ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಅಯೋಧ್ಯೆ; ವಿವಾದಿತ ಸ್ಥಳದಲ್ಲಿಯೇ ಮಂದಿರ-ಮಸೀದಿ ನಿರ್ಮಾಣ? (Temple-mosque at Ayodhya site | Sunni Waqf Board | Ram Janmabhoomi | Hanuman Garhi)
ಅಯೋಧ್ಯೆ ರಾಮ ಜನ್ಮಭೂಮಿ ವಿವಾದವನ್ನು ನ್ಯಾಯಾಲಯದ ಹೊರಗೆ ಸೌಹಾರ್ದಯುತವಾಗಿ ಪರಿಹರಿಸಲು ಹಿಂದೂ ಹಾಗೂ ಮುಸ್ಲಿಂ ಖಂಡರು ಪರಿಹಾರ ಸೂತ್ರವೊಂದನ್ನು ಸಿದ್ಧಪಡಿಸಿದೆ. ಈ ನಿಟ್ಟಿನಲ್ಲಿ ವಿವಾದಿತ 70 ಎಕರೆ ಪ್ರದೇಶದಲ್ಲಿ ಮಂದಿರ ಹಾಗೂ ಮಸೀದಿ ನಿರ್ಮಿಸಲಾಗುವುದು. ಆದರೆ ಮಂದಿರ ಹಾಗೂ ಮಸೀದಿಯ ನಡುವೆ 100 ಅಡಿ ಎತ್ತರದ ಗೋಡೆ ನಿರ್ಮಾಣವಾಗಲಿದೆ.

ಕಳೆದ ಸೆ.30ರಂದು ಅಯೋಧ್ಯೆ ರಾಮ ಜನ್ಮ ಭೂಮಿ ವಿವಾದ ಕುರಿತು ಅಲಹಾಬಾದ್‌ ಹೈಕೋರ್ಟ್‌ ತೀರ್ಪು ನೀಡಿದ್ದ ಹಿನ್ನೆಲೆಯಲ್ಲಿ ಮಾತುಕತೆ ನಡೆದಿತ್ತು. ಈ ಸಂದರ್ಭದಲ್ಲಿ ಹಿಂದೂಗಳ ಪರವಾಗಿ ಹನುಮಾನ್‌ ಗಾರಿ ದೇವಾಲಯದ ಪೂಜಾರಿ ಹಾಗೂ ಅಕ್ಷರ ಪರಿಷತ್‌ ಮುಖಂಡ ಮಹಾಂತ್ ಜ್ಞಾನದಾಸ್‌ ಹಾಗೂ ಮುಸ್ಲಿಂ ಮುಖಂಡ ಹಮೀದ್‌ ಅನ್ಸಾರಿ ಅವರು ವಿವಾದ ಇತ್ಯರ್ಥಕ್ಕಾಗಿ ನಡೆಸಿದ ಎರಡನೇ ಸುತ್ತಿನ ಮಾತುಕತೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ.

ಅಯೋಧ್ಯೆ ವಿವಾದ ಇತ್ಯರ್ಥ ಕುರಿತು ಮೇ 15ರಂದು ಅಕ್ಷರ ಪರಿಷತ್‌ ಸಭೆ ನಡೆಯಲಿದ್ದು, ನಿರ್ಮೋಹಿ ಅಕ್ಷರ ಸಂಸ್ಥೆಯ ಸದಸ್ಯರೂ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಮಹಾಂತ್ ಜ್ಞಾನದಾಸ್‌ ತಿಳಿಸಿದ್ದಾರೆ.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಮಹಾಂತ್ ಜ್ಞಾನದಾಸ್‌, ರಾಮ ಜನ್ಮಭೂಮಿ ಸೌಹಾರ್ದಯುತ ಇತ್ಯರ್ಥ ಕುರಿತು ನಾವು ಎಲ್ಲ ಹಿಂದೂ ಧಾರ್ಮಿಕ ಮುಖಂಡರೊಂದಿಗೆ ಮಾತುಕತೆ ನಡೆಸಿದ್ದೇವೆ. ಭಾರತೀಯ ಜನತಾ ಪಕ್ಷ ಹಾಗೂ ವಿಶ್ವ ಹಿಂದೂ ಪರಿಷತ್‌ನವರಿಗೆ ರಾಮ ಮಂದಿರ ನಿರ್ಮಾಣವಾಗುವುದು ಬೇಕಿಲ್ಲ. ಈ ವಿಷಯವನ್ನೇ ನೆಪವಾಗಿಟ್ಟುಕೊಂಡು ಬಿಜೆಪಿ ಹಾಗೂ ವಿಎಚ್‌ಪಿಗಳೆರಡೂ ಹಿಂದೂ ಹಾಗೂ ಮುಸ್ಲಿಮರ ನಡುವೆ ಕೋಮು ಸೌಹಾರ್ದತೆ ಕೆಡಿಸಲು ಯತ್ನಿಸುತ್ತಿವೆ ಎಂದು ಆಪಾದಿಸಿದರು.

ಅಯೋಧ್ಯೆ ರಾಮಜನ್ಮ ಭೂಮಿ ಕುರಿತು ಅಲಹಾಬಾದ್‌ ಹೈಕೋರ್ಟ್‌ ನೀಡಿರುವ ತೀರ್ಪು ಪ್ರಶ್ನಿಸಿ ಸುಪ್ರೀಂಕೋರ್ಟ್‌‌ಗೆ ಅರ್ಜಿ ಸಲ್ಲಿಸಿರುವ ಸುನ್ನಿ ವಕ್ಫ್‌ ಬೋರ್ಡ್‌‌ನ ಅನ್ಸಾರಿ, ಸುನ್ನಿ ವಕ್ಫ್‌ ಬೋರ್ಡ್‌ ನಿರ್ಧಾರದಂತೆ ನ್ಯಾಯಾಲಯದ ಹೊರಗೆ ಇತ್ಯರ್ಥ ಮಾಡಿಕೊಳ್ಳುವುದು ಕೂಡ ನ್ಯಾಯಾಂಗದ ಒಂದು ಭಾಗವಾಗಿದೆ ಎಂದು ತಿಳಿಸಿದರು.
ಇವನ್ನೂ ಓದಿ