ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » 'ಲೋಕಪಾಲದಿಂದ ಭ್ರಷ್ಟಾಚಾರದ ಪೂರ್ಣ ನಿಗ್ರಹ ಅಸಾಧ್ಯ' (Jan Lokpal Bill | Corruption | Anna Hazare | JS Verma)
PTI
ಭ್ರಷ್ಟ್ರಾಚಾರ ನಿಗ್ರಹಕ್ಕಾಗಿ ಪ್ರಸ್ತಾಪಿತ ಜನ ಲೋಕಪಾಲ ಮಸೂದೆಯಿಂದ ದೇಶದಲ್ಲಿರುವ ಭ್ರಷ್ಟಾಚಾರವನ್ನು ತಡೆಗಟ್ಟಲು ಸಾಧ್ಯವಿಲ್ಲ ಎಂದು ಸಮ್ಮೇಳನವೊಂದರಲ್ಲಿ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ನ್ಯಾಯಾಲಯದ ಮಾದರಿಯಲ್ಲಿ ಕಾರ್ಯನಿರ್ವಹಿಸುವ ಹಾಗೂ ಭ್ರಷ್ಟಾಚಾರ ನಿಗ್ರಹಕ್ಕಾಗಿ, ಜನ ಲೋಕಪಾಲ್‌ ಮಸೂದೆ ರಚಿಸುವಂತೆ ಅಣ್ಣಾ ಹಜಾರೆ ಅವರು ಉಪವಾಸ ಸತ್ಯಾಗ್ರಹ ನಡೆಸಿದ ಫಲವಾಗಿ ಪ್ರಧಾನಿ ಮನಮೋಹನ ಸಿಂಗ್‌ ಅವರ ಸರಕಾರದ ಮೇಲೆ ತೀವ್ರ ಒತ್ತಡ ಬಂದಿತ್ತು.

ಅಣ್ಣಾ ಹಜಾರೆ ಅವರು ಐದು ದಿನಗಳ ಕಾಲ ನಡೆಸಿದ ಉಪವಾಸ ಸತ್ಯಾಗ್ರಹದ ಹಿನ್ನೆಲೆಯಲ್ಲಿ ಜಂಟಿ ಕರಡು ರಚನಾ ಸಮಿತಿ ಅಸ್ತಿತ್ವಕ್ಕೆ ಬಂದಿದ್ದು, ಜುಲೈನಲ್ಲಿ ನಡೆಯುವ ಸಂಸತ್‌ ಅಧಿವೇಶನದಲ್ಲಿ ಮಸೂದೆ ಮಂಡನೆಯಾಗುವ ಸಾಧ್ಯತೆಯಿದೆ. ನ್ಯಾಯಮೂರ್ತಿಗಳು, ಸಚಿವರು, ಅಧಿಕಾರಿಗಳು ಈ ಮಸೂದೆಯ ವ್ಯಾಪ್ತಿಗೆ ಬರಲಿದ್ದಾರೆ.

ಜನಲೋಕಪಾಲ್‌ ಮಸೂದೆ ಭ್ರಷ್ಟಾಚಾರ ನಿಯಂತ್ರಿಸಲು ಸಹಕಾರಿಯಾಗಿದೆ. ಆದರೆ ಇದೇ ಪೂರ್ಣ ಪ್ರಮಾಣದ ಪರಿಹಾರವಾಗಲಾರದು ಎಂದು ಸುಪ್ರೀಂ ಕೋರ್ಟ್‌ ನಿವೃತ್ತ ಮುಖ್ಯ ನ್ಯಾಯಮೂರ್ತಿ ಜೆ.ಎಸ್‌.ವರ್ಮಾ ಅಭಿಪ್ರಾಯಪಪಟ್ಟಿದ್ದಾರೆ.

'ಲೋಕಪಾಲ ಮಸೂದೆ ಕೇಂದ್ರೀಕೃತ ವ್ಯವಸ್ಥೆಯಾಗುತ್ತದೇ ಹೊರತು ತಳಮಟ್ಟದಿಂದ ಭ್ರಷ್ಟಾಚಾರ ನಿಗ್ರಹಿಸಲು ಸಾಧ್ಯವಿಲ್ಲ ಎಂದು ಸಮಾವೇಶದಲ್ಲಿ ತಜ್ಷರು ಅಭಿಪ್ರಾಯಪಟ್ಟರು.

'ಜನಲೋಕಪಾಲ್‌ ಮಸೂದೆ ಉನ್ನತ ಮಟ್ಟದಲ್ಲಿರುವವರು ಅಕ್ರಮಗಳಿಂದ ಪಾರಾಗಲು ಸಾಧ್ಯವಿಲ್ಲ ಎಂಬುದರ ಕುರಿತು ಸ್ಪಷ್ಟ ಸಂದೇಶ ನೀಡುತ್ತದೆ. ಭ್ರಷ್ಟಾಚಾರದ ವಿರುದ್ಧ ದನಿ ಎತ್ತುವವರ ರಕ್ಷಣೆಗೂ ನಾವು ಕ್ರಮ ಕೈಗೊಳ್ಳುವುದು ಅಗತ್ಯ, ಲಂಚ ನೀಡುವವರಿಂದಲೂ ಮುಕ್ತಿ ದೊರಕಿಸಬೇಕು' ಎಂದು ಫಿಫ್ತ್‌ ಪಿಲ್ಲರ್‌ ಸಂಸ್ಥೆಯ ವಿಜಯ್‌ ಆನಂದ್‌ ಅಭಿಪ್ರಾಯಪಟ್ಟಿದ್ದಾರೆ.
ಇವನ್ನೂ ಓದಿ