ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಈಗಲಾದ್ರೂ ತಪ್ಪು ತಿದ್ಕೊಳ್ಳಿ: ಕಾಂಗ್ರೆಸ್‌ಗೆ ಆಡ್ವಾಣಿ (Congress | Cash for votes | Advani | Wikileaks)
ದೇಶದ ಇತಿಹಾಸದಲ್ಲೇ ಕಪ್ಪು ಚುಕ್ಕೆಯಾಗಿದ್ದ 'ಓಟಿಗಾಗಿ ನೋಟು' ಪ್ರಕರಣದಲ್ಲಿ ಸಂಸದರನ್ನು ಖರೀದಿ ಮಾಡಲಾಗಿತ್ತು ಎಂದು ವಿಕಿಲೀಕ್ಸ್‌ ಕೂಡ ವಿವರ ಬಹಿರಂಗ ಪಡಿಸಿದ್ದು, ಈಗಲಾದರೂ ಕಾಂಗ್ರೆಸ್ ಎಚ್ಚೆತ್ತುಕೊಂಡು ತನ್ನ ತಪ್ಪುಗಳನ್ನು ತಿದ್ದಿಕೊಳ್ಳಬೇಕು ಎಂದು ಬಿಜೆಪಿ ಮುಖಂಡ ಎಲ್‌.ಕೆ.ಆಡ್ವಾಣಿ ಹೇಳಿದರು.

ಗುರುವಾರ ಬೆಂಗಳೂರಿನಲ್ಲಿ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಆಡ್ವಾಣಿ, 2008ರಲ್ಲಿ ಸಂಸತ್‌ನಲ್ಲಿ ವಿಶ್ವಾಸಮತ ಯಾಚನೆ ಸಂದರ್ಭದಲ್ಲಿ ಕಾಂಗ್ರೆಸ್‌ ತಮ್ಮ ಸರಕಾರದ ಪರ ಮತ ಚಲಾಯಿಸಲು ಸಂಸದರನ್ನು ಖರೀದಿಸಿತ್ತು ಎಂದು ಆಪಾದಿಸಿದರು.

ತನಗೆ ದೊರೆತ ಮಾಹಿತಿ ಪ್ರಕಾರ, ಯಾವ ಸಂಸದರನ್ನು 'ಖರೀದಿಸ'ಬಹುದು, ಯಾವ ಸಂಸದರು ಲೋಕಸಭಾ ಕ್ಷೇತ್ರ ಪುನರ್ವಿಂಸಗಡಣೆ ಸಂದರ್ಭದಲ್ಲಿ ಕ್ಷೇತ್ರವನ್ನು ಕಳೆದುಕೊಂಡು ಅಸಮಾಧಾನಗೊಂಡಿದ್ದಾರೆ ಎಂಬುದರ ಕುರಿತು ವಿಶ್ವಾಸ ಮತ ಯಾಚನೆ ಸಂದರ್ಭದಲ್ಲಿ ವಿಚಾರಣೆ ನಡೆಸಿತ್ತು ಎಂದು ಆಡ್ವಾಣಿ ತಿಳಿಸಿದ್ದಾರೆ.

ಅಂದು, ತಮ್ಮ ಸಂಸದರ ಖರೀದಿಗಾಗಿ ನೀಡಲಾಗಿದ್ದ ನೋಟಿನ ಕಟ್ಟುಗಳನ್ನು ಬಿಜೆಪಿ ಸಂಸದರು ಸಂಸತ್ತಿನಲ್ಲಿ ಪ್ರದರ್ಶಿಸಿದ್ದನ್ನು ನೆನಪಿಸಿಕೊಂಡ ಆಡ್ವಾಣಿ, ಈ ಬಗ್ಗೆ ಸತ್ಯಾಂಶ ತಿಳಿಯುವ ಬದಲು ಕೆಲವರು ಬಿಜೆಪಿಯೇ ಸಂಸತ್‌ನ ಘನತೆಗೆ ಧಕ್ಕೆಯುಂಟು ಮಾಡಿತು ಎಂದು ಆಪಾದಿಸಿದರು. ಇನ್ನೂ ಕೆಲವರು ಸಂಸತ್‌ನ ನಿಯಮಗಳ ಉಲ್ಲಂಘನೆ ಎಂದೂ ಹೇಳಿದ್ದರು. ಇದು ತಪ್ಪು ಎತ್ತಿ ತೋರಿಸಿದವರನ್ನೇ ಶಿಕ್ಷಿಸುವಂತಾದ ಪರಿಸ್ಥಿತಿ ಎಂದು ಅವರು ವ್ಯಾಖ್ಯಾನಿಸಿದರು.

ಅಂತೆಯೇ, ವಿಕಿಲೀಕ್ಸ್ ವರದಿಗಳನ್ನು ಊಹಾಪೋಹ ಎಂದು ಟೀಕಿಸಿದ ಜಗತ್ತಿನ ಏಕೈಕ ರಾಷ್ಟ್ರ ಭಾರತ. ಬೇರೆ ಯಾವುದೇ ದೇಶಗಳೂ ಈ ವರದಿಯ ನಿಖರತೆಯನ್ನು ಇದುವರೆಗೆ ಪ್ರಶ್ನಿಸಿಲ್ಲ. ಅದು ಹೊರಗೆಡಹಿದ ಸತ್ಯಾಂಶಗಳನ್ನು ಕಾಂಗ್ರೆಸ್ ನೇತೃತ್ವದ ಯುಪಿಎ ಸಾರಾಸಗಟಾಗಿ ತಿರಸ್ಕರಿಸಿರುವುದು ವಿಪರ್ಯಾಸ ಎಂದೂ ಆಡ್ವಾಣಿ ಟೀಕಿಸಿದರು.
ಇವನ್ನೂ ಓದಿ