ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಮೋದಿ ಹೊಗಳಿಕೆ: ಈಗ ಕಾಂಗ್ರೆಸ್‌ ಮುಖಂಡನ ಸರದಿ (Narendra Modi | Congress | Vishnu Wagh | Prais)
PTI
ಗುಜರಾತ್‌ ಮುಖ್ಯಮಂತ್ರಿ ನರೇಂದ್ರ ಮೋದಿ ವಿರುದ್ಧ ಕಾಂಗ್ರೆಸ್‌ ಯಾವಾಗಲೂ ತೆಗಳುವುದು ಸರ್ವೇ ಸಾಮಾನ್ಯ. ಆದರೆ ಗೋವಾ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ವಿಷ್ಣು ವಾಘ್‌ ಅವರು ಫೇಸ್‌ ಬುಕ್‌ನಲ್ಲಿ ಮೋದಿ ಅವರನ್ನು ಶ್ಲಾಘಿಸಿದ್ದಾರೆ.

ಪ್ರಶಸ್ತಿ ವಿಜೇತ ಬರಹಗಾರ, ಕವಿ, ನಾಟಕಕಾರರೂ ಆಗಿರುವ ವಾಘ್‌ ಏ.23ರಂದು ಫೇಸ್‌ ಬುಕ್‌ನಲ್ಲಿ ಬರೆದಿರುವ ಕಾಮೆಂಟ್‌ ಒಂದರಲ್ಲಿ, ನರೇಂದ್ರ ಮೋದಿ ಅವರೊಬ್ಬ ಉತ್ತಮ ಮುಖ್ಯಮಂತ್ರಿ ಎಂದು ಹೊಗಳಿದ್ದಾರೆ. ಮಾತ್ರವಲ್ಲದೇ ಹಿರಿಯ ಮುಖಂಡರಾದ ಎಲ್‌.ಕೆ.ಆಡ್ವಾಣಿ, ನಿತಿನ್‌ ಗಡ್ಕರಿ ಹಾಗೂ ಅರುಣ್‌ ಜೇಟ್ಲಿ ಅವರ ಮೇಲೆ ತಮಗಿರುವ ಗೌರವವನ್ನು ಹೊರಗೆಡಹಿದ್ದಾರೆ.

ಮೋದಿ ಅವರಿಗೆ ಅಮೆರಿಕದ ಪ್ರಶಸ್ತಿ ಬೇಕಾಗಿಲ್ಲ, ಅಮೆರಿಕ ದುರುಳ ದೇಶ ಎಂಬುದರಲ್ಲಿ ಎರಡು ಮಾತಿಲ್ಲ ಎಂದು ಆಪಾದಿಸಿರುವ ವಾಘ್‌, ಮೋದಿ ಉತ್ತಮ ಹಾಗೂ ಉತ್ಸಾಹಿ ಮುಖ್ಯಮಂತ್ರಿ ಎಂದು ಶ್ಲಾಘಿಸಿದ್ದಾರೆ.

ಬಿಜೆಪಿ ಬೆಂಬಲಿಗ ದುರ್ಗಾದಾಸ್‌ ಕಾಮತ್‌ ಅವರು ಫೇಸ್‌ ಬುಕ್‌ ನಲ್ಲಿ ರಚಿಸಿರುವ 'ಮೋದಿ ವಿರುದ್ಧ ಸಂಚು ನಡೆಸುತ್ತಿರುವ ಕಾಂಗ್ರೆಸ್‌ ಪಕ್ಷವನ್ನು ನಾನು ಖಂಡಿಸುತ್ತೇನೆ ' ಎಂಬ ಪುಟದಲ್ಲೇ ವಾಘ್‌ ಅವರು ಈ ಕಾಮೆಂಟ್‌ ಬರೆದಿರುವುದು ವಿಶೇಷ.

ವಿಕಿ ಲೀಕ್ಸ್ ವರದಿ ಮಾಡಿದಂತೆ, ಅಮೆರಿಕದ ಮುಂಬೈ ರಾಯಭಾರಿ ಮೈಕೇಲ್‌ ಎಸ್‌.ಓವನ್‌ ಅವರು 2006ರಲ್ಲಿ ತಮ್ಮ ದೇಶಕ್ಕೆ ರವಾನಿಸಿದ ಮಾಹಿತಿಯಲ್ಲಿ 'ಮೋದಿ ಅವರು ತಮ್ಮನ್ನು ರಾಜ್ಯದಲ್ಲಿ ಉದ್ಯಮದ ಉತ್ತೇಜಕ, ವಾಣಿಜ್ಯ ವಹಿವಾಟಿಗೆ ಪ್ರೇರಕ , ಕಾನೂನು ಮತ್ತು ಸುವ್ಯವಸ್ಥೆಯ ಪರಿಪಾಲಕ ಹಾಗೂ ಹಿಂದೂಗಳ ಹಿತ ರಕ್ಷಕನಾಗಿ ಮತ್ತು ಭ್ರಷ್ಟಾಚಾರ ರಹಿತ ಉತ್ತಮ ಆಡಳಿತಗಾರ ಎಂದು ಎಂದು ಯಶಸ್ವಿಯಾಗಿ ಬಿಂಬಿಸಿಕೊಂಡಿದ್ದಾರೆ' ಎಂಬುದನ್ನೇ ವಾಘ್‌ ಅವರು ಅಮೆರಿಕ ಪ್ರಮಾಣ ಪತ್ರ ಎಂದು ತಮ್ಮ ಕಾಮೆಂಟ್‌ನಲ್ಲಿ ಉಲ್ಲೇಖಿಸಿದ್ದರು.

ಈ ಕುರಿತು ಇನ್ನೊಂದು ಕಡೆ ಮಾಡಿರುವ ಕಾಮೆಂಟ್‌ನಲ್ಲಿ, ಮೋದಿ ಪರವಾಗಿ ತಾವು ನೀಡಿದ್ದ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.

ವಾಘ್‌, ಗೋವಾದ ಮುಖ್ಯಮಂತ್ರಿ ಹಾಗೂ ವಾರ್ತಾ ಸಚಿವ ದಿಗಂಬರ ಕಾಮತ್‌ ಅವರರಿಗೆ ಮಾಧ್ಯಮ ಸಲಹೆಗಾರರಾಗಿದ್ದಾರೆ. ಕಾಮತ್‌ ಕಳೆದ ಏಪ್ರಿಲ್‌ನಲ್ಲಿ 'ಮೋದಿ ನನಗೆ ಉತ್ತಮ ಸ್ನೇಹಿತ' ಎಂದು ಹೇಳುವ ಮೂಲಕ ವಿವಾದ ಸೃಷ್ಟಿಸಿರುವುದು ಇಲ್ಲಿ ಉಲ್ಲೇಖಾರ್ಹ
ಇವನ್ನೂ ಓದಿ