ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಲಂಚ ಆರೋಪ ಸಾಬೀತಾದ್ರೆ ಶಿವಸೇನೆಗೆ ಗುಡ್‌ಬೈ: ಠಾಕ್ರೆ (Shiv Sena supremo | Bal Thackeray | Narayan Rane | Jaitapur Nuclear Power project)
ಜೈತಾಪುರದಲ್ಲಿ ಅಣುಸ್ಥಾವರ ನಿರ್ಮಾಣಕ್ಕೆ ತಡೆಯೊಡ್ಡಲು ಶಿವಸೇನೆ 500 ಕೋಟಿ ರೂ. ಲಂಚ ಪಡೆದಿದೆ ಎಂದು ಮಹಾರಾಷ್ಟ್ರ ಕೈಗಾರಿಕಾ ಸಚಿವ ನಾರಾಯಣ ರಾಣೆ ಅವರ ಆಪಾದನೆಗೆ ಶಿವಸೇನಾ ವರಿಷ್ಟ ಬಾಳ ಠಾಕ್ರೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಲಂಚ ಪಡೆದಿದ್ದು ಸಾಬೀತಾದರೆ ಶಿವಸೇನೆ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದು ತಿರುಗೇಟು ನೀಡಿದ್ದಾರೆ.

ರಾಣೆ ಆರೋಪಕ್ಕೆ ಶಿವಸೇನೆ ಮುಖವಾಣಿ ಸಾಮ್ನಾದಲ್ಲಿ ಪ್ರತಿಕ್ರಿಯಿಸಿರುವ ಠಾಕ್ರೆ ತಮ್ಮ ವಿರುದ್ಧ ಆರೋಪ ಸಾಬೀತಾದರೆ ಅಧ್ಯಕ್ಷ ಸ್ಥಾನವನ್ನು ತ್ಯಜಿಸುತ್ತೇನೆ. ಆರೋಪ ಸಾಬೀತಾಗದಿದ್ದರೆ ರಾಣೆ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವರೇ ಎಂದು ಸವಾಲೆಸೆದಿದ್ದಾರೆ.

ನಾರಾಯಣ ರಾಣೆ ಅವರನ್ನು ಬೆಂಬಲಿಸುತ್ತಿರುವ ಮಹಾರಾಷ್ಟ್ರ ಮುಖ್ಯಮಂತ್ರಿ ಪ್ರಥ್ವಿರಾಜ್‌ ಚೌಹಾಣ್ ಅವರನ್ನೂ ಠಾಕ್ರೆ ತರಾಟೆಗೆ ತೆಗೆದುಕೊಂಡಿದ್ದಾರೆ. ಚವ್ಹಾಣ್‌ ಮೆದುಳಿಲ್ಲದ ಹಾಗೂ ಅಸಮರ್ಥ ಮುಖ್ಯಮಂತ್ರಿ ಎಂದು ಠಾಕ್ರೆ ಕಟುವಾಗಿ ಟೀಕಿಸಿದ್ದಾರೆ.
ಇವನ್ನೂ ಓದಿ