ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಚಿರಂಜೀವಿ ಮೇಲೆ ಮೊಟ್ಟೆ ಕಲ್ಲು ಎಸೆದ ಜಗನ್‌ ಬೆಂಬಲಿಗರು (K Chiranjeevi | Praja Rajyam | Greeted with Eggs | Slippers | Pulivendula)
PTI
ಪುಲಿವೇಂದುಲದಲ್ಲಿ ಕಾಂಗ್ರೆಸ್‌ ಪಕ್ಷದ ಪರವಾಗಿ ಶುಕ್ರವಾರ ಪ್ರಚಾರ ನಡೆಸುತ್ತಿದ್ದ ಖ್ಯಾತ ಚಿತ್ರನಟ ಹಾಗೂ ಪ್ರಜಾರಾಜ್ಯಂ ಮುಖಂಡ ಚಿರಂಜೀವಿ ಅವರ ಮೇಲೆ ವೈಎಸ್‌ಆರ್‌ ಕಾಂಗ್ರೆಸ್‌ ಸದಸ್ಯರು ಮೊಟ್ಟೆ, ಕಲ್ಲು, ಕೋಲು ಹಾಗೂ ಚಪ್ಪಲಿ ತೂರಿದ್ದರಿಂದ ಕೆಲಕಾಲ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು.

ಪುಲಿವೇಂದುಲದ ಮದ್ದನೂರು ವೃತ್ತದಲ್ಲಿ ಈ ಘಟನೆ ನಡೆದಿದ್ದು, ಪರಿಸ್ಥಿತಿಯನ್ನು ನಿಯಂತ್ರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿ, ದುಷ್ಕರ್ಮಿಗಳನ್ನು ವಶಕ್ಕೆ ತೆಗೆದುಕೊಂಡರು.

ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿಗಳಾದ ಡಿ.ಎಲ್‌.ವಿವೇಕಾನಂದ ರೆಡ್ಡಿ, ಚಿತ್ರ ನಟ ಚಿರಂಜೀವಿ ಅವರೊಂದಿಗೆ ಪುಲಿವೇಂದುಲಕ್ಕೆ ಚುನಾವಣಾ ಪ್ರಚಾರಕ್ಕೆ ಆಗಮಿಸಿದಾಗ ಇದ್ದಕ್ಕಿದ್ದಂತೆ ವೇದಿಕೆಯತ್ತ ಮೊಟ್ಟೆಗಳ ಸುರಿಮಳೆಯಾಯಿತು. ಇದಾದ ನಂತರ ಅಭ್ಯರ್ಥಿಗಳು ಮದ್ದನೂರು ವೃತ್ತಕ್ಕೆ ಪ್ರವೇಶಿಸಿದಾಗ ಚಪ್ಪಲಿ ಮತ್ತು ಕಲ್ಲು ಹಾಗೂ ಕೋಲುಗಳ ತೂರಾಟ ನಡೆಯಿತು.

ಈ ಘಟನೆಯನ್ನು ಖಂಡಿಸಿದ ಚಿರಂಜೀವಿ, 'ನಾನು ವೈ.ಎಸ್‌.ರಾಜಶೇಖರ ರೆಡ್ಡಿ ಅವರ ಸಿದ್ಧಾಂತಗಳನ್ನು ಅನುಷ್ಠಾನಗೊಳಿಸಲು ಕಾಂಗ್ರೆಸ್‌ ಸೇರಿದೆ' ಆದರೆ ಇಂತಹಾ ಸ್ವಾಗತವನ್ನು ನಿರೀಕ್ಷಿಸಿರಲಿಲ್ಲ ಎಂದು ಹೇಳಿದರು. 'ಚುನಾವಣೆಯ ನಂತರ ಜಯಗಳಿಸಿ ನಿಮ್ಮ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುವರಿಗೆ ಮತ ನೀಡುತ್ತೀರೋ ಅಥವಾ ಗೆದ್ದ ನಂತರ ಬೆಂಗಳೂರಿಗೆ ಹೋಗಿ ಕೂಡುವವರಿಗೆ ಮತ ನೀಡುತ್ತೀರೋ, ಆಯ್ಕೆ ನಿಮಗೇ ಬಿಟ್ಟ ವಿಚಾರ' ಎಂದು ಮತದಾರರಿಗೆ ಹೇಳಿದರು.

ಜಗನ್‌, ತಮ್ಮ ತಂದೆಯ ಅಂತ್ಯಕ್ರಿಯೆಗೆ ಮುನ್ನವೇ ಮುಖ್ಯಮಂತ್ರಿಯಾಗಲು ಕಾಂಗ್ರೆಸ್‌ ಶಾಸಕರ ಬೆಂಬಲ ಕೋರಿದ್ದರು.ಈ ಸಂದರ್ಭದಲ್ಲಿ, ಸ್ವಲ್ಪ ತಾಳ್ಮೆಯಿಂದಿರುವಂತೆ ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಹೇಳಿದ್ದರು.ಇದು ತಮಗಾದ ಅಪಮಾನ ಎಂದು ಭಾವಿಸಿದ ಜಗನ್‌ ಹೊಸ ಪಕ್ಷ ರಚಿಸಿ ಚುನಾವಣೆಗೆ ಮುಂದಾಗಿದ್ದಾರೆ ಎಂದು ಚಿರಂಜೀವಿ ಆಪಾದಿಸಿದರು.
ಇವನ್ನೂ ಓದಿ