗಿದ್ದ ವಕೀಲ ಆರ್‌.ಆರ್‌.ಜೈನ್‌ ಪರ ಚಿದಂಬರಂ ವಕಾಲತ್ತು ವಹಿಸಿದ್ದರಿಂದ ಚಿದಂಬರಂ ಅವರಿಗೆ ಈ ವಿಷಯದ ಚೆನ್ನಾಗಿ ತಿಳಿಸಿದೆ. ಗುಜರಾತ್‌ ನಲ್ಲಿ ಹಲವಾರು ಕ್ರಿಮಿನಲ್‌ ಪ್ರಕರಣಗಳಲ್ಲಿ ಭಾಗಿಯಾಗಿರುವವರನ್ನು ಹೊಗಳುತ್ತಿರುವ ಚಿದಂಬರಂ ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಇವನ್ನೂ ಓದಿ